ಮಂಡ್ಯ: ಲೋಕಸಭಾ ಚುನಾವಣೆ ಮತದಾನಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಇತ್ತ ಚುನಾವಣಾ ಆಯೋಗ ಅಭ್ಯರ್ಥಿಗಳಿಗೆ ಕ್ರಮ ಸಂಖ್ಯೆ ನೀಡಿದ್ದು, ಮಂಡ್ಯದಲ್ಲಿ ನಿಖಿಲ್ ಕುಮಾರ ಸ್ವಾಮಿ ಅವರಿಗೆ 1 ನೇಕ್ರಮ ಸಂಖ್ಯೆ ನೀಡಿರುವ ಆಯೋಗ ಸುಮಲತಾ ಅಂಬರೀಶ್ ಅವರಿಗೆ 20ನೇ ಕ್ರಮ ಸಂಖ್ಯೆ ನೀಡಿದೆ.
ಲೋಕಸಭಾ ಚುನಾವಣಾ ಕಣದಲ್ಲಿ ಅಭ್ಯರ್ಥಿಗಳಿಗೆ ಇವಿಎಂನಲ್ಲಿ ಸುಮಲತಾ ಅಂಬರೀಶ್ ಅವರಿಗೆ ಕೊನೆಯವರಲ್ಲಿ 3ನೇ ಯವರಾಗಿದ್ದು, ನಿಖಿಲ್ ಕುಮಾರಸ್ವಾಮಿ ಅವರ ಹೆಸರು ಮೊದಲ ಸ್ಥಾನದಲ್ಲಿದೆ.
ಅಂತೆಯೇ ಸುಮಲತಾ ಸುಮಲತಾ ಅಂಬರೀಶ್ ಹೆಸರಿನ ಮೊದಲಿಗೆ ಮತ್ತು ನಂತರದಲ್ಲಿ ಕೊನೆಯವರಾಗಿ ಇನ್ನಿಬ್ಬರು ಸುಮಲತಾ ಹೆಸರಿನ ಪಕ್ಷೇತರ ಅಭ್ಯರ್ಥಿಗಳು ಇದ್ದಾರೆ. ಇನ್ನು ಈ ಬಾರಿ ಚುನಾವಣೆಯಲ್ಲಿ ಅಭ್ಯರ್ಥಿಗಳ ಚಿನ್ಹೆಯೊಂದಿಗೆ ಅವರ ಭಾವಚಿತ್ರಗಳೂ ಇರುವುದು ವಿಶೇಷ. ಇವಿಎಂನಲ್ಲಿ ಈ ಬಾರಿ ಅಭ್ಯರ್ಥಿಗಳ ಫೋಟೋವು ಇರುವುದರಿಂದ ಮತದಾರರಿಗೆ ಅಷ್ಟೊಂದು ಗೊಂದಲ ಆಗುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics