ಫೀಫಾ ವಿಶ್ವಕಪ್ 2018: ಸೆನಗಲ್ ವಿರುದ್ಧ ಕೊಲಂಬಿಯಾಗೆ ಜಯ 
ಫೀಫಾ ವಿಶ್ವ ಕಪ್ 2018

ಫೀಫಾ ವಿಶ್ವಕಪ್ 2018: ಸೆನಗಲ್ ವಿರುದ್ಧ ಕೊಲಂಬಿಯಾಗೆ ಜಯ

ಫಿಫಾ ವಿಶ್ವಕಪ್ ಗೆಲ್ಲುವ ಸಲುವಾಗಿ ರಷ್ಯಾದಲ್ಲಿ ನಡೆಯುತ್ತಿರುವ ರೋಚಕ ಹಣಾಹಣಿಯಲ್ಲಿ ಗುರುವಾರ ಸೆನಗಲ್ ವಿರುದ್ಧ ಕೊಲಂಬಿಯಾ 1-0 ಅಂತರದ ಗೆಲುವು ದಾಖಲಿಸಿದೆ.

ಸಮರಾ ಅರೇನಾ ರಾಷ್ಯಾ): ಫಿಫಾ ವಿಶ್ವಕಪ್ ಗೆಲ್ಲುವ ಸಲುವಾಗಿ ರಷ್ಯಾದಲ್ಲಿ ನಡೆಯುತ್ತಿರುವ ರೋಚಕ ಹಣಾಹಣಿಯಲ್ಲಿ ಗುರುವಾರ ಸೆನಗಲ್ ವಿರುದ್ಧ ಕೊಲಂಬಿಯಾ 1-0 ಅಂತರದ ಗೆಲುವು ದಾಖಲಿಸಿದೆ.
ಈ ಗೆಲುವಿನೊಂದಿಗೆ ಕೊಲಂಬಿಯಾ ತಂಡ ನಾಕೌಟ್ ಹಂತಕ್ಕೆ ಪ್ರವೇಶ ಗಿಟ್ಟಿಸಿದೆ.
ಕೊಲಂಬಿಯಾದ ಯೆರಿ ಮಿನಾ (74ನೇ ನಿಮಿಷ) ತಂಡದ ಪರವಾಗಿ ಏಕೈಕ ಗೋಲು ಗಳಿಸಿಕೊಳ್ಳುವ ಮೂಲಕ ಕೊಲಂಬಿಯಾಗೆ ವಿಜಯ ದಕ್ಕಿವಂತೆ ಮಾಡಿದ್ದಾರೆ.
ವಿಶೇಷವೆಂದರೆ ಪಂದ್ಯದ ಮೊದಲ ಅರ್ಧದಲ್ಲಿ 3 ನಿಮಿಷ ಹಾಗೂ ದ್ವಿತೀಯಾರ್ಧದಲ್ಲಿ 4  ನಿಮಿಷಗಳನ್ನು ಹೆಚ್ಚುವರಿಯಾಗಿ ಸೇರಿಸಲಾಗಿತ್ತು. ಆದರೆ ಸೆನಗಲ್ ತಂಡದಿಂದ ಯಾವ ಗೋಲು ಗಳಿಕೆಯು ಸಆಧ್ಯವಾಗಲಿಲ್ಲ.
ಈ ನಡುವೆ ಪಂದ್ಯ ಪ್ರಾರಂಭವಾದ ಸ್ವಲ್ಪ ಸಮಯದಲ್ಲೆ ಎರಡೂ ತಂಡಗಳ ನಡುವೆ ಜಗಳ ಪ್ರಾರಂಭವಾಗಿತ್ತು. ಪೆನಾಲ್ಟಿ ವಿಚಾರವಾಗಿ ಆರಂಭವಾದ ಜಗಳ ಕಡೆಗೆ ಪೆನಾಲ್ಟಿ ರದ್ದುಗೊಳಿಸಿ ತೀರ್ಪು ಪ್ರಕಟಿಸುವಲ್ಲಿಗೆ ಮುಕ್ತಾಯ ಕಂಡಿದೆ. ಏತನ್ಮಧ್ಯೆ ಎರಡೂ ತಂಡಗಳು ಐದು ಬಾರಿ ತಮ್ಮ ಆಟಗಾರರನ್ನು ಬದಲಾವಣೆ ಮಾಡಿಕೊಂಡಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!