ಮೇಲ್ಸೇತುವೆ ಕುಸಿತ:2 ಸಾವು
ಬೆಲೊ ಹೊರಿಜಾಂಟೊ: ವಿಶ್ವಕಪ್ಗೆ ಸಂಬಂಧಿಸಿದಂತೆ ನಿರ್ಮಾಣದ ಹಂತದಲ್ಲಿದ್ದ ಮೇಲ್ಸೇತುವೆ ಕುಸಿದು 2ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಈ ಕುಸಿತದ ವೇಳೆ ಒಂದು ಬಸ್, ಎರಡು ಕಟ್ಟಡ ನಿರ್ಮಾಣದ ಟ್ರಕ್ ಹಾಗೂ ಕಾರೊಂದು ಅವಶೇಷಗಳಡಿ ಸಿಲುಕಿದೆ. ಹಾಗಾಗಿ 22ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಊಹಿಸಲಾಗಿದ್ದು, ನಿಖರವಾದ ಅಂಕಿ ಅಂಶ ದೊರೆತಿಲ್ಲ. ಮೃತಪಟ್ಟ ಹಾಗೂ ಗಾಯಗೊಂಡವರಲ್ಲಿ ವಿದೇಶಿಗರು ಅಥವಾ ಪ್ರವಾಸಿಗರು ಇದ್ದಾರೆಯೇ ಎಂಬುದು ಸಹ ಖಚಿತವಾಗಿಲ್ಲ. ವಿಶ್ವಕಪ್ ಪಂದ್ಯಾವಳಿ ಯಶಸ್ವಿಯಾಗಿ ನಡೆಯುತ್ತಿದ್ದು, ಈ ರೀತಿಯಾದ ಘಟನೆಗಳು ಬ್ರೆಜಿಲ್ಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿದೆ.