ದುಃಖದ ಮಡುವಿನಲ್ಲಿ ಕ್ರೊವೇಷಿಯಾ ಅಭಿಮಾನಿಗಳು
ಜಾಗ್ರೆಬ್: ಬ್ರೆಜಿಲ್ನಲ್ಲಿ ಆರಂಭವಾಗಿರುವ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಬ್ರೆಜಿಲ್ ವಿರುದ್ಧ 3-1 ಗೋಲುಗಳಿಂದ ಸೋತ ಕ್ರೊವೇಷಿಯಾ ಅಭಿಮಾನಿಗಳು ದುಃಖದಲ್ಲಿ ಮಡುವಿನಲ್ಲಿ ಮುಳುಗಿದ್ದಾರಂತೆ.ಕ್ರೊವೇಷಿಯಾದಾದ್ಯಂತ ಇರುವ ಹಲವಾರು ನಗರಗಳಲ್ಲಿ ಸಾವಿರಾರು ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸಿದ್ದಾರೆ.
ಕಾತರ ಮತ್ತು ಅಚ್ಚರಿಯೊಂದಿಗೆ ಮಹತ್ವದ ಪಂದ್ಯಕ್ಕಾಗಿ ಕಾದು ಕುಳಿತಿದ್ದ ಅಭಿನಿಗಳಿಗೆ ತಮ್ಮ ತವರಿನ ತಂಡ ಸೋಲನುಭವಿಸಿದ್ದು, ಒಂದೇ ಬಾರಿಗೆ ಸಿಡಿಲು ಬಡಿದಷ್ಟು ದುಃಖವನ್ನು ತಂದೊಡ್ಡಿದಂತಾಗಿದೆ.ಅಭಿಮಾನಿಗಳು ತಮ್ಮ ರಾಷ್ಟ್ರೀಯ ತಂಡದ ಜರ್ಸಿಯಾದ ಕೆಂಪು ಮತ್ತು ಬಿಳಿ ಬಣ್ಣ ಮಿಶ್ರಿತ ಟಿ ಶರ್ಟ್ಗಳನ್ನು ತೊಟ್ಟು, ಟಿವಿ ಸ್ಕ್ರೀನ್ಗಳಲ್ಲಿ ಮುಳುಗಿಕೊಂಡಿದ್ದರು. ಆದರೆ, ತಂಡದ ಸೋಲು ಅವರನ್ನು ದುಃಖದಲ್ಲಿ ಮುಳುಗಿಸಿತು.