ಅಡುಗೆ

ಮದ್ದೂರು ವಡೆ

ಸಾಮಾನು:

  • ಅರ್ಧಸೇರು ಕಡಲೆಬೇಳೆ
  • ಒಂದುತೆಂಗಿನಕಾಯಿ
  • 12 ಈರುಳ್ಳಿ
  • ಒಂದುಹಿಡಿ ಎಳ್ಳು
  • ಎರಡುಟೇಬಲ್ ಚಮಚ ಉಪ್ಪು
  • ಹನ್ನೆರಡುಹಸಿಮೆಣಸಿನಕಾಯಿ
  • ಕಾಲುಚಮಚ ಸೋಡಾಪುಡಿ
  • 50 ಗ್ರಾಂಚಿರೋಟಿ ರವೆ
  • ಕರಿಯಲುಒಂದು ಕೆಜಿ ಕಡಲೆಕಾಯಿ ಎಣ್ಣೆ

ಮಾಡುವ ವಿಧಾನ:

ಕಡಲೆಬೇಳೆಯನ್ನುಒಂದು ಗಂಟೆಯ ಕಾಲ ನೀರಿನಲ್ಲಿನೆನೆಹಾಕಿ ಚೆನ್ನಾಗಿ ತೊಳೆದು, ಒರಳಿನಲ್ಲಿ ರುಬ್ಬಿಒಂದು ಪಾತ್ರಗೆ ಹಾಕಿಕೊಳ್ಳಬೇಕು. ರುಬ್ಬಿದಕಡಲೆಬೇಳೆಗೆ ತೆಂಗಿನಕಾಯಿ ತುರಿ, ಹೆಚ್ಚಿದ ಈರುಳ್ಳಿ,ಹಸಿಮೆಣಸಿನಕಾಯಿ, ಉಪ್ಪು, ಸೋಡಾಪುಡಿ, ಎಳ್ಳು,ಚಿರೋಟಿ ರವೆ, ಎರಡು ಚಮಚಕಾದ ಎಣ್ಣೆ ಹಾಕಿ ಚೆನ್ನಾಗಿಕಲೆಸಿಕೊಳ್ಳಬೇಕು. ಒಲೆಯ ಮೇಲೆ ಬಾಣಲೆಯಲ್ಲಿಎಣ್ಣೆ ಕಾದ ಮೇಲೆ ಅಂಗೈಅಗಲ ವಡೆಗಳನ್ನು ಎಲೆಯ ಮೇಲೆ ತಟ್ಟಿಎಣ್ಣೆಗೆ ಹಾಕಿ ಕೆಂಪಗೆ ಕರಿದರೆಬಿಸಿಬಿಸಿಯಾದ ಮದ್ದೂರು ವಡೆ ತಯಾರಾಗುತ್ತದೆ.

-ಮಂಜುಳ.ವಿ.ಎನ್

SCROLL FOