ಮಾವಿನಕಾಯಿ ಉಪ್ಪಿನಕಾಯಿ 
ಅಡುಗೆ

ಮಾವಿನಕಾಯಿ ಉಪ್ಪಿನಕಾಯಿ

ಮಾವಿನಕಾಯಿ ಉಪ್ಪಿನಕಾಯಿ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು

  • 2-3 ಮಾವಿನಕಾಯಿ
  • ಒಂದು ಕಪ್ ಕಲ್ಲು ಉಪ್ಪು
  • ಒಂದೂವರೆ ಕಪ್ ಬ್ಯಾಡಗಿ ಮೆಣಸು ಅಥವಾ ಮೆಣಸಿನ ಪುಡಿ
  •  5 ಚಮಚ ಸಾಸಿವೆ
  • ಸ್ವಲ್ಪ ಹಳದಿ
ಮಾಡುವ ವಿಧಾನ:
  • ಮಾವಿನಕಾಯಿಯನ್ನು ಬಟ್ಟೆಯೊಂದರಲ್ಲಿ ಉಜ್ಜಿಕೊಂಡು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ. ಅದಕ್ಕೆ ಉಪ್ಪು ಬೆರೆಸಿ ಒಂದು ಪಾತ್ರೆಯಲ್ಲಿ ಹಾಕಿಡಿ.
  • ಎರಡು-ಮೂರು ದಿನ ಕಳೆದ ನಂತರ ಒಂದು ಕಣ್ಣು ಪಾತ್ರೆಯಲ್ಲಿ ಮಾವಿನಕಾಯಿ ಹಾಕಿ ಅದರಿಂದ ಉಪ್ಪು ನೀರನ್ನು ಸೋಸಿಕೊಳ್ಳಿ.
  • ಮೆಣಸು ಹಾಗೂ ಸಾಸಿವೆಯನ್ನು ಪ್ರತ್ಯೇಕವಾಗಿ ನುಣ್ಣಗೆ ರುಬ್ಬಿಕೊಳ್ಳಬೇಕು.ಅದನ್ನು ಒಟ್ಟು ಮಾಡಿ ಹಳದಿಯನ್ನೂ ಸೇರಿಸಿ. 
  • ಒಲೆಯಲ್ಲಿ ಉಪ್ಪು ನೀರು ತಯಾರಿಸಿಕೊಂಡು ಅದು ತಣಿದ ನಂತರ ಮೆಣಸು, ಸಾಸಿವೆ ಹಾಗೂ ಹಳದಿ ಮಿಶ್ರಣಕ್ಕೆ ಸೇರಿಸಿ. ಆಗ ಉಪ್ಪಿನಕಾಯಿ ಮಸಾಲೆ ಸಿದ್ದವಾಗುತ್ತದೆ.
  • ನಂತರ ಇದಕ್ಕೆ ಮಾವಿನಕಾಯಿಯನ್ನು ಬೆರೆಸಿದಾಗ ಉಪ್ಪಿನಕಾಯಿ ಸಿದ್ದ. ಉಪ್ಪಿನಕಾಯಿ ತಯಾರಿಸುವ ಸಂದರ್ಭದಲ್ಲಾಗಲಿ, ಅದನ್ನು ಹಾಕಿಡುವ ವೇಳೆ, ಪಾತ್ರೆಯಲ್ಲಾಗಲಿ ನೀರು ಇರಬಾರದು. ನೀರು ಬಿದ್ದರೆ ಉಪ್ಪಿನಕಾಯಿ ಹಾಳಾಗುತ್ತದೆ.  ಸ್ವಲ್ಪ ದಿನಗಳು ಕಳೆದ ನಂತರ ತಿನ್ನಲು ಬಳಸಿ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಡಿ.ಕೆ. ಶಿವಕುಮಾರ್ ಜೊತೆ ಪ್ರಮಾಣವಚನ ಸ್ವೀಕರಿಸಲಿರುವ 10-12 ಸಚಿವರ ಪಟ್ಟಿ ಇಂದು ಪ್ರಕಟ ಸಾಧ್ಯತೆ

ಬೆನ್ನಿಗೆ ಚೂರಿ ಹಾಕುವ ಕೆಲಸ, ಬಿಜೆಪಿಗೆ ಸಹಾಯ ಮಾಡಲು ಹೀಗೆ ಮಾಡಿದ್ದಾರೆ: ಜಮೀರ್ ವಿರುದ್ಧ SS ಮಲ್ಲಿಕಾರ್ಜುನ್ ಆಕ್ರೋಶ

'ಭವಿಷ್ಯ ಕಾಣುತ್ತಿಲ್ಲ'; ಬಿಜೆಪಿ ನಾಯಕತ್ವ ಭೇಟಿ ಮಾಡಿದ Annamalai; ಸ್ವತಂತ್ರ ರಾಜಕೀಯ ಪಯಣದ ಸುಳಿವು!

ಪತಿ-ಪುತ್ರನಿಂದ ಸನಾತನ ಧರ್ಮ ನಾಶದ ಹೇಳಿಕೆ: ಚಾಮುಂಡಿ ಬೆಟ್ಟದಲ್ಲಿ ದುರ್ಗಾ ಸ್ಟಾಲಿನ್ ವಿಶೇಷ ಪೂಜೆ! ಜಿಟಿಡಿ ದಂಪತಿಗಳಿಂದ ಆಶೀರ್ವಾದ, Video

JOB Alert: DCC ಬ್ಯಾಂಕ್ ನಲ್ಲಿ 82 ಹುದ್ದೆಗಳು ಖಾಲಿ, ಈಗಲೇ ಅರ್ಜಿ ಸಲ್ಲಿಸಿ

SCROLL FOR NEXT