ಭಾರತೀಯ ಮಹಿಳೆಯರಿಗೆ ಮೆಸ್ಸಿ ಅಚ್ಚುಮೆಚ್ಚು
ಕೋಲ್ಕತಾ: ವಿಶ್ವಕಪ್‌ನಲ್ಲಿ ಭಾಗವಹಿಸಿರುವ ಪ್ರಮುಖ ಸ್ಟಾರ್ ಆಟಗಾರರಲ್ಲಿ ಒಬ್ಬರಾಗಿರುವ ಲಯೋನೆಲ್ ಮೆಸ್ಸಿ, ಪಂದ್ಯಾವಳಿಯ ನೆಚ್ಚಿನ ಆಟಗಾರ ಎಂದು ಭಾರತೀಯ ಮಹಿಳೆಯರು ಮತ ನೀಡಿರುವುದಾಗಿ ಸಮೀಕ್ಷೆಯೊಂದು ತಿಳಿಸಿದೆ.2014ರ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಹೆಚ್ಚು ಆಕರ್ಷಕ ಆಟಗಾರ ಯಾರು ಎಂದು ಕೇಳಿದ ಪ್ರಶ್ನೆಗೆ, ಶೇ. 56.6ರಷ್ಟು ಅವಿವಾಹಿತ ಮಹಿಳೆಯರು ಮೆಸ್ಸಿ ಪರ ಮತ ನೀಡಿದ್ದಾರೆ ಎಂದು ಶಾದಿಡಾಟ್‌ಕಾಮ್ ಸಮೀಕ್ಷೆ ತಿಳಿಸಿದೆ.ಇನ್ನು ಪೊರ್ಚುಗಲ್ ಮತ್ತು ರಿಯಲ್ ಮ್ಯಾಡ್ರಿಡ್ ತಂಡದ ನಾಯಕನಾಗಿರುವ ಕ್ರಿಸ್ಟಿಯಾನ್ ರೊನಾಲ್ಡೊ ಅವರು ಶೇ. 53.4ರಷ್ಟು ಮತ ಪಡೆದಿದ್ದು ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಮೆಂಚೆಸ್ಟೋರ್ ಯುನೈಟೆಡ್‌ನ ವೇನ್ ರೂನಿ ಶೇ. 51.5ರಷ್ಟು ಮತ ಪಡೆದುಕೊಂಡಿದ್ದಾರೆ.ಬ್ರೆಜಿಲ್ ತಂಡದ ಮಿಡ್‌ಫೀಲ್ಡರ್ ರಿಕಾರ್ಡೋ ಕಾಕಾ ಅವರು ಶೇ. 49.3ರಷ್ಟು ಮತ ಪಡೆದು ಅತಿ ಸುಂದರ ಫುಟ್ಬಾಲ್ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.