ಫಿಫಾ ವಿಶ್ವಕಪ್ 2014

ಹಾಲೆಂಡ್- ಚಿಲಿ: ಯಾರು ಹುಲಿ?

ಸಾವೊ ಪೊಲೊ: ಲೀಗ್ ಹಂತದ ಮೊದಲೆರಡು ಪಂದ್ಯಗಳಲ್ಲಿ ಜಯ ಸಾಧಿಸಿ, 'ಬಿ' ಗುಂಪಿನಲ್ಲಿ ಹಾಲಿ ಚಾಂಪಿಯನ್ ಸ್ಪೇನ್ ಮತ್ತು ಆಸ್ಟ್ರೇಲಿಯಾ ತಂಡಗಳನ್ನು ಮನೆಗೆ ಕಳುಹಿಸಿರುವ ಹಾಲೆಂಡ್ ಮತ್ತು ಚಿಲಿ ತಂಡಗಳು ತಮ್ಮ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಭಾನುವಾರ ಹೋರಾಟ ನಡೆಸಲಿವೆ.
ತಲಾ ಆರು ಅಂಕಗಳನ್ನು ಹೊಂದಿದ್ದು, ಈಗ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ 'ಬಿ' ಗುಂಪಿನಲ್ಲಿ ಅಗ್ರಸ್ಥಾನಪಡೆಯಲು ಎದುರು ನೋಡುತ್ತಿವೆ. ಅಲ್ಲದೆ, ಈ ಪಂದ್ಯದಲ್ಲಿ ಗೆದ್ದರೆ, ನಾಕೌಟ್ ಹಂತದಲ್ಲಿ 5 ಬಾರಿ ಚಾಂಪಿಯನ್ ಬ್ರೆಜಿಲ್ ತಂಡವನ್ನು ಎದುರಿಸುವ ಆತಂಕ ತಪ್ಪಲಿದೆ.
ಮೊದಲ ಪಂದ್ಯದಲ್ಲಿ ಸ್ಪೇನ್ ವಿರುದ್ಧ 5-1 ಮತ್ತು ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 3-2 ಗೋಲುಗಳಿಂದ ಜಯ ಸಾಧಿಸಿರುವ ಹಾಲೆಂಡ್ ಈಗ 'ಬಿ' ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು 'ಎ' ಗುಂಪಿನಲ್ಲಿ ಅಗ್ರಸ್ಥಾನ ಪಡೆಯಲು ಬ್ರೆಜಿಲ್ ಫೇವರಿಟ್ ಎನಿಸಿದೆ. ಹೀಗಾಗಿ ಬ್ರೆಜಿಲ್ ತಂಡ 'ಬಿ' ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯುವ ತಂಡವನ್ನು ಎದುರಿಸಲಿದೆ.
ಆದರೆ, ಎ ಗುಂಪಿನಲ್ಲಿ ಬ್ರೆಜಿಲ್, ಮೆಕ್ಸಿಕೊ ಹಾಗೂ ಕ್ರೊವೇಷಿಯಾ ತಂಡಗಳು ಕೇವಲ 1 ಅಂಕದ ವ್ಯತ್ಯಾಸ ಹೊಂದಿವೆ. ಹೀಗಾಗಿ, ಯಾರು ಯಾರನ್ನು ಎದುರಿಸಲಿದ್ದಾರೆ ಎಂಬುದನ್ನು ಈಗಲೇ ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ಹಾಲೆಂಡ್ ಪರ ಅಂಗಣದಲ್ಲಿ ಪಾದರಸದಂತೆ ಹರಿದಾಡುತ್ತಿರುವ ಅರ್ಜೆನ್ ರಾಬೆನ್ ಅವರು ಎಲ್ಲರ ಗಮನ ಸೆಳೆದಿದ್ದಾರೆ. ರಾಬೆನ್ ಗಂಟೆಯೊಂದಕ್ಕೆ 37 ಕಿ.ಮೀ. ವೇಗದಲ್ಲಿ ಸಾಗುತ್ತಿದ್ದಾರಂತೆ. ಓರ್ವ ಫುಟ್ಬಾಲ್ ಆಟಗಾರನಾಗಿ ಇದು ದಾಖಲೆಯಾಗಿದೆ. ಹೀಗಾಗಿ ಹಾಲಿ ಚಾಂಪಿಯನ್ ಸ್ಪೇನ್ ವಿರುದ್ಧ ಪಾರಮ್ಯ ಮೆರೆಯಲು ಹಾಲೆಂಡ್‌ಗೆ ಸಾಧ್ಯವಾಗಿದೆ. ಬೇರ್ನ್ ಮ್ಯೂನಿಚ್ ಆಟಗಾರ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಯಾವ ರೀತಿ ಪರಿಣಾಮಕಾರಿಯಾದ ಪ್ರದರ್ಶನ ನೀಡಲಿದ್ದಾರೆ ಎಂಬುದು ಈಗ ಕುತೂಹಲ ಮೂಡಿಸಿದೆ.  ರಾಬೆನ್ ಮತ್ತು ಮೆಂಚೆಸ್ಟರ್ ಯುನೈಟೆಡ್‌ನ ರಾಬಿನ್ ವ್ಯಾನ್ ಪರ್ಸಿ ಈ ವಿಶ್ವಕಪ್‌ನಲ್ಲಿ ತಲಾ ಮೂರು ಗೋಲು ದಾಖಲಿಸಿದ್ದಾರೆ. ಹಾಲೆಂಡ್ ತಂಡ ಸತತ 2ನೇ ಫೈನಲ್ ಪ್ರವೇಶಿಸಬೇಕಾದರೆ, ಈ ಇಬ್ಬರು ಆಟಗಾರರು ಇನ್ನೂ ಅತ್ಯುತ್ತಮ ಆಟ ಪ್ರದರ್ಶಿಸುವ ಅಗತ್ಯವಿದೆ.

ಹಾಲೆಂಡ್-ಚಿಲಿ
ಗುಂಪು-ಬಿ;
ಪಂದ್ಯ ಆರಂಭ:
ರಾತ್ರಿ 09.30
14-ರ್ಯಾಂಕ್-14
01-ಪಂದ್ಯ-01
00-ಜಯ-00
00-ಸೋಲು-00
02-ಗೋಲುಪರ-02
ಒಟ್ಟು ಗೋಲು-4

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಸ್ಥಳೀಯ ಸಂಸ್ಥೆಗಳಿಗೂ ಜಿಎಸ್‌ಟಿ ಆದಾಯ ಹಂಚಿಕೆ: GST ಮಂಡಳಿಗೆ ರಾಜ್ಯ ಸರ್ಕಾರ ಪ್ರಸ್ತಾವನೆ

ಬೆಂಗಳೂರು: ನಮ್ಮ ಮೆಟ್ರೋ ರೈಲಿನಲ್ಲಿ 18 ನಿಮಿಷದಲ್ಲಿ ಜೀವಂತ ಹೃದಯ ಸಾಗಾಟ!

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