ವೇಶ್ಯೆಯರ ಫುಟ್ಬಾಲ್ ಆಟ
ಬೆಲೊ ಹಾರಿಜಾಂಟ್ (ಬ್ರೆಜಿಲ್): ಬ್ರೆಜಿಲ್ ವೇಶ್ಯೆಯರು ಕ್ರಿಶ್ಚಿಯನ್ ಮತಬೋಧಕರ ಗುಂಪಿನೊಂದಿಗೆ ಸೇರಿ, ವಿಶ್ವಕಪ್ ಅಂಗವಾಗಿ ಬೆಲೊ ಹಾರಿಜಂಟ್ ನಗರದಲ್ಲಿ ಫುಟ್ಬಾಲ್ ಪಂದ್ಯವೊಂದನ್ನು ಆಡಿದರು. ಲೈಂಗಿಕ ಕಾರ್ಯಕರ್ತೆಯರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಅವರು ಈ ಪಂದ್ಯವನ್ನು ಆಡಿದ್ದಾಗಿ ತಿಳಿಸಿದ್ದಾರೆ. ಶನಿವಾರ ಕೊಲಂಬಿಯಾ ಮತ್ತು ಗ್ರೀಸ್ ನಡುವೆ ನಡೆದ ಪಂದ್ಯದ ನಂತರ ವೇಶ್ಯೆಯರ ಪಂದ್ಯ ನಡೆದಿದೆ. ಸಂಚಾರಿ ಕೋನ್ಗಳನ್ನೇ ಅವರು ಗೋಲ್ಪೆಟ್ಟಿಗೆಗೆ ಉಪಯೋಗಿಸಿಕೊಂಡು, ಗಮನಸೆಳೆಯ ಮಾದರಿಯಲ್ಲಿ ಪಂದ್ಯವನ್ನು ಆಡಿದ್ದಾಗಿ ವರದಿಯಾಗಿದೆ. ವೇಶ್ಯೆಯರು ತಮ್ಮ ತಂಡಕ್ಕೆ 'ನೇಕಡ್ ಫುಟ್ಬಾಲ್ ಕ್ಲಬ್' ಎಂದು ನಾಮಕರಣ ಮಾಡಿಕೊಂಡಿದ್ದರಂತೆ. ಪಂದ್ಯದಲ್ಲಿ ಬ್ರೆಜಿಲ್ ಬಣ್ಣಗಳಾದ ಹಸಿರು ಮತ್ತು ಹಳದಿ ಜರ್ಸಿಗಳನ್ನು ತೊಟ್ಟುಕೊಂಡು, ಕ್ರಿಶ್ಚಿಯನ್ ಮತ ಬೋಧಕರ ಗುಂಪಿನೊಂದಿಗೆ ಸೇರಿಕೊಂಡು ಸ್ಥಳೀಯ ವಿಶ್ವವಿದ್ಯಾಲಯದ ತಂಡ ವಿರುದ್ಧ ಪಂದ್ಯವನ್ನಾಡಿದ್ದಾರೆ.