ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ಆನ್‌ಲೈನಲ್ಲಿ ಬೆತ್ತಲಾದ ಕ್ರೊವೇಷಿಯಾ ಆಟಗಾರರು!

ಬ್ರೆಜಿಲ್ ವಿರುದ್ಧ ಸೋಲನುಭವಿಸಿದ್ದ...

Srinivasa Murthy VN
Updated On : 17 Jun 2014, 11:34 am

ಸಾಲ್ವಾಡೋರ್ (ಬ್ರೆಜಿಲ್): ವಿಶ್ವಕಪ್‌ನ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಬ್ರೆಜಿಲ್ ವಿರುದ್ಧ ಸೋಲನುಭವಿಸಿದ್ದ ಕ್ರೊವೇಷಿಯಾ ಆಟಗಾರರಿಗೆ ಅಷ್ಟೊಂದು ಮುಜುಗರವಾಗಿರಲಿಲ್ಲವೇನೊ? ಆದರೆ, ತಮ್ಮ ಬೆತ್ತಲೆ ಚಿತ್ರಗಳು ಈಗ ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವುದು ಅವರಿಗೆ ಇಲ್ಲದ ಮುಜುಗರ ಉಂಟುಮಾಡಿವೆ. ಇದು ಆಟಗಾರರ ತಪ್ಪಲ್ಲ ಬಿಡಿ. ಪಾಪ ಮೊದಲ ಪಂದ್ಯದಲ್ಲೇ ಸೋತ ಆಟಗಾರರು ಚಿಂತೆಯಲ್ಲಿ ಮುಳುಗಿದ್ದಾರೆ. ಆದರೆ, ಕೆಲ ಕಿಡಿಗೇಡಿಗಳು ಆಟಗಾರರು ತಂಗಿದ್ದ ಹೋಟೆಲ್‌ಗೆ ಪ್ರವೇಶಿಸಿ ಅವರು ಸ್ನಾನ ಮಾಡುತ್ತಿದ್ದಾಗ ಕದ್ದು ಬೆತ್ತಲೆ ಚಿತ್ರ ತೆಗೆದು ಅವನ್ನು ಆನ್‌ಲೈನ್‌ನಲ್ಲಿ ಹರಿದಾಡುವಂತೆ ಮಾಡಿದ್ದಾರೆ.ಆದರೆ, ಈ ಕೃತ್ಯದ ಕುರಿತು ಮಾಧ್ಯಮದೊಂದಿಗೆ ಮಾತನಾಡಲು ಕ್ರೊವೇಷಿಯಾ ಆಟಗಾರು ನಿರಾಕರಿಸಿದ್ದಾರೆ. 'ಅನಾಮಿಕರು ನಿಮ್ಮ ಬೆತ್ತಲೆ ಚಿತ್ರವನ್ನು ತೆಗೆದರೆ, ಆ ಬಗ್ಗೆ ನಿಮಗೆ ಹೇಗನಿಸುತ್ತದೆ. ಇಂತಹ ಸಂದರ್ಭದಲ್ಲಿ ಆಟಗಾರರು ನಿಮ್ಮೊಂದಿಗೆ ಹೇಗೆ ಮಾತನಾಡುತ್ತಾರೆ?' ಎಂದು ತಂಡದ ಕೋಚ್ ನಿಕೊ ಕೊವಾಚ್ ಗೊಷ್ಠಿಯೊಂದರಲ್ಲಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement