ಪೆನಾಲ್ಟಿ ವಿರುದ್ಧ ಹರಿಹಾಯ್ದ ಕ್ರೊವೇಷಿಯಾ
ಸಾವೊ ಪೊಲೊ: ಆತಿಥೇಯ ಬ್ರೆಜಿಲ್ ವಿರುದ್ಧ ನಡೆದ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ತಮ್ಮ ವಿರುದ್ಧ ಪೆನಾಲ್ಟಿ ನೀಡಿದ್ದನ್ನು ವಿರೋಧಿಸಿ ರೊಚ್ಚಿಗೆದ್ದ ಕ್ರೊವೇಷಿಯಾ ರಕ್ಷಣಾ ವಿಭಾಗದ ಆಟಗಾರ ಡೆಜಾನ್ ಲೋವ್ರೆನ್ ವಿರುದ್ಧ ಹರಿಹಾಯ್ದಿದಿದ್ದಾರೆ.
ಬ್ರೆಜಿಲ್‌ನ ಮಾರ್ಸೆಲೋ ಅವರು ಸ್ವಯಂ ಗೋಲು ದಾಖಲಿಸಿಕೊಡುವ ಮೂಲಕ ಪಂದ್ಯದ ಆರಂಭದಲ್ಲಿ ದುರ್ಬಲ ಕ್ರೊವೇಷಿಯಾ ಮುನ್ನಡೆ ಪಡೆದುಕೊಂಡಿತ್ತು. ಆದರೆ, ನಂತರ ಅದ್ಭುತ ಗೋಲು ದಾಖಲಿಸಿದ ನೇಮಾರ್ ಅವರು ಸಮಬಲ ಸಾಧಿಸುವಂತೆ ನೋಡಿಕೊಂಡರು.
ಆದರೆ, ಪಂದ್ಯದಲ್ಲಿ ರೆಫ್ರಿಯಾಗಿದ್ದ ಜಪಾನ್‌ನ ಯೂಚಿ ನಿಶಿಮೂರಾ ಅವರು ಲೋವ್ರೆನ್ ಮುಟ್ಟಿದ ತಕ್ಷಣ ಬ್ರೆಜಿಲ್‌ನ ಫ್ರೆಡ್ ಬಿದ್ದ ಹಿನ್ನೆಲೆಯಲ್ಲಿ ಪೆನಾಲ್ಟಿ ನೀಡಿದರು. ಆದರೆ, ಲೋವ್ರೆನ್ ಅವರು ಫ್ರೆಡ್ ಅವರನ್ನು ಬೇಕಂತಲೇ ದೂಡಲಿಲ್ಲವಾದರೂ, ಪೆನಾಲ್ಟಿ ನೀಡಿದ್ದು ವಿವಾದ ಉಂಟುಮಾಡಿದೆ. ಇದು ವಿಶ್ವಕಪ್ ಪಂದ್ಯಾವಳಿಯಲ್ಲಿ ಜಪಾನ್‌ಗೇ ಅವಮಾನವನ್ನುಂಟು ಮಾಡಿದಂತಾಗಿದೆ.