ಫಿಫಾ ವಿಶ್ವಕಪ್ 2014

ಅಹಂನಲ್ಲಿ ಅಮಲಿನಲ್ಲಿ ಜರ್ಮನಿ: ಮರಡೋನಾ

ಆತಿಥೇಯ ಬ್ರೆಜಿಲ್ ತಂಡವನ್ನು ಬೃಹತ್ ಅಂತರದಲ್ಲಿ ಮಣಿಸಿರುವ ಜರ್ಮನಿ ತಂಡ ಅತಿಯಾದ ಅಹಂನಿಂದ ಬೀಗುತ್ತಿದೆ..

ರಿಯೊ ಡಿ ಜೆನೈರೊ: ಆತಿಥೇಯ ಬ್ರೆಜಿಲ್ ತಂಡವನ್ನು ಬೃಹತ್ ಅಂತರದಲ್ಲಿ ಮಣಿಸಿರುವ ಜರ್ಮನಿ ತಂಡ ಅತಿಯಾದ ಅಹಂನಿಂದ ಬೀಗುತ್ತಿದೆ ಎಂದು ಅರ್ಜೆಂಟೀನಾ ಫುಟ್ಬಾಲ್‌ನ ದಂತಕತೆ ಡಿಗೊ ಮರಡೋನಾ ಅಭಿಪ್ರಾಯಪಟ್ಟಿದ್ದಾರೆ.
ಭಾನುವಾರ ನಡೆಯಲಿರುವ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಜರ್ಮನಿಯನ್ನು ಎದುರಿಸಲಿದೆ. ಟೂರ್ನಿಯ ಉಪಾಂತ್ಯದ ಪಂದ್ಯದಲ್ಲಿ ಆತಿಥೇಯ ಬ್ರೆಜಿಲ್ ವಿರುದ್ಧ 7-1 ಗೋಲುಗಳ ಬೃಹತ್ ಅಂತರದಲ್ಲಿ ಗೆಲವು ದಾಖಲಿಸಿರುವ ಜರ್ಮನಿ ಅತಿಯಾದ ಅಹಂನಲ್ಲಿದೆ. ಇದು ಅರ್ಜೆಂಟೀನಾಗೆ ನೆರವಾಗಲಿದೆ ಎಂದು ಅವರು ತಿಳಿಸಿದರು.
ಮೆಸ್ಸಿ ನೇತೃತ್ವದ ಅರ್ಜೆಂಟೀನಾ, ಜರ್ಮನಿಯ ಈ ಮನೋಭಾವವನ್ನು ಬಳಸಿಕೊಂಡು ಉತ್ತಮ ಫಲಿತಾಂಶ ಪಡೆಯಲಿದೆ. ಅಲ್ಲದೆ ಜರ್ಮನಿ ತಂಡವನ್ನು ಮಣಿಸುವುದು ಕಷ್ಟದ ವಿಷಯವಲ್ಲ ಎಂದು ಮರಡೋನಾ ಅಭಿಪ್ರಾಯಪಟ್ಟಿದ್ದಾರೆ. ಅರ್ಜೆಂಟೀನಾ ತಂಡ ನೆದರ್ಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದು, ಫೈನಲ್‌ನಲ್ಲೂ ಅದೇ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!