ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ನಾಮಪತ್ರ ಸಲ್ಲಿಸಿದ್ದು ತಮ್ಮಲ್ಲಿ 10 ಕೋಟಿಯ 48 ಲಕ್ಷದ 72 ಸಾವಿರದ 668 ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಯಿರುವುದಾಗಿ ಘೋಷಿಸಿಕೊಂಡಿದ್ದಾರೆ.
2014ರ ಲೋಕಸಭೆ ಚುನಾವಣೆಗೆ ಮುನ್ನ ತಮ್ಮಲ್ಲಿ ಒಟ್ಟು ಆಸ್ತಿ ಮೌಲ್ಯ 7 ಕೋಟಿಯ 20 ಲಕ್ಷದ 89 ಸಾವಿರದ 452 ರೂಪಾಯಿಗಳಿರುವುದಾಗಿ ಘೋಷಿಸಿಕೊಂಡಿದ್ದರು.
2014ರಲ್ಲಿ ತಮ್ಮ ಬಳಿ 2 ಕೋಟಿಯ 10 ಲಕ್ಷ ರೂಪಾಯಿ ಆಸ್ತಿಯ ಕೃಷಿಯೇತರ ಭೂಮಿಯಿದೆ ಎಂದು ಘೋಷಿಸಿಕೊಂಡಿದ್ದ ಶೋಭಾ ಕರಂದ್ಲಾಜೆ ಈ ಬಾರಿ ಕೇವಲ 10 ಲಕ್ಷ ರೂ ಮೌಲ್ಯದ ಕೃಷಿಯೇತರ ಭೂಮಿ ಹೊಂದಿರುವುದಾಗಿ ಹೇಳಿದ್ದಾರೆ. 2014ರಲ್ಲಿ ಯಾವುದೇ ವಸತಿ ಹೊಂದಿರಲಿಲ್ಲ. 2015ರಲ್ಲಿ ಬೆಂಗಳೂರಿನ ಚಿಕ್ಕಮಾರನಹಳ್ಳಿ ಬಳಿ 2 ಕೋಟಿಯ 7 ಲಕ್ಷದ 97 ಸಾವಿರದ 090 ರೂಪಾಯಿಗಳ ಮನೆಯನ್ನು ಖರೀದಿಸಿದ್ದರು. ಅದರ ಮಾರುಕಟ್ಟೆ ಬೆಲೆ ಇಂದು 3 ಕೋಟಿಯಾಗಿದೆ.