ಬೆಂಗಳೂರು: ಲೋಕಸಭೆ ಚುನಾವಣೆ ನಿಮಿತ್ತ ಇಂದು ನಡೆಯುತ್ತಿರುವ ಕರ್ನಾಟಕದ 2ನೇ ಹಂತದ ಮತದಾನ ಬಿರುಸಿನಿಂದ ಸಾಗಿರುವಂತೆಯೇ ಅತ್ತ ಕೆಲ ಮತದಾರರು ತಾವು ಮತದಾನ ಮಾಡುತ್ತಿರುವ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಮತದಾನದ ಗೌಪ್ಯತೆಯನ್ನು ಮುರಿದಿದ್ದಾನೆ.
ಹೌದು. ರಾಯಚೂರು ಹಾಗೂ ಭಟ್ದಳದಲ್ಲಿ ಈ ಘಟನೆ ನಡೆದಿದ್ದು ಬಿಜೆಪಿ ಕಾರ್ಯಕರ್ತನೋರ್ವ ತನ್ನ ಪಕ್ಷ ನಿಷ್ಠೆ ತೋರಿಸಲು ಹೋಗಿ ಇದೀಗ ಪೇಚಿಗೆ ಸಿಲುಕಿದ್ದಾನೆ.
ಅಂತೆಯೇ ಭಟ್ಕಳದಲ್ಲೂ ಇಂತಹುದೇ ಘಟನೆ ಬೆಳಕಿಗೆ ಬಂದಿದ್ದು, ಮತಗಟ್ಟೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಿದ ವಿಡಿಯೋವನ್ನು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡು ಆ ವಿಡಿಯೋವನ್ನು ಆತ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾನೆ.
ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರನಾಯಕ್ ಪರವಾಗಿ ಆತ ಮತ ಚಲಾಯಿಸಿದ್ದು, ಅದೇ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವ ಮೂಲಕ ಮತದಾನದ ಗೌಪ್ಯತೆಯನ್ನು ಮುರಿದಿದ್ಜಾನೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ಈ ಕುರಿತ ಸುದ್ದಿ ತಿಳಿದ ಬೆನ್ನಲ್ಲೇ ಚುನಾವಣಾ ಆಧಿಕಾರಿಗಳು ದೂರು ದಾಖಲಿಸಿದ್ದು, ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದಾರೆ. ಒಂದು ವೇಳೆ ವಿಡಿಯೋ ಅಪ್ಲೋಡ್ ಮಾಡಿದ ವ್ಯಕ್ತಿ ಸಿಕ್ಕರ ಆತನ ಮತ ಅನೂರ್ಜಿತಗೊಳ್ಳುದಷ್ಟೇ ಅಲ್ಲದೇ ಆತನ ವಿರುದ್ಧವೂ ಅಧಿಕಾರಿಗಳು ಕಾನಾನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಸಾಮಾನ್ಯವಾಗಿ ಮತಗಟ್ಟೆಗಳಲ್ಲಿ ಮೊಬೈಲ್ ಬಳಕೆಗೆ ನಿಷೇಧವಿದ್ದರೂ, ಮತಗಟ್ಟೆಗೆ ಮೊಬೈಲ್ ತರಬಹುದು. ಆದರೆ ಬಳಕೆ ಮಾಡುವಂತಿಲ್ಲ. ಆದರೆ ಇದನ್ನು ದುರುಪಯೊಗ ಪಡಿಸಿಕೊಳ್ಳುವ ಕೆಲ ಕಿಡಿಕೇಡಿಗಳು ಮತದಾನದ ಗೌಪ್ಯತೆಯನ್ನು ಹಾಳು ಮಾಡುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics