ಐಸ್ಲೆಂಡ್ ತಂಡ (ಸಂಗ್ರಹ ಚಿತ್ರ) 
ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವಕಪ್ 2018: ಐಸ್ಲೆಂಡ್ ಎಂಬ ಪುಟ್ಟ ರಾಷ್ಟ್ರದ ದೊಡ್ಡ ಕನಸು ಈಗ ನನಸು!

ಫೀಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿಯಲ್ಲಿ ಪ್ರಬಲ ಅರ್ಜೆಂಟೀನಾ ತಂಡದ ಗೆಲುವಿಗೆ ಅಡ್ಡಿಯಾಗಿ ನಿಂತಿದ್ದ ಪುಟ್ಟ ರಾಷ್ಟ್ರ ಐಸ್ಲೆಂಡ್ ಟೂರ್ನಿಯಿಂದ ಹೊರಬಿದ್ದಿರಬಹುದು. ಆದರೆ ತನ್ನ ಪ್ರಬಲ ಹೋರಾಟದ ಮೂಲಕ ತನ್ನ ಪುಟ್ಟ ದೇಶದ ಮಹತ್ವವನ್ನು ವಿಶ್ವಕ್ಕೇ ಸಾರಿ ಹಿಂದುರಿಗಿದೆ.

ಮಾಸ್ಕೋ: ಫೀಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿಯಲ್ಲಿ ಪ್ರಬಲ ಅರ್ಜೆಂಟೀನಾ ತಂಡದ ಗೆಲುವಿಗೆ ಅಡ್ಡಿಯಾಗಿ ನಿಂತಿದ್ದ ಪುಟ್ಟ ರಾಷ್ಟ್ರ ಐಸ್ಲೆಂಡ್ ಟೂರ್ನಿಯಿಂದ ಹೊರಬಿದ್ದರ ಬಹುದು. ಆದರೆ ತನ್ನ ಪ್ರಬಲ ಹೋರಾಟದ ಮೂಲಕ ತನ್ನ ಪುಟ್ಟ ದೇಶದ ಮಹತ್ವವನ್ನು ವಿಶ್ವಕ್ಕೇ ಸಾರಿ ಹಿಂದುರಿಗಿದೆ.
ಹೌದು... ಪ್ರಸ್ತುತ ಫೀಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಪ್ರಬಲ ಅರ್ಜೆಂಟೀನಾ ತಂಡದ ವಿರುದ್ಧ ಪ್ರಬಲ ಹೋರಾಟ ನೀಡಿ ಡ್ರಾ ಸಾಧಿಸಿ ವಿಶ್ವದ ಗಮನ ಸೆಳೆದ ಪುಟ್ಟ ರಾಷ್ಟ್ರ ಐಸ್ಲೆಂಡ್ ಕಥೆ.. ಅಂದು ಅರ್ಜೆಂಟೀನಾ ವಿರುದ್ಧದ ಪಂದ್ಯದಲ್ಲಿ ಈ ತಂಡದ ಆಟಗಾರರು ಮಣಿಯದೇ ಸೋಲಿಗೆ ಬೆನ್ನು ಮಾಡಿ ನಿಂತಿದ್ದರು. ವಿಶ್ವವಿಖ್ಯಾತ ಸ್ಟಾರ್ ಆಟಗಾರ ಮೆಸ್ಸಿ ಭಾರಿಸಿದ 11 ಹೊಡೆತಗಳನ್ನೂ ಗೋಲಾಗಿ ದಾಖಲಾಗದಂತೆ ತಡೆಯುವಲ್ಲಿ ಈ ತಂಡದ ಗೋಲ್ ಕೀಪರ್ ಹೇನ್ಸ್ ಹಾಲ್ಡೋರ್ಸನ್ ಯಶಸ್ವಿಯಾಗಿದ್ದರು. 
