ಪರಿಸರ ಸ್ನೇಹಿ ವಿಶ್ವಕಪ್ ಪಂದ್ಯಾವಳಿಗೆ ಬ್ರೆಜಿಲ್ ಸಂಕಲ್ಪ
ಬ್ರಾಜಿಲ್ಲಾ: ಪ್ರಸಕ್ತ ಫಿಫಾ ವಿಶ್ವಕಪ್ ಪಂದ್ಯಾವಳಿಯನ್ನು ಪರಿಸರ ಸ್ನೇಹಿ ಟೂರ್ನಿಯಾಗಿ ಮಾಡಲು ಆತಿಥೇಯ ಬ್ರೆಜಿಲ್ ನಿರ್ಧರಿಸಿದ್ದು, ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಕೆಲವು ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ನಾವು ಹಸಿರಿನ ಗೋಲು ದಾಖಲಿಸಬೇಕು ಎಂದು ಬ್ರೆಜಿಲ್ ಪರಿಸರ ಸಚಿವ ಇಜಬೆಲ್ಲಾ ಟೆಕ್ಸಿರಾ ತಿಳಿಸಿದ್ದಾರೆ.
ಸಾಮಾನ್ಯವಾಗಿ ವಿಶ್ವಕಪ್ ಹಾಗೂ ಇತರೆ ಪ್ರಮುಖ ಕ್ರೀಡಾ ಟೂರ್ನಿಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತವೆ. ಈ ಬಾರಿಯ ಪಂದ್ಯಾವಳಿಯ ವೇಳೆ 59 ಸಾವಿರ ಟನ್‌ನಷ್ಟು ಕಾರ್ಬನ್ ಅನ್ನು ಪರಿಸರಕ್ಕೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
2012ರ ಲಂಡನ್ ಒಲಿಂಪಿಕ್ಸ್ ವೇಳೆ ಉತ್ತಮ ಕ್ರಮಗಳನ್ನು ಕೈಗೊಳ್ಳುವ ಮೂಲಕ 1.4 ಮಿಲಿಯನ್‌ನಷ್ಟು ಕಾರ್ಬನ್ ಬಿಡುಗಡೆಯಾಗಿದ್ದು, ಅರ್ಧದಷ್ಟು ಪ್ರಮಾಣ ಕಡಿಮೆ ಮಾಡಲಾಗಿತ್ತು. ಹಾಗಾಗಿ ಈ ಬಾರಿಯು ಪರಿಸರ ಮಾಲಿನ್ಯ ಪ್ರಮಾಣವನ್ನು ಕಡಿಮೆ ಮಾಡಲು ಬೇಕಾದ ಎಲ್ಲಾ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಟೆಕ್ಸಿರಾ ತಿಳಿಸಿದರು.
ಫಿಕ್ಸಿಂಗ್ ನೆರಳಲ್ಲಿ ನೈಜಿರಿಯಾ ಪಂದ್ಯ: ಲಂಡನ್‌ನಲ್ಲಿ ನೈಜಿರಿಯಾ ಹಾಗೂ ಸ್ಕಾಟ್ಲೆಂಡ್ ನಡುವಣ ವಿಶ್ವಕಪ್ ಅಭ್ಯಾಸ ಪಂದ್ಯದ ಮೇಲೆ ಮ್ಯಾಚ್ ಫಿಕ್ಸಿಂಗ್ ನೆರಳು ಬಿದ್ದಿದ್ದು, ಪೊಲೀಸರಿಂದ ತನಿಖೆಯಾಗಲಿದೆ ಎಂದು ವರದಿಯಾಗಿದೆ.
ನ್ಯಾಷನಲ್ ಕ್ರೈಮ್ ಏಜೆನ್ಸಿ ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ ಎಂದು ಡೈಲಿ ಟೆಲಿಗ್ರಾಫ್ ವರದಿ ಮಾಡಿದೆ. ಅಲ್ಲದೆ ಪಂದ್ಯವನ್ನು ಫಿಕ್ಸ್ ಮಾಡುವುದರ ಬಗ್ಗೆ ಎಚ್ಚರಿಕೆಯನ್ನು ರವಾನೆ ಮಾಡಲು ಫಿಫಾಗೆ ಒತ್ತಾಯಿಸಿದೆ.
ವಿಶ್ವಕಪ್ ತಯಾರಿಗಾಗಿ ನೈಜಿರಿಯಾ ತಂಡ ತನ್ನ ತವರಿನಲ್ಲೇ ಅಭ್ಯಾಸ ಪಂದ್ಯವನ್ನು ಆಯೋಜಿಸಿತ್ತು.
ಈ ಕುರಿತು ಮಾಹಿತಿ ನೀಡಲು ನಿರಾಕರಿಸಿರುವ ಎನ್‌ಸಿಎ ಅಧಿಕಾರಿಗಳು, ಸಮಯಕ್ಕೆ ಅನುಗುಣವಾಗಿ ತಾವೇ ಅಗತ್ಯ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ.
ಹಬ್ಬದ ವಾತಾವರಣ: ಫಿಫಾ ವಿಶ್ವಕಪ್‌ಗೆ ಕೆಲವೇ ದಿನಗಳು ಬಾಕಿ ಇದ್ದು, ಬ್ರೆಜಿಲ್‌ನಲ್ಲಿ ಹಬ್ಬದ ವಾತಾವರಣ ಹೆಚ್ಚುತ್ತಿದೆ.
ಅಲ್ಲದೆ ಕ್ರಿಶ್ಚಿಯಾನೊ ರೊನಾಲ್ಡೊ ಹಾಗೂ ಲಿಯೊನೆಲ್ ಮೆಸ್ಸಿ ಈ ವಾತಾವರಣಕ್ಕೆ ಹೆಚ್ಚಿನ ಮೆರಗು ನೀಡುತ್ತಿದ್ದಾರೆ. ಹಬ್ಬವನ್ನು ಆಚರಿಸುವ ಸಲುವಾಗಿ ವಿಶ್ವ ಫುಟ್ಬಾಲ್ ಅಭಿಮಾನಿಗಳು ಬ್ರೆಜಿಲ್‌ಗೆ ತೆರಳುತ್ತಿರುವಂತಾಗಿದೆ.
ಲಿವರ್‌ಪೂಲ್ ಮ್ಯಾನೇಜರ್ ಬಿಲ್ಲಿ ಶಾಂಕ್ಲಿ ,ಈ ಹಿಂದೆ ಜೀವ ಮತ್ತಾ ಸಾವಿಗಿಂತ ಫುಟ್ಬಾಲ್ ಕ್ರೀಡೆ ಪ್ರಮುಖ ಎಂದು ಬಣ್ಣಿಸಿದ್ದರು.