ಮಗನ ಜತೆ ಜೀವನ್ ಶೆಟ್ಟಿ 
ಲೇಖನಗಳು

ನಿನ್ನಂಥ ಅಪ್ಪ ಇಲ್ಲ !

ಅಮ್ಮನ ಮಡಿಲಿನ ಸುಖಕ್ಕೆ ಸಾಟಿಯಿಲ್ಲದಿದ್ದರೂ 'ಅಪ್ಪ' ಒಂದು ಆತ್ಮೀಯ ಸಂಬಂಧ! ಅಪ್ಪನ ತೋರ್ಪಡಿಕೆ ಇಲ್ಲದ ಪ್ರೀತಿ, ನಡೆವ ಹಾದಿ...

ಅಮ್ಮನ ಮಡಿಲಿನ ಸುಖಕ್ಕೆ ಸಾಟಿಯಿಲ್ಲದಿದ್ದರೂ 'ಅಪ್ಪ' ಒಂದು ಆತ್ಮೀಯ ಸಂಬಂಧ! ಅಪ್ಪನ ತೋರ್ಪಡಿಕೆ ಇಲ್ಲದ ಪ್ರೀತಿ, ನಡೆವ ಹಾದಿ ಮಕ್ಕಳ ಮೇಲೆ ಗಂಭೀರ ಪ್ರಭಾವ ಬೀರುವುದರಲ್ಲಿ ಎರಡು ಮಾತಿಲ್ಲ. ಇದಕ್ಕೆ ನಾನಾಗಲಿ ನನ್ನ ಮಗನಾಗಲಿ ಹೊರತಲ್ಲ. ಅದರಲ್ಲೂ ಸಣ್ಣವರಿರುವಾಗ ನಮಗೆಲ್ಲಾ ಅಪ್ಪನೇ ಹೀರೊ ! ಮಾಡೆಲ್ ಹೇಳ್ತಾರಲ್ಲ ಹಾಗೆ.
 
ಜೀವ ಸವೆದು ಶಿಕ್ಷಣ ಕೊಡಿಸುವತ್ತ ಮೊದಲ ಆದ್ಯತೆ ಕೊಟ್ಟ ನನ್ನ ಪಪ್ಪನ ಸಂಸಾರ ಪ್ರೀತಿ ಅಂದ್ರೆ ಅದೇ ಇರಬೇಕು. ಶಿಕ್ಷಣವೇ ಬದುಕಿನ ದಾರಿ ತೋರಿಸಬಲ್ಲುದು ಎಂಬುವುದನ್ನು ಬಲವಾಗಿ ನಂಬಿದವರು ಅವರು. ಶಾಲೆಗೆ ಹೋಗ್ತಿರುವಾಗ ಇದು ನಮಗೆ ಗಮನಕ್ಕೆ ಬರಲಿಲ್ಲ. ನಾವು ಚಿತ್ರಕಲೆ, ಸಂಗೀತ ಮುಂತಾದ ಇತರ ಚಟುವಟಿಕೆಗಳ ಹುಚ್ಚು ಬೆಳೆಸಿಕೊಂಡರೂ ಹೆಚ್ಚು ಪ್ರೋತ್ಸಾಹಿಸುವ ತಂಟೆಗೆ ಅವರು ಕೈ ಹಾಕಿಲ್ಲ. ಅದನ್ನೇ ವೃತ್ತಿಯನ್ನಾಗಿಸಿ ಸಂಪಾದಿಸುವುದು ಅಷ್ಟರಲ್ಲೇ ಇದೆ ಎಂಬ ವಾಸ್ತವವನ್ನು ಅರಿತವರು.

ಬಾಲ್ಯದಲ್ಲಿ ಅಪ್ಪನೊಂದಿಗಿನ ಒಡನಾಟವೆಲ್ಲಾ ಮಸುಕು ಮಸುಕಾಗಿದ್ದರೂ ಅವರ ಕೆಲವು ಗುಣಗಳು ನಮ್ಮೊಂದಿಗೆ ವಿಲೀನವಾಗಿ ನೆನಪಾಗಿ ಕಾಡುತ್ತವೆ. ಅವರು ಇಷ್ಟ ಪಟ್ಟು ಊಟದ ಜತೆ ತಿನ್ನುತ್ತಿದ್ದ ಮಾವು, ಹೋಟೆಲ್ ಪ್ರೀತಿ ಮತ್ತು ತರುತ್ತಿದ್ದ ಮಾಸಿಕ , ವಾರ ಪತ್ರಿಕೆಗಳು ನನ್ನಲ್ಲೂ ಮುಂದುವರಿಕೆಯಾಗಿದೆ. ಅವರು ಬಿಟ್ಟು ಹೋದ ಇಂಥ ಹಲವಾರು ಅನುವಂಶೀಯತೆಯ ಕುರುಹುಗಳನ್ನು ಹಿರಿಯ ತಲೆಮಾರಿನವರು ಗುರುತಿಸಿ ಹೇಳುವಾಗ ಹೆಮ್ಮೆ ಅನಿಸುತ್ತದೆ.

ಹಾಗೇ ಅಪ್ಪ ಅನ್ನಿಸಿಕೊಳ್ಳುವ ಇನ್ನೊಂದು ಮುಖ ನನ್ನ ಮಗನಿಂದ ! ತುಂಬಾ ಆಪ್ತ ಮತ್ತು ಜವಾಬ್ದಾರಿಯುತ ಸ್ಥಾನ ಅದು. ನಮ್ಮ ಹಳೇ ವಿಚಾರಗಳು ಮತ್ತು ನಮ್ಮ ಮಕ್ಕಳ ಹೊಸ ಆಲೋಚನೆಗಳ ದ್ವಂದ್ವ ಲೋಕದಲ್ಲಿ ವಿಹರಿಸುವ ಕಾಲಘಟ್ಟ ! ನಾನು ಒಮ್ಮೊಮ್ಮೆ ಕೆಲವು ಹಳೆಯ ಕನ್ನಡ ಹಾಡುಗಳನ್ನು ಕೇಳುವ ಪರಿಪಾಠ ಇಟ್ಕೊಂಡಿದ್ದೇನೆ. ಅವ ಅವುಗಳನ್ನು ಆಲಿಸಿ ಇಂದಿನ ಹಾಡುಗಳಿಗಿಂತ ಅರ್ಥಪೂರ್ಣ ವಾಗಿದೆ ಅಂದಾಗ ತುಂಬಾ ಹೆಮ್ಮೆ ಅನಿಸುತ್ತದೆ. ಇಲ್ಲಿ ಬದಲಾವಣೆಗಳೊಂದಿಗೆ ಹೊಂದಾಣಿಕೆ ಅಗತ್ಯ. ಅವರು ಚಿಕ್ಕದರಿಂದ ಕೇಳಿಕೊಂಡು ಬಂದ ಪ್ರಶ್ನೆಗಳಿಗೆ ಉತ್ತರಿಸುವ ಕರ್ತವ್ಯವೇ ಆ ಸಂಬಂಧದ ಬೆಳವಣಿಗೆ. ಉದಾ: ನೀ ಯಾಕೆ ನಂಗೆ ಆ ಹೆಸರಿಟ್ಟೆ ? ನೀ ಜಿಮ್ ಹೋಗಿಲ್ವಾ ? ಆಗ ಫಿಜ್ಜಾ ಬರ್ಗರ್ ಇತ್ತಾ ? ರೇಡಿಯೊ, ದೂರದರ್ಶನ, ಲ್ಯಾಂಡ್ ಲೈನ್ಗಳ ಕಾಲವನ್ನು ಹೇಳಿದಾಗ ನಗು ಬರ್ತದೆ ! ಬಾಲ್ಯದಲ್ಲಿ ಬೆರಳು ಹಿಡಿದು ಝೀಬ್ರಾ ಕ್ರಾಸಿಂಗ್ ಮಾಡಿ ತಿರುಗಾಡಿದ ನೆನಪು ಮರೆತು ಬರ್ಮುಡ, ಟಚ್ ಸ್ಕ್ರೀನ್, ಇಂಟರ್ ನೆಟ್ ಗಳು ಗೊತ್ತಿಲ್ಲ ವಾಗಬಾರದೆಂಬ ಕಾಳಜಿಯೇ ಅಪ್ಪನೆಂಬ ಪ್ರೀತಿ !

-ಜೀವನ್ ಶೆಟ್ಟಿ
ಉಡುಪಿ




 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT