ನಟಾಲ್‌ಗೆ ಅಪ್ಪಳಿಸಿದ ಪ್ರವಾಹ
ರಿಯೋ ಡಿ ಜನೈರೋ: ಬ್ರೆಜಿಲ್ ಇಡೀ ವಿಶ್ವಕ್ಕೆ ಫುಟ್ಬಾಲ್ ಜ್ವರ ಹಿಡಿಸಿದೆ. ಆದರೆ, ಅಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ವಿಶ್ವಕಪ್ ಆತಿಥ್ಯ ವಹಿಸಿಕೊಂಡಿರುವ ನಗರ ನಟಾಲ್ ಈಗ ಜ್ವರದಿಂದ ಬಳಲುವಂತಾಗಿದೆ. ಕಾರಣ, ನಟಾಲ್ ನಗರಕ್ಕೆ ಭಾರೀ ಪ್ರವಾಹ ಅಪ್ಪಳಿಸಿದೆ. ನಟಾಲ್‌ನಲ್ಲಿ ನಡೆಯಲಿರುವ ಪಂದ್ಯಗಳಿಗೆ ಇದು ತೊಂದರೆಯೊಡ್ಡಬಹುದು ಎನ್ನಲಾಗಿದೆ. ಆದರೆ, ಇದುವರೆಗೂ ಯಾವುದೇ ರೀತಿಯ ಸಾವು ನೋವು ಸಂಬವಿಸಿರುವ ಬಗ್ಗೆ ವರದಿಯಾಗಿಲ್ಲ. ಆದರೆ, ಜೂನ್ ಆರಂಭದಿಂದಲೂ ಮಳೆ ಸುರಿಯುತ್ತಿದ್ದು, ಈಗ ಅಲ್ಲಿನ ಜನರಿಗೆ ಎಚ್ಚರಿಕೆ ನೀಡುವಂತಾಗಿದೆ. ಅಲ್ಲದೆ ಸುತ್ತಮುತ್ತಲಿನ ನಗರಗಳಲ್ಲಿ ಪ್ರವಾಹದಿಂದ ಹಲವಾರು ಜನರು ತಮ್ಮ ನಿವಾಸಗಳನ್ನು ಕಾಲಿ ಮಾಡಿದ್ದಾರೆ.