ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ಕೆಮರೂನ್ ಮೇಲೆ ಮೆಕ್ಸಿಕೋ ಸವಾರಿ

ಮೊದಲಾರ್ಧ ಪಂದ್ಯದಲ್ಲಿ ಗೋಲು ಗಳಿಸಿಲಾಗದೇ ಕಂಗಾಲಾಗಿದ್ದ ಪಂದ್ಯದ...

Srinivasa Murthy VN
Updated On : 14 Jun 2014, 12:31 pm

ನಟಾಲ್: ಮೊದಲಾರ್ಧ ಪಂದ್ಯದಲ್ಲಿ ಗೋಲು ಗಳಿಸಿಲಾಗದೇ ಕಂಗಾಲಾಗಿದ್ದ ಪಂದ್ಯದ ದ್ವಿತೀಯಾರ್ಧದಲ್ಲಿ, ಒರಿಬೆ ಪೆರಾಲ್ಟಾ ಅವರು ದಾಖಲಿಸಿದ ಏಕೈಕ ಗೋಲಿನೊಂದಿಗೆ ಮೆಕ್ಸಿಕೋ ತಂಡ ಫುಟ್ಬಾಲ್ ವಿಶ್ವಕಪ್ನ ಎರಡನೇ ಪಂದ್ಯದಲ್ಲಿ ಕೆಮರೂನ್ ವಿರುದ್ಧ 1-0 ಅಂತರದಿಂದ ಜಯ ಕಂಡುಕೊಂಡಿತು.
ಮೊದಲಾರ್ಧ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಗೋಲು ದಾಖಲಿಸಲು ಸಾಕಷ್ಟು ಪ್ರಯತ್ನ ನಡೆಸಿದರಾದರೂ, ಗೋಲು ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ದ್ವಿತೀಯಾರ್ಧ ಪಂದ್ಯದ 61ನೇ ನಿಮಿಷದಲ್ಲಿ ಗಳಿಸಿದ ಗೋಲು, ಮೆಕ್ಸಿಕನ್ ತಂಡದಲ್ಲಿ ಮರ ಭೂಮಿಯಲ್ಲಿ ನೀರಿನ ಬುಗ್ಗೆ ಉಕ್ಕಿ ಹರಿದಷ್ಟೇ ಸಂತಸವನ್ನುಂಟು ಮಾಡಿತು. ಇದರೊಂದಿಗೆ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಫ್ರಿಕಾ ತಂಡವೊಂದನ್ನು ಮೆಕ್ಸಿಕೋ ಇದೇ ಮೊದಲ ಬಾರಿಗೆ ಸೋಲಿಸಿದಂತಾಗಿದೆ.
ಬಾರ್ಸಿಲೋನಾ ತಂಡದ ಪ್ರಮುಖ ಆಟಗಾರ ಸ್ಯಾಂಟೋಸ್ ಮೆಕ್ಸಿಕೋ ತಂಡದ ಪರ ಗೋಲು ದಾಖಲಿಸಲು ಆಗಲಿಲ್ಲ. ಆದರೆ, ಗೋಲು ದಾಖಲಿಸಲು ನೆರವಾದರು. ಹೆಕ್ಟರ್ ಹೆರೆರಾ ಪಾಸ್ ಮಾಡಿದ ಚೆಂಡನ್ನು ಅವರು ಎದುರಾಳಿ ರಕ್ಷಣಾ ವಿಭಾಗದ ಇಬ್ಬರು ಆಟಗಾರರ ನಡುವೆ ಗೋಲು ಪೆಟ್ಟಿಗೆಯತ್ತ ನುಗ್ಗಿಸಿದರು. ಆದರೆ, ಪ್ರಯತ್ನ ಸಫಲವಾಗಲಿಲ್ಲ. ನಂತರ ಪೆರಾಲ್ಟಾ ಬಲವಾಗಿ ಗೋಲುಪೆಟ್ಟಿಗೆಯತ್ತ ನುಗ್ಗಿಸಿದ ಚೆಂಡನ್ನು ತಡೆಯುವಲ್ಲಿ ಕೆಮರೂನ್ ತಂಡ ವಿಫಲವಾಯಿತು.
ಆಕ್ರಮಣಕಾರಿ ಪ್ರದರ್ಶನ ನೀಡಿದ ಮೆಕ್ಸಿಕೋ ತಂಡ ಪಂದ್ಯದ ಆರಂಭದಿಂದಲೂ ಕೆಮರೂನ್ ಮೇಲೆ ಪಾರಮ್ಯ ಮೆರೆದಿದ್ದು ಕಂಡುಬಂದಿತು. ಆದರೆ, ಅವರ ರಕ್ಷಣಾ ವಿಭಾಗ ಕೊಂಚ ವೈಫಲ್ಯ ಅನುಭವಿಸಿದ್ದು ಕಂಡುಬಂದಿತು. ಪೆರಾಲ್ಟಾ ಅವರು ಗೋಲು ದಾಖಲಿಸುವ ಮುನ್ನ ಪಂದ್ಯದ 10ನೇ ಮತ್ತು 31ನೇ ನಿಮಿಷದಲ್ಲಿ ದಾಖಲಿಸಿದ ಗೋಲುಗಳನ್ನು ನಿರಾಕರಿಸಲಾಯಿತು.  ಮೊದಲು ಬಲ ಬದಿಯಿಂದ ಸ್ಟ್ರೈಕರ್ ಹೆಕ್ಟರ್ ಹೆರಾರಾರೆ ಪಾಸ್ ಮಾಡಿದ ಚೆಂಡನ್ನು ಗೋಲಾಗಿಸುವಲ್ಲಿ ಸ್ಯಾಂಟೋಸ್ ಯತ್ನಿಸಿದ್ದರು. ಆದರೆ, ಅದನ್ನು ನಿರಾಕರಸಲಾಯಿತು. ಹೀಗಾಗಿ ಕ್ರೀಡಾಂಗಣದಲ್ಲಿ ನೆರೆದಿದ್ದ ಮೆಕ್ಸಿಕೋದ ಅಪಾರ ಅಭಿಮಾನಿಗಳಲ್ಲಿ ಮೌನ ಆವರಿಸಿತು.
ಇದಾಗಿ 6 ನಿಮಿಷಗಳ ನಂತರ, ಕೆಮರೂನ್ ದಂತಕತೆ ಸ್ಯಾಮುಯಲ್ ಎಟೋ ಅವರು ಮೂಲೆಯಿಂದ ಚೆಂಡನ್ನು ನೆಟ್ಗೆ ಬಡಿಯುವಂತೆ ಮಾಡಿದ್ದರು. ಈ ಸಮಯದಲ್ಲಿ ಆಫ್ರಿಕಾ ತಂಡವನ್ನು ಮುನ್ನಡೆ ಕಂಡುಕೊಳ್ಳುವಂತೆ ಮಾಡಲು ಎಟೋ ಸದಾವಕಾಶವನ್ನು ಹೊದಿದ್ದರು. ಆದರೆ, ಚೆಂಡನ್ನು ಅಡ್ಡ ಹೊಡೆದದ್ದರಿಂದ ಗುರಿ ತಪ್ಪಿತು.
ಆಗ ಮೆಕ್ಸಿಕೋದ ರಕ್ಷಣಾ ವಿಭಾಗ ಕೊಂಚ ವೈಫಲ್ಯ ಹೊಂದಿದಂತೆ ಕಂಡಬಂದಿತು.
ಆದರೆ, 31ನೇ ನಿಮಿಷದಲ್ಲಿ ಸ್ಯಾಂಟೋಸ್ ಅವರಿಗೆ ನಂಬಲಾಗ ಮಾದರಿಯಲ್ಲಿ ಅವಕಾಶವೊಂದು ಒಲಿದು ಬಂದಿತ್ತು. ಆದರೆ, ಲೈನ್ಸ್ಮೆನ್ಗಳು ಧ್ವಜ ಎತ್ತಿ ಹಿಡಿಯುವ ಮೂಲಕ ಮೆಕ್ಸಿಕೋಗೆ ಮತ್ತೊಮ್ಮೆ ನಿರಾಸೆ ಉಂಟು ಮಾಡಿದರು.

ಗೋಲು ವಿವರ
ಮೆಕ್ಸಿಕೋ-1
ಒರಿಬೆ ಪೆರಾಲ್ಟಾ 61ನೇ ನಿಮಿಷ

ಸೋತ ನಿರಾಸೆಯಲ್ಲಿ ಕೆಮರೂನ್ ಆಟಗಾರರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement