ಸಂಗ್ರಹ ಚಿತ್ರ 
ಫೀಫಾ ವಿಶ್ವ ಕಪ್ 2018

ಲೈವ್ ನೀಡುತ್ತಿದ್ದ ಪತ್ರಕರ್ತನಿಗೆ ಯುವತಿಯರಿಂದ ಸಿಹಿಮುತ್ತು, ಲೈಂಗಿಕ ಕಿರುಕುಳ ಅಂತ ಚರ್ಚೆ!

2018ರ ಫಿಫಾ ವಿಶ್ವಕಪ್ ಪಂದ್ಯಾವಳಿ ವೇಳೆ ಲೈವ್ ನೀಡುತ್ತಿದ್ದ ಪತ್ರಕರ್ತರಿಗೆ ಮುತ್ತು ನೀಡಿದ ಪ್ರಕರಣಗಳು ವೈರಲ್ ಆಗಿದ್ದವು...

ಮಾಸ್ಕೋ(ರಷ್ಯಾ): 2018ರ ಫಿಫಾ ವಿಶ್ವಕಪ್ ಪಂದ್ಯಾವಳಿ ವೇಳೆ ಲೈವ್ ನೀಡುತ್ತಿದ್ದ ಪತ್ರಕರ್ತರಿಗೆ ಮುತ್ತು ನೀಡಿದ ಪ್ರಕರಣಗಳು ವೈರಲ್ ಆಗಿದ್ದವು. 
ಇದೀಗ ಮತ್ತೊಂಮ್ಮೆ ಇದೇ ರೀತಿಯ ಪ್ರಕರಣ ವರದಿಯಾಗಿದ್ದು ಸುದ್ದಿವಾಹಿನಿಗೆ ನೇರಪ್ರಸಾರದಲ್ಲಿ ಮಾಹಿತಿ ನೀಡುತ್ತಿದ್ದ ಕೊಲಂಬಿಯನ್ ವರದಿಗಾರ ಜೂಲಿಯೆತ್ ಗೊನ್ಜಾಲೆಜ್ ಥೇರನ್ ಅವರಿಗೆ ರಷ್ಯನ್ ಯುವತಿಯರಿಬ್ಬರು ಅಪ್ಪಿಕೊಂಡು ಮುತ್ತಿಟ್ಟಿರುವ ಪ್ರಕರಣ ವರದಿಯಾಗಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದ್ದು ವರದಿಗಾರನಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬುದರ ಕುರಿತು ಚರ್ಚೆಯಾಗುತ್ತಿದೆ. 
ಈ ಘಟನೆ ಜೂನ್ 28ರಂದು ನಡೆದಿದ್ದು ದಕ್ಷಿಣ ಕೊರಿಯಾದ ವರದಿಗಾರನಿಗೆ ರಷ್ಯಾದ ಮಹಿಳಾ ಅಭಿಮಾನಿಗಳಿಬ್ಬರು ಮುತ್ತಿಟ್ಟಿದ್ದಾರೆ. 
ಈ ಹಿಂದೆ ಸುದ್ದಿವಾಹಿನಿಗೆ ನೇರಪ್ರಸಾರದಲ್ಲಿ ಮಾಹಿತಿ ನೀಡುತ್ತಿದ್ದ ಜರ್ಮನ್ ಟಿವಿ ವರದಿಗಾರ್ತಿಯನ್ನು ತಬ್ಬಿಕೊಂಡು ರಷ್ಯಾದ ಫುಟ್ಬಾಲ್ ಅಭಿಮಾನಿ ಮುತ್ತು ನೀಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ; 'ನಿಮ್ಮ ಪ್ರೀತಿಗೆ ಧನ್ಯವಾದ'- ಭಾವನಾತ್ಮಕ ಪೋಸ್ಟ್

ವಿದಾಯದ ಕೊನೇ ಕ್ಷಣದಲ್ಲೂ Siddaramaiah ಮಹತ್ವದ ಕ್ರಮ: ಆಪ್ತ ಕಾರ್ಯದರ್ಶಿ, ವಿಶೇಷಾಧಿಕಾರಿ ವರ್ಗಾವಣೆ

Siddaramaiah Press Meet: 'ಹೈಕಮಾಂಡ್ ಆದೇಶದ ಮೇಲೆ ರಾಜಿನಾಮೆ ನೀಡಿದ್ದೇನೆ': ಸಿದ್ದರಾಮಯ್ಯ ವಿದಾಯದ ಮಾತು

Siddaramaiah ರಾಜಿನಾಮೆ: 'ನಾನು ಆ ಪಕ್ಷದಲ್ಲಿ ಇಲ್ಲದೆ ಇರಬಹುದು, ಆದರೆ ಅವರೊಂದಿಗಿನ ಒಡನಾಟ ಮರೆಯುವಂತದ್ದಲ್ಲ': BC ಪಾಟೀಲ್ ಭಾವುಕ

ಹೆಸರಿಗೆ ಸಾಮೂಹಿಕ ವಿವಾಹ, ಆದ್ರೆ 42 ವರರಿಗೆ ಮದುಮಗಳೇ ಇಲ್ಲ; ಮದುವೆ ಹೆಸರಲ್ಲಿ ಬೃಹತ್ ದೋಖಾ, ಹಗರಣ ಬಟಾಬಯಲು!

SCROLL FOR NEXT