ಆತನ ಪರಿಶ್ರಮದಿಂದಲೇ ಐಸ್ಲೆಂಡ್ ತಂಡ ನಾಕೌಟ್ ಹಂತದ ಕನಸು ಜೀವಂತವಾಗಿರಿಸಿಕೊಂಡಿತ್ತು. ಆದರೆ ಆ ಬಳಿಕದ 2 ಪಂದ್ಯಗಳ ಸೋಲು ತಂಡವನ್ನು ಟೂರ್ನಿಯಿಂದ ಹೊರದಬ್ಬುವಂತೆ ಮಾಡಿತ್ತು. ಐಸ್ಲೆಂಡ್ ತಂಡದ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಕನಸು ನನಸಾಗಿದ್ದು, ಕಳೆದ ವರ್ಷ ಅಕ್ಟೋಬರ್ ನಲ್ಲಿ ನಡೆದ ಕೊಸೊವೋ ವಿರುದ್ಧದ ಪಂದ್ಯ. ಆ ಪಂದ್ಯದಲ್ಲಿ ಐಸ್ಲೆಂಡ್ ಭರ್ಜರಿ ಜಯ ಸಾಧಿಸಿದ್ದಲ್ಲದೇ ವಿಶ್ವಕಪ್ ಗೆ ಅರ್ಹತೆ ಗಿಟ್ಟಿಸಿತ್ತು. ಫೀಫಾ ರ್ಯಾಂಕಿಂಗ್ ಪಟ್ಟಿಯಲ್ಲಿ 130ನೇ ಸ್ಥಾನದಲ್ಲಿದ್ದ ಐಸ್ಲೆಂಡ್ ವಿಶ್ವಕಪ್ ಗೆ ಅರ್ಹತೆ ಪಡೆಯುತ್ತದೆ ಎಂದು ಯಾರೂ ಭಾವಿಸಿರಲಿಲ್ಲ. ಅರ್ಹತೆ ಪಡೆದಿದ್ದು ಮಾತ್ರವಲ್ಲದೇ ಪ್ರಬಲ ಅರ್ಜೆಂಟೀನಾ ವಿರುದ್ಧ ಡ್ರಾ ಸಾಧಿಸುವ ಮೂಲಕ 130ನೇ ಸ್ಥಾನದಲ್ಲಿದ್ದ ಐಸ್ಲೆಂಡ್ ಇದೀಗ 20ನೇ ಸ್ಥಾನಕ್ಕೇರಿದೆ. ಆ ತಂಡದ ಸತತ ಪರಿಶ್ರಮವೇ ಆ ತಂಡವನ್ನು ಇಂದು ಈ ಸ್ಥಾನಕ್ಕೆ ತಂದು ನಿಲ್ಲಿಸಿದೆ.
ಇಷ್ಟಕ್ಕೂ ಐಸ್ಲೆಂಡ್ ಏಕೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿದೆ?
ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ಐಸ್ಲೆಂಡ್ ತಂಡ ಪಾಲ್ಗೊಂಡಿದೆ ಎಂಬ ಒಂದೇ ಕಾರಣಕ್ಕೆ ಈ ತಂಡ ಮತ್ತು ದೇಶದ ಹೆಸರು ಇಂದು ವಿಶ್ವಾದ್ಯಂತ ಸುದ್ದಿಗೆ ಗ್ರಾಸವಾಗುತ್ತಿದೆ. ಫುಟ್ಬಾಲ್ ಹೊರತಾಗಿಯೂ ಐಸ್ಲೆಂಡ್ ಸಾಕಷ್ಟು ವಿಚಾರಗಳಿಗೆ ಸುದ್ದಿಯಾಗುತ್ತಿದೆ. 
ಐಸ್ಲೆಂಡ್ ದೇಶದ ಜನಸಂಖ್ಯೆ ಕೇವಲ ಸುಮಾರು 3 ಲಕ್ಷ.. ಭಾರತದ ಯಾವುದೇ ಮಹಾನಗರದ ಜನಸಂಖ್ಯೆ ಇದಕ್ಕಿಂತ 10 ಪಟ್ಟು ಹೆಚ್ಚಿರುತ್ತದೆ. ಅತ್ಯಂತ ಸಣ್ಣ ಜನಸಂಖ್ಯೆಯ ಹೊರತಾಗಿಯೂ ಈ ಪುಟ್ಟ ಪ್ರದೇಶಕ್ಕೆ ದೇಶದ ಮಾನ್ಯತೆ ದೊರೆತಿರುವುದು ವಿಶೇಷವಾಗಿದೆ. 3 ಲಕ್ಷದ 30 ಸಾವಿರ ಜನಸಂಖ್ಯೆ ಹೊಂದಿರುವ ಐಸ್ಲೆಂಡ್ ನಲ್ಲಿ 21,500 ನೋಂದಾಯಿತ ಫುಟ್ಬಾಲ್ ಆಟಗಾರರಿದ್ದಾರೆ. ಅಚ್ಚರಿಯ ವಿಚಾರವೆಂದರೆ ಈ ಪೈಕಿ ಬಹುತೇಕರು ಫುಟ್ಬಾಲ್ ಅನ್ನು ವೃತ್ತಿಯಾಗಿ ಸ್ವೀಕರಿಸಿಲ್ಲ. ಆದರೆ ಫುಟ್ಬಾಲ್ ಅವರ ಇಷ್ಟದ ಕ್ರೀಡೆಯಷ್ಟೇ.. ಈ ಪೈಕಿ 23 ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. 
ಈ 23 ಆಟಗಾರರಲ್ಲಿ 15 ಮಂದಿ ಅಂತಾರಾಷ್ಟ್ರೀಯ ಪಂದ್ಯಗಳನ್ನೇ ಆಡಿಲ್ಲ ಎಂಬುದು ವಿಶೇಷ. ಇವರು ತವರಿನ ಟೂರ್ನಿಗಳಲ್ಲೇ ಆಡಿ ಬೆಳೆದವರು. ಇಂದು ಇದೇ ತಂಡ ಫೀಫಾ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿದೆ ಎಂದು ಈ ತಂಡದ ಪರಿಶ್ರಮ ಮತ್ತು ಕ್ರೀಡೆ ಮೇಲಿನ ಆಸಕ್ತಿ ಎಷ್ಟಿರಬಹುದು ಎಂಬುದನ್ನು ತೋರಿಸುತ್ತದೆ. ಮತ್ತೊಂದು ಅಚ್ಚರಿಯ ವಿಚಾರವೆಂದರೆ ಫೀಫಾ ವಿಶ್ವಕಪ್ ಟೂರ್ನಿಗೆ ಆಯ್ಕೆಯಾಗಿರುವ ಈ ತಂಡದ 23 ಆಟಗಾರರ ಬಹುತೇಕ ಮಂದಿ ಆಟಗಾರರು ವೃತ್ತಿಪರ ವೈದ್ಯಕೀಯ ಕ್ಷೇತ್ರಕ್ಕೆ ಸೇರಿದವರಂತೆ. ಇದಲ್ಲದೆ ಇತರೆ ವೃತ್ತಿಯಿಂದ ಬಂದ ಆಟಗಾರರೂ ಇದ್ದಾರೆ. ಕಳೆದ ಶುಕ್ರವಾರ ಅರ್ಜೆಂಟೀನಾ ಗೆಲುವಿಗೆ ಅಡ್ಡಗೋಡೆಯಾಗಿ ನಿಂತಿದ್ದ ಈ ತಂಡದ ಗೋಲ್ ಕೀಪರ್ ಹಾಲ್ಡೋರ್ಸನ್ ವೃತ್ತಿಪರ ಚಿತ್ರ ನಿರ್ದೇಶಕನಂತೆ. ಆ ದೇಶದ ಖ್ಯಾತ ಚಿತ್ರ ನಿರ್ದೇಶಕರಲ್ಲಿ ಈತ ಕೂಡ ಒಬ್ಬ. ಈತ ನಿರ್ಮಿಸಿದ್ದ ಚಿತ್ರವೊಂದರ ಹಾಡು ಈ ಐಸ್ಲೆಂಡ್ ಫುಟ್ಹಾಲ್ ತಂಡ ಪ್ರಮೋಷನಲ್ ಗೀತೆಯಾಗಿತ್ತು.
ಇನ್ನು ಈ ತಂಡ ಪ್ರಮುಖ ಡಿಫೆಂಡರ್ ಬಿರ್ ಕಿರ್ ಮಾರ್ ಸೇವರ್ಸನ್ ಉಪ್ಪು ತಯಾರಿಸುವ ಕಾರ್ಖಾನೆ ಉದ್ಯೋಗಿಯಂತೆ. ಫೀಫಾ ವಿಶ್ವಕಪ್ ನಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸುತ್ತಿರುವ ಒಂದೇ ಕಾರಣಕ್ಕೆ ಈತನಿಗೆ ಆ ಸಂಸ್ಥೆ ರಜೆ ನೀಡಿದೆಯಂತೆ. 
ಅಟಗಾರರಷ್ಟೇ ಅಲ್ಲ ತಂಡದ ಮ್ಯಾನೇಜರ್ ಕೂಡ ದಂತವೈದ್ಯರೇ!
ಐಸ್ಲೆಂಡ್ ತಂಡದ ಆಟಗಾರರಷ್ಟೇ ಅಲ್ಲ ಈ ತಂಡದ ಮ್ಯಾನೇಜರ್ ಕಮ್ ಕೋಚ್ ಹೀಮಿರ್ ಹಾಲ್ ಗ್ರಿಮ್ಸನ್ ಕೂಡ ವೃತ್ತಿಪರ ದಂತವೈದ್ಯರು. ದಂತವೈದ್ಯ ಸೇವೆಯ ನಡುವೆ ಸಮಯ ಸಿಕ್ಕಾಗ ಫುಟ್ಬಾಲ್ ಆಡಿದವರು. ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಹಾಲ್ ಗ್ರಿಮ್ಸನ್ ಪ್ರಸ್ತುತ ನಾನು ಐಸ್ಲೆಂಡ್ ತಂಡದ ಮ್ಯಾನೇಜರ್ ಆಗಿರಬಹುದು. ನಾನೂ ಈಗಲೂ ನನ್ನ ದಂತವೈದ್ಯಕೀಯ ಸೇವೆಗೆ ಮರಳಲು ಇಚ್ಛಿಸುತ್ತೇನೆ. ಕೆಲ ಕೋಚ್ ಗಳು ವಿರಾಮದ ವೇಳೆ ಗಾಲ್ಫ್, ಹಾಕಿ, ಶೂಟಿಂಗ್ ಇನ್ನಿತರೆ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರುತ್ತಾರೆ. ಆದರೆ ನನಗೆ ಅನ್ನ ನೀಡಿದ ದಂತವೈದ್ಯಕೀಯ ಕ್ಷೇತ್ರವೇ ಇಷ್ಟ ಎಂದು ಹೇಳಿದ್ದಾರೆ.
ಒಟ್ಟಾರೆ ಫೀಫಾ ವಿಶ್ವಕಪ್ ಗೆಲ್ಲಲು ಐಸ್ಲೆಂಡ್ ತಂಡ ವಿಫಲವಾದರೂ ತಮ್ಮ ದೇಶದ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸಬೇಕು ಎಂಬ ಮಹದಾಸೆಯನ್ನು ಹೊತ್ತು ತಂದಿದ್ದ ಆ 23 ಮಂದಿ ಆಟಗಾರರು ತಮ್ಮ ಕನಸು ಸಾಕಾರ ಮಾಡಿಕೊಂಡು ತವರಿನತ್ತ ಪ್ರಯಾಣ ಬೆಳೆಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT