ಬ್ರೆಜಿಲ್‌ಗೆ ಇಂದು ಅಪ್ಪಳಿಸಲಿರುವ ಕಾಲ್‌ಚೆಂಡ ಮಾರುತ
ದಟ್ಟ ಅನುಭವ ಬೆನ್ನಿಗೆ ಕಟ್ಟಿಕೊಂಡು ವಿಶ್ವಕಪ್ ಎತ್ತಿ ಹಿಡಿಯುವ ಆಸೆಯೊಂದಿಗೆ ಜಗಜಟ್ಟಿಗಳು ಸ್ಪರ್ಧಾಕಣಕ್ಕೆ ಧುಮುಕಿದ್ದಾರೆ. ಅವರೆಲ್ಲ ಹೊಸ ಇತಿಹಾಸ ಬರೆಯಲು ಕಾತರದಲ್ಲಿದ್ದಾರೆ.
- ಕಾಫಿ ನಾಡಿನಲ್ಲಿ ಇಂದಿನಿಂದ ಆರಂಭವಾಗಲಿದೆ ಗೋಲ್ಡ್‌ವಾರ್
- ವಿಶ್ವಕಪ್ ಫುಟ್ಬಾಲ್‌ನ ರೋಚಕ ದೃಶ್ಯಕಾವ್ಯಕ್ಕೆ ಕ್ಷಣಗಣನೆ
ಈಗ ಬ್ರೆಜಿಲ್‌ನಲ್ಲಿ ವಿಶ್ವಕಪ್ ಫುಟ್ಬಾಲ್ ಜ್ವರ. ಜಗತ್ತಿನ ಮತ್ತೊಂದು ದೊಡ್ಡ ಕ್ರೀಡಾ ಹಬ್ಬಕ್ಕೆ ಕ್ಷಣಗಣನೆ ಆರಂಭ. ಇಡೀ ಜಗತ್ತು, ಈ ಭವ್ಯ ಇತಿಹಾಸದ ಮತ್ತೊಂದು ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗಲು ತುದಿಗಾಲಲ್ಲಿ ನಿಂತಿದೆ. ಈ ಪಂದ್ಯಾವಳಿಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಡುವ ಮೂಲಕ ಜಾಗತಿಕ ಫುಟ್ಬಾಲ್ ಭೂಪಟದಲ್ಲಿ ತನ್ನ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆಯಲು ಬ್ರೆಜಿಲ್ ಸರ್ವರೀತಿಯಿಂದಲೂ ಸಜ್ಜುಗೊಂಡಿದೆ.
ಜಗತ್ತಿನ ಅಗ್ರ 32 ತಂಡಗಳು ಈ ಬಾರಿ ಸ್ಪರ್ಧಾಕಣದಲ್ಲಿವೆ. ಬೋಸ್ನಿಯಾ ಆ್ಯಂಡ್ ಹರ್ಜೆಗೊವಿನಾ ಬಿಟ್ಟರೆ ಉಳಿದ ತಂಡಗಳು ಈಗಾಗಲೇ ವಿಶ್ವಕಪ್‌ನಲ್ಲಿ ಆಡಿರುವ ಅನುಭವಿಗಳು.
ದಟ್ಟ ಅನುಭವ ಬೆನ್ನಿಗೆ ಕಟ್ಟಿಕೊಂಡು ವಿಶ್ವಕಪ್ ಎತ್ತಿ ಹಿಡಿಯುವ ಆಸೆಯೊಂದಿಗೆ ಜಗಜಟ್ಟಿಗಳು ಸ್ಪರ್ಧಾಕಣಕ್ಕೆ ಧುಮುಕಿದ್ದಾರೆ. ಅವರೆಲ್ಲ ಹೊಸ ಇತಿಹಾಸ ಬರೆಯಲು ಕಾತರದಲ್ಲಿದ್ದಾರೆ. ಈ ಬಾರಿ ನಡೆಯುತ್ತಿರುವುದು ಒಟ್ಟಾರೆ 20ನೇ ವಿಶ್ವಕಪ್ ಪಂದ್ಯಾವಳಿಯಾಗಿದೆ.
ಒಟ್ಟು ತಂಡಗಳು 32
ಒಟ್ಟು ಗುಂಪುಗಳು (ತಲಾ 4ರಂತೆ) 8
ಒಟ್ಟು ಪಂದ್ಯಗಳು 64
ಚಾಂಪಿಯನ್ನರಿಗೆ ಬಹುಮಾನ 207 ಕೋಟಿ
ರನ್ನರ್ಸ್-ಅಪ್‌ಗೆ ಬಹುಮಾನ 148 ಕೋಟಿ
ಉದ್ಘಾಟನೆ ಪಂದ್ಯ
ಬ್ರೆಜಿಲ್-ಕ್ರೊವೇಷಿಯಾ
ಗುಂಪು-ಎ
ಸಮಯ: ಮಧ್ಯರಾತ್ರಿ
1.30 ಗಂಟೆ
ಆರಂಭದ ಸಮಯ
ರಾತ್ರಿ 10.30
ಗಂಟೆ (ಭಾರತೀಯ ಕಾಲಮಾನ)
ಮುಕ್ತಾಯದ ಸಮಯ
ರಾತ್ರಿ 12.30ಗಂಟೆ
ಸ್ಥಳ
ಕೊರಿಂಥಿಯಾನ್ಸ್ ಕ್ರೀಡಾಂಗಣ, ಸೌ ಪೊಲೊ
ಪ್ರಮುಖ ಆಕರ್ಷಣೆ: ಪಿಟ್‌ಬುಲ್, ಬೆಯೊನ್ಸ್
ನೇರ ಪ್ರಸಾರ: ಇಎಸ್‌ಪಿಎನ್
ಈ ಬಾರಿಯ ಹಾಟ್ ಫೇವರಿಟ್
ಜರ್ಮನಿ, ಬ್ರೆಜಿಲ್, ಸ್ಪೇನ್, ಇಟಲಿ, ಅರ್ಜೆಂಟೀನಾ
ಡಾರ್ಕ್ ಹಾರ್ಸ್ ತಂಡ-ಬೆಲ್ಜಿಯಂ
ಯಾರ ಪರ ಹೆಚ್ಚು ಬೆಟ್ಟಿಂಗ್
ಜರ್ಮನಿ, ಬ್ರೆಜಿಲ್, ಸ್ಪೇನ್‌ಗೆ ತಲಾ 10ಕ್ಕೆ10 ಅಂಕ
ಡಾರ್ಕ್ ಹಾರ್ಸ್ ಬೆಲ್ಜಿಯಂಗೆ 10ಕ್ಕೆ 8 ಅಂಕ
ಈ ವರೆಗಿನ ಚಾಂಪಿಯನ್ನರು
ಬ್ರೆಜಿಲ್ 5
ಇಟಲಿ 4
ಜರ್ಮನಿ 3
ಅರ್ಜೆಂಟೀನಾ, ಉರುಗ್ವೆ ತಲಾ2
ಫ್ರಾನ್ಸ್, ಸ್ಪೇನ್, ಇಂಗ್ಲೆಂಡ್ ತಲಾ1
2010ರಲ್ಲಿ ಸ್ಪೇನ್ ಚಾಂಪಿಯನ್
ಕಾರ್ಯಕ್ರಮದ ವಿಶೇಷ
-ಪಿಟ್‌ಬುಲ್, ಕ್ಲೌಡಿಯಾ ಜುಗಲ್ಬಂಧಿ: ಪಾಪ್ ಸಂಗೀತ ಕ್ಷೇತ್ರದ ತಾರೆಯರಾದ ಪಿಟ್‌ಬುಲ್ ಹಾಗೂ ಬ್ರೆಜಿಲ್‌ನ ಗಾಯಕಿ ಕ್ಲೌಡಿಯಾ ಲೈಟ್ಟೆ ವಿಶ್ವಕಪ್‌ನ ಗೀತೆಯಾದ ವಿ ಆರ್ ದ ಒನ್ ಹಾಡು ಹಾಡಲಿದ್ದಾರೆ.
-ಖ್ಯಾತ ಪಾಪ್ ಗಾಯಕರಾದ ಬೆಯೊನ್ಸ್ ಮತ್ತು ಪಾಲ್ ಮ್ಯಾಕರ್ಟ್ನಿರಿಂದ ಸಂಗೀತ ಕಾರ್ಯಕ್ರಮ
-ಮಧ್ಯ ಪ್ರಾಚ್ಯ ರಾಷ್ಟ್ರಗಳ ಖ್ಯಾತ ಗಾಯಕ ಮೊಹಮದ್ ಅಸ್ಸಾಫರಿಂದ ಕಾರ್ಯಕ್ರಮ
-600 ನೃತ್ಯಗಾರರಿಂದ ನೃತ್ಯ ಪ್ರದರ್ಶನ
-ಬ್ರೆಜಿಲ್‌ನ ಜನತೆ, ಅಲ್ಲಿನ ಪರಿಸರ, ಸಂಸ್ಕೃತಿ, ಅಲ್ಲಿನ ಫುಟ್ಬಾಲ್ ಕ್ರೀಡೆಗೆ ಈ ಕಾರ್ಯಕ್ರಮ ಅರ್ಪಣೆ
-ಹಾಡು, ನೃತ್ಯದ ಜತೆಗೆ ಏರೊಬ್ಯಾಟಿಕ್ ಜಿಮ್ನಾಸ್ಟಿಕ್, ಟ್ರ್ಯಾಂಫೊಲಿನಿಸ್ಟ್ಸ್, ಕೆಪೊಯೆರಾ, ಸ್ಟಿಲ್ಟ್ ಡ್ಯಾನ್ಸ್ ಕಲಾವಿದರಿಂದ ತಮ್ಮ ಕೌಶಲ್ಯ ಅನಾವರಣ