ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ಫೈನಲ್ ಪಂದ್ಯಕ್ಕೆ ಅಡಿಡಾಸ್ ಚೆಂಡು

Srinivasa Murthy VN
Updated On : 5 Jul 2014, 11:05 am

ನವದೆಹಲಿ: ಜಾಗತಿಕ ಕ್ರೀಡಾ ಸಾಮಗ್ರಿಗಳನ್ನು ತಯಾರಿಸುವ ಅಡಿಡಾಸ್ ಕಂಪನಿ, ಬ್ರೆಜಿಲ್‌ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಆಡಲು ಚೆಂಡನ್ನು ಅನಾವರಣಗೊಳಿಸಿತು. ಇದಕ್ಕೆ ಬ್ರಾಜುಕಾ ಫೈನಲ್ ರಿಯೋ ಎಂದು ಹೆಸರಿಸಲಾಗಿದೆ.ಜುಲೈ 13ರಂದು ಎರಡು ಸಮರ್ಥ ತಂಡಗಳು ಇತಿಹಾಸ ನಿರ್ಮಿಸಲು ಹೋರಾಡುವ ಪಂದ್ಯದಲ್ಲಿ ಆಡಲು ಈ ಚೆಂಡನ್ನು ಬಳಸಲಾಗತ್ತದೆ.
ಬ್ರಾಜುಕಾ ಫೈನಲ್ ರಿಯೋ, ವಿಶ್ವಕಪ್ ಟ್ರೋಫಿ ಮೇಲಿರುವಂತೆ, ಚೆಂಡು ಹಸಿರು ಮತ್ತು ಬಂಗಾರದ ವರ್ಣವನ್ನು ಹೊಂದಿದೆ. ಹೀಗಾಗಿ, ಸದ್ಯಕ್ಕೆ ಪಂದ್ಯಾವಳಿಯಲ್ಲಿ ಉಪಯೋಗಿಸುತ್ತಿರುವ ಚೆಂಡಿಗಿಂತ ಈ ಚೆಂಡಿನ ಬಣ್ಣ ಭಿನ್ನವಾಗಿದೆ. 2.5 ವರ್ಷಗಳಿಂದ ವಿಶ್ವದ ಆಗ್ರ 600 ಆಟಗಾರರು, 30 ತಂಗಳು ಹಾಗೂ ಮೂರು ಖಂಡಗಳ 10 ರಾಷ್ಟ್ರಗಳು ಈ ಚೆಂಡನ್ನು ಪರೀಕ್ಷಿಸಿವೆ ಎಂದು ಅಡಿಡಾಸ್ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement