ರೊನಾಲ್ಡೊ ಶ್ರೀಮಂತ ಫುಟ್ಬಾಲ್ ಆಟಗಾರ
ಲಂಡನ್: ಪೊರ್ಚುಗಲ್ ಮತ್ತು ರಿಯಲ್ ಮ್ಯಾಡ್ರಿಡ್ ಸ್ಟಾರ್ ಫುಟ್ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ಅವರು, ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಶ್ರೀಮಂತ ಆಟಗಾರ ಎನಿಸಿಕೊಂಡಿದ್ದಾರೆ. ಆದರೆ, ಶ್ರೀಮಂತ ಆಟಗಾರರ ಪಟ್ಟಿಯಲ್ಲಿ ಇಂಗ್ಲೆಂಡ್ ಹೆಚ್ಚಿನ ಆಟಗಾರರು ಸ್ಥಾನ ಪಡೆದುಕೊಂಡಿದ್ದಾರೆ. ರೊನಾಲ್ಡೊ ಅಂದಾಜು 230 ಅಮೆರಿಕನ್ ಮಿಲಿಯನ್ ಡಾಲರ್ ಸಂಪತ್ತು ಹೊಂದಿದ್ದಾರಂತೆ. ಅವರು ಮೂರು ತಿಂಗಳಲ್ಲಿ ಗಳಿಸುವ ಹಣ, 10 ಆಟಗಾರರಿಗೆ ಸಮವಾಗಿದೆ. ಅಲ್ಲದೆ, ಖ್ಯಾತ ಆಟಗಾರರಾದ ಅರ್ಜೆಂಟೀನಾದ ಲಯೋನೆಲ್ ಮೆಸ್ಸಿ ಮತ್ತು ಇಂಗ್ಲೆಂಡ್ನ ವೇನ್ ರೂನಿ ಅವರನ್ನು ರೊನಾಲ್ಡೊ ಹಿಂದಿಕ್ಕಿದ್ದಾರೆ. ಶ್ರೀಮಂತ ಫುಟ್ಬಾಲ್ ಆಟಗಾರರ ಪಟ್ಟಿಯಲ್ಲಿ ಇಂಗ್ಲೆಂಡ್ನ ಸ್ಟ್ರೈಕರ್ ರೂನಿ 95 ಅಮೆರಿಕನ್ ಮಿಲಿಯನ್ ಡಾಲರ್, ಮಿಡ್ಫೀಲ್ಡರ್ ಫ್ರಾಂಕ್ ಲ್ಯಾಂಪರ್ಡ್ (60 ಅಮೆರಿಕನ್ ಮಿಲಿಯನ್ ಡಾಲರ್) ಹಾಗೂ ಸ್ಟೀವನ್ ಗೆರಾರ್ಡ್ (55 ಅಮೆರಿಕನ್ ಮಿಲಿಯನ್ ಡಾಲರ್) ಸಂಪತ್ತು ಹೊಂದಿದ್ದಾರೆ.