ಕರ್ನಾಟಕ

ಅಭ್ಯರ್ಥಿಗಳೇ ಆಸ್ತಿ ಘೋಷಣೆ ಮಾಡುವಾಗ ಹುಷಾರ್: ಹದ್ದಿನ ಕಣ್ಣಿಟ್ಟಿದೆ ಐಟಿ ಇಲಾಖೆ

Sumana Upadhyaya
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ರಾಜಕೀಯ ಅಭ್ಯರ್ಥಿಗಳು ತಮ್ಮ ಆಸ್ತಿಗಳ ಘೋಷಣೆ ಮಾಡುವ ಸಂದರ್ಭದಲ್ಲಿ ಜಾಗರೂಕರಾಗಿರಬೇಕು. ನಾಮಪತ್ರ ಸಲ್ಲಿಕೆ ವೇಳೆ ಸಲ್ಲಿಸಿದ ಅಫಿಡವಿಟ್ಟಿನ ಬಗ್ಗೆ ಆದಾಯ ತೆರಿಗೆ ಇಲಾಖೆ ಸೂಕ್ಷ್ಮವಾಗಿ ಗಮನಿಸಲಿದೆ. ಅಲ್ಲದೆ ಆದಾಯ ತೆರಿಗೆ ಸಲ್ಲಿಕೆಯ ದಾಖಲೆಗಳ ಜೊತೆ ಪರಿಶೀಲಿಸಲಿದೆ.
ಕರ್ನಾಟಕ ಮತ್ತು ಗೋವಾ ಪ್ರಾಂತ್ಯದ ಆದಾಯ ತೆರಿಗೆ ಇಲಾಖೆಯ ಪ್ರಧಾನ ಮುಖ್ಯ ಚುನಾವಣಾಧಿಕಾರಿ ಬಿ ಆರ್ ಬಾಲಕೃಷ್ಣ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಇಲಾಖೆ ತನ್ನದೇ ಆದ ಗುಪ್ತಚರ ಸಿಬ್ಬಂದಿ ಮೂಲಕ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಏನಾದರೂ ನಗದು ಮತ್ತು ವಸ್ತುಗಳ ಚಲನವಲನವಾಗುತ್ತದೆಯೇ ಎಂದು ಗಮನಿಸಲಿದ್ದಾರೆ ಎಂದು ಹೇಳಿದರು.
ಇಲ್ಲಿಯವರೆಗೆ ರಾಜ್ಯದಲ್ಲಿ ಮೂರು ಶೋಧ ಕಾರ್ಯಗಳನ್ನು ನಡೆಸಲಾಗಿದ್ದು 2.37 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಒಂದು ನಮ್ಮದೇ ಗುಪ್ತಚರ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಾಗಿದ್ದು 1.67 ಕೋಟಿ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೆ ತಿಳಿಸಿದೆ.
SCROLL FOR NEXT