ಕವಾನಿ ಚಿತ್ರ 
ಫೀಫಾ ವಿಶ್ವ ಕಪ್ 2018

ಪೋರ್ಚಗಲ್ ತಂಡವನ್ನು 2-1 ಗೋಲುಗಳಿಂದ ಮಣಿಸಿದ ಉರುಗ್ವೆ ಕ್ವಾರ್ಟರ್ ಫೈನಲ್ ಪ್ರವೇಶ

ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಪುಟ್ಬಾಲ್ ಟೂರ್ನಿಯ 16ರ ಘಟ್ಟದಲ್ಲಿ ಪೋರ್ಚಗಲ್ ತಂಡವನ್ನು 2-1 ಗೋಲುಗಳಿಂದ ಅಂತರದಿಂದ ಮಣಿಸಿದ ಉರುಗ್ವೆ ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.

ಮಾಸ್ಕೋ: ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ ಪುಟ್ಬಾಲ್ ಟೂರ್ನಿಯ 16ರ ಘಟ್ಟದಲ್ಲಿ ಪೋರ್ಚಗಲ್ ತಂಡವನ್ನು 2-1 ಗೋಲುಗಳಿಂದ ಅಂತರದಿಂದ ಮಣಿಸಿದ ಉರುಗ್ವೆ  ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.

ಪ್ರಬಲ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಎಡಿಸನ್  ಕವಾನಿ ಗಳಿಸಿದ ಗೋಲು  ಉರುಗ್ವೆ ಗೆಲ್ಲಲು ಕಾರಣವಾಯಿತು. ಪಂದ್ಯದ 7 ಮತ್ತು 62ನೇ ನಿಮಿಷದಲ್ಲಿ ಕವಾನಿ ಗಳಿಸಿದ ಗೋಲು ಪೋರ್ಚುಗಲ್ ಗೆ ದುಬಾರಿಯಾಗಿ ಪರಿಣಮಿಸಿತು. 

ಅಲ್ಲದೆ ತಂಡದ ಸ್ಚಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಸಿಡಿಯದೇ ಇದ್ದದ್ದು ಪೋರ್ಚಗಲ್ ಟೂರ್ನಿಯಿಂದ ಹೊರಬೀಳುವಂತೆ ಮಾಡಿತು. ಅಂತಿಮವಾಗಿಪೋರ್ಚುಗಲ್ ತಂಡ 2-1 ಅಂತರದ ಹೀನಾಯ ಸೋಲಿನೊಂದಿಗೆ ವಿಶ್ವಕಪ್ ಟೂರ್ನಿಯಿಂದ ಹೊರಬಿತ್ತು.
ಅಂತೆಯೇ ವಿಶ್ವಕಪ್ ಗೆಲ್ಲಬೇಕು ಎಂಬ ರೊನಾಲ್ಡೋ ಮಹದಾಸೆ ಕೂಡ ಕಮರಿ ಹೋಯಿತು. ಮುಂದಿನ ವಿಶ್ವಕಪ್ ಗೆ ಕ್ರಿಸ್ಟಿಯಾನೋ ರೊನಾಲ್ಡೋ ಆಡುವುದು ಅನುಮಾನವಾಗಿದೆ.
ಇನ್ನು ಪೋರ್ಚುಗಲ್ ಮಣಿಸಿದ ಉರುಗ್ವೆ 8 ರ ಘಟ್ಟದಲ್ಲಿ ಪ್ರಬಲ ಫ್ರಾನ್ಸ್ ವಿರುದ್ಧ ಸೆಣಸಾಡಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT