ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ಮರಡೋನಾ ಮುತ್ತುತ್ತಿರುವ ಬ್ರೆಜಿಲ್ ಅಭಿಮಾನಿಗಳು

Srinivasa Murthy VN
Updated On : 16 Jun 2014, 12:06 pm

ಸಾವೊ ಪೊಲೊ: ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಬ್ರೆಜಿಲ್ ಅಭಿಮಾನಿಗಳು ಅರ್ಜೆಂಟೀನಾದ ಮಾಜಿ ಫುಟ್ಬಾಲ್ ದಂತಕತೆ ಡಿಗೋ ಮರಡೋನಾ ಅವರನ್ನು ಮುತ್ತಿಕೊಳ್ಳುತ್ತಿದ್ದಾರಂತೆ. ಉದ್ಘಾಟನಾ ಪಂದ್ಯದಲ್ಲೇ ಅಭಿಮಾನಿಗಳಿಂದ ಬಿಡಿಸಿಕೊಳ್ಳಲು ಮರಡೋನಾ ಒದ್ದಾಡಿದ್ದಾರಂತೆ.
ಹೀಗಾಗಿ ಪಂದ್ಯ ನಡೆಯುವಾಗಿ ತಮ್ಮನ್ನು ಮುತ್ತಿಕೊಳ್ಳುವ ಅಭಿಮಾನಿಗಳಿಂದ ತಪ್ಪಿಸಿಕೊಂಡು ಸ್ಥಾನ ಹುಡುಕಿಕೊಳ್ಳುವುದೇ ಮರಡೋನಾಗಿ ಸಮಸ್ಯೆಯಾಗಿ ಪರಿಣಮಿಸಿದೆಯಂತೆ.  ಅಭಿಮಾನಿಗಳಿಂದ ಅವರನ್ನು ರಕ್ಷಿಸಿದ್ದು, ಕಟ್ಟಡ ನಿರ್ಮಾಣ ಕಂಪನಿಯೊಂದರು ಉದ್ಯೋಗಿಗಳು. ಮರಡೋನಾ ಅವರನ್ನು ಅಭಿಮಾನಿಗಳಿಂದ ಬೇರ್ಪಡಿಸುವ ಮೂಲಕ ವಿಐಪಿ ಬಾಕ್ಸ್‌ಗೆ ಕರೆದುಕೊಂಡು ಹೋದರಂತೆ. ಈ ಸಮಯದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ, 1986ರಲ್ಲಿ ಅರ್ಜೆಂಟೀನಾಕ್ಕೆ ವಿಶ್ವಕಪ್ ಗೆದ್ದುಕೊಟ್ಟಿದ್ದ ಮರಡೋನಾ ಪಂದ್ಯಾವಳಿಯಲ್ಲಿ ಬ್ರೆಜಿಲ್ ವಿಜಯ ಸಾಧಿಸಲಿದೆ ಎಂದು ಹೇಳಿದ್ದಾರೆ.  'ಆತಿಥೇಯ ತಂಡದ ರಕ್ಷಣಾ ವಿಭಾಗ ನೀಡಿದ ಪ್ರದರ್ಶನ ನನಗೆ ಇಷ್ಟವಾಗಲಿಲ್ಲ. ಆದರೆ, ನೇಮಾರ್ ಸೇರಿದಂತೆ ಮುನ್ನಡೆ ವಿಭಾಗ ಶ್ರೇಷ್ಠ ಎಂದು ಮರಡೋನಾ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement