ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಫಿಫಾ ವಿಶ್ವಕಪ್ 2014

ಮೋದಿ 'ಗೋಲ್‌' ಬ್ರೆಜಿಲ್ ಕಡೆಗೆ: ಫೈನಲ್ ವೀಕ್ಷಣೆಗೆ ಆಹ್ವಾನ

ಭೂತಾನ್ ಆಯಿತು, ಫಿಫಾ ವಿಶ್ವಕಪ್ ನೆಲವೂ ಮೋದಿ..

Srinivasa Murthy VN
Updated On : 17 Jun 2014, 11:33 am

ನವದೆಹಲಿ: ಭೂತಾನ್ ಆಯಿತು, ಫಿಫಾ ವಿಶ್ವಕಪ್ ನೆಲವೂ ಮೋದಿ ಪಾದಸ್ಪರ್ಶಕ್ಕೆ ಹಾತೊರೆಯುತ್ತಿದೆ. ಬ್ರೆಜಿಲ್ ಡಿಲ್ಮಾ ರೌಸೆಫ್, ಫುಟ್ಬಾಲ್ ವಿಶ್ವಕಪ್ ಫೈನಲ್ ವೀಕ್ಷಿಸಲು ರಿಯೋ ಡಿ ಜನೈರೋಗೆ ಬರುವಂತೆ ಅವರಿಗೆ ಅಧಿಕೃತ ಆಹ್ವಾನ ರವಾನಿಸಿದ್ದಾರೆ.
ಜುಲೈ 13ರಂದು ಫಿಫಾ ಫೈನಲ್ ಪಂದ್ಯ ನಡೆಯಲಿದ್ದು, ಇದೇ ಸಮಯದಲ್ಲಿ ಬ್ರಿಕ್ಸ್ ಸಭೆಯನ್ನೂ ಬ್ರೆಜಿಲ್ ಇಟ್ಟುಕೊಂಡಿದೆ. ಬ್ರಿಕ್ಸ್ ಸಭೆ ಜುಲೈ 15ರಿಂದ 17ರವರೆಗೆ ನಡೆಯಲಿದ್ದು, ಭಾರತದ ಪ್ರಧಾನಿಯೊಟ್ಟಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್, ದಕ್ಷಿಣ ಆಫ್ರಿಕ ಅಧ್ಯಕ್ಷ ಜಾಕೊಬ್ ಝಮಾ ಪಾಲ್ಗೊಳ್ಳುವರು. ಇದರೊಂದಿಗೆ ಬ್ರೆಜಿಲ್ ಸಹ ಬ್ರಿಕ್ಸ್‌ನ ಸದಸ್ಯ ರಾಷ್ಟ್ರ.
ಮೋದಿಗೆ ಫುಟ್ಬಾಲ್ ಕಣ್ಣು: ಬ್ರಿಕ್ಸ್ ಸಮ್ಮೇಳನ ಸಾಮಾನ್ಯವಾಗಿ ಮಾರ್ಚ್‌ನಲ್ಲಿ ನಡೆಯುವಂಥದ್ದು. ಚೀನಾ ಅಧ್ಯಕ್ಷ ಜಿಂಪಿಂಗ್ ಅವರಿಗೆ ಫುಟ್ಬಾಲ್ ಮೇಲೆ ವಿಶೇಷ ಪ್ರೀತಿ ಇದ್ದ ಕಾರಣ ಅವರ ಮನವಿ ಮೇರೆಗೆ ಬ್ರೆಜಿಲ್, ಜುಲೈನಲ್ಲೇ ಸಮ್ಮೇಳನ ಇಟ್ಟುಕೊಂಡಿದೆ. ಇದು ಮೋದಿ ಅವರಿಗೂ ಅನುಕೂಲವಾಗಲಿದೆ. ಈಗಾಗಲೇ ಫುಟ್ಬಾಲ್ ಕುರಿತ ಅಂಚೆ ಚೀಟಿ ಬಿಡುಗಡೆ ಮಾಡಿರುವ ಮೋದಿ, ಫಿಪಾ ವಿಶ್ವಕಪ್ ರಾಷ್ಟ್ರ-ರಾಷ್ಟ್ರಗಳ ನಡುವೆ ಸಂಬಂಧ ಬೆಸೆಯುವಂಥದ್ದು ಎಂದಿದ್ದರು. ಅಲ್ಲದೆ, ಅಂಡರ್-17 ಫಿಫಾ ವಿಶ್ವಕಪ್ ಆಡಿಸಲು ಭಾರತ ಸಿದ್ಧವಿದೆ ಅಂತಲೂ ಮೋದಿ ಹೇಳಿರುವುದು ಫುಟ್ಬಾಲ್ ಮೇಲಿನ ಪ್ರೀತಿಯಿಂದಲೇ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement