ಫೀಫಾ ವಿಶ್ವ ಕಪ್ 2018

ಐಸ್ಲೆಂಡ್ ವಿರುದ್ಧ ಕ್ರೊವೇಷಿಯಾ ಗೆದ್ದರೆ ಅರ್ಜೆಂಟೀನಾ ಅಭಿಮಾನಿಗಳು ಧನ್ಯವಾದ ಹೇಳಿದ್ದೇಕೆ?

Srinivasamurthy VN
ಮಾಸ್ಕೋ: ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಮಂಗಳವಾರ ನಡೆದ ಡಿ ಗುಂಪಿನ ಕ್ರೊವೇಷಿಯಾ ಮತ್ತು ಐಸ್ಲೆಂಡ್ ನಡುವಿನ ಪಂದ್ಯದಲ್ಲಿ ಕೊವೇಷಿಯಾ ತಂಡ 2-1 ಅಂತರದಲ್ಲಿ ಗೆದ್ದಿದ್ದು, ಈ ಗೆಲುವಿಗಾಗಿ ಅರ್ಜೆಂಟೀನಾ ಅಭಿಮಾನಿಗಳು ಧನ್ಯವಾದ ಹೇಳಿದ್ದಾರೆ.
ಅರೆ ಇದೇನಿದು ಕ್ರೊವೇಷಿಯಾ ಗೆದ್ದರೆ ಅರ್ಜೆಂಟೀನಾ ಅಭಿಮಾನಿಗಳು ಏಕೆ ಧನ್ಯವಾದ ಹೇಳಬೇಕು ಎಂಬುದು ನಿಮ್ಮ ಪ್ರಶ್ನೆಯಾದರೆ ಇದಕ್ಕೆ ಉತ್ತರ ನಾಕೌಟ್ ಹಂತ.. ಹೌದು ಮೊದಲೆರಡು ಪಂದ್ಯಗಳಲ್ಲಿ ನೀರಸ ಪ್ರದರ್ಶನ ತೋರಿ ಟೂರ್ನಿಯಿಂದ ಹೊರಬೀಳುವ ಹಂತದಲ್ಲಿದ್ದ ಅರ್ಜೆಂಟೀನಾಗೆ ನೈಜಿರಿಯಾ ವಿರುದ್ಧ ಗೆಲುವು ಮಾತ್ರವಲ್ಲದೇ ಐಸ್ಲೆಂಡ್  ಸೋಲೂ ಕೂಡ ಬೇಕಿತ್ತು. ಅಂದರೆ ಡಿ ಗ್ರೂಪ್ ನಲ್ಲಿ ಕೊವೇಷಿಯಾ ಅಗ್ರ ಸ್ಥಾನದಲ್ಲಿದ್ದರೆ ಐಸ್ಲೆಂಡ್ ಎರಡನೇ ಸ್ಥಾನದಲ್ಲಿತ್ತು. 
ಮೂರನೇ ಸ್ಥಾನದಲ್ಲಿದ್ದ ಅರ್ಜೆಂಟೀನಾ ನಾಕೌಟ್ ಹಂತಕ್ಕೇರಬೇಕು ಎಂದರೆ ಕ್ರೊವೇಷಿಯಾ ವಿರುದ್ಧದ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಐಸ್ಲೆಂಡ್ ಸೋಲಬೇಕಿತ್ತು, ಮತ್ತು ನೈಜಿರಿಯಾ ವಿರುದ್ಧ ಪಂದ್ಯದಲ್ಲಿ ಅರ್ಜೆಂಟೀನಾ ಗೆಲ್ಲಬೇಕಿತ್ತು. ಇದೇ ಕಾರಣಕ್ಕೆ ಐಸ್ಲೆಂಡ್ ತಂಡವನ್ನು ಸೋಲಿಸಿದ ಕ್ರೊವೇಷಿಯಾಗೆ ಅರ್ಜೆಂಟೀನಾ ಅಭಿಮಾನಿಗಳು ಧನ್ಯವಾದ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕ್ರೊವೇಷಿಯಾ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ಸೂಕರ್ ಅವರು, ನಿನ್ನೆ ರಾತ್ರಿಯಿಂದ ತಮ್ಮ ಟ್ವಿಟರ್ ಖಾತೆಗೆ ಸಾವಿರಾರು ಮಂದಿ ಅರ್ಜೆಂಟೀನಾ ಅಭಿಮಾನಿಗಳು ಧನ್ಯವಾದ ಹೇಳಿ ಸಂದೇಶ ಕಳುಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
SCROLL FOR NEXT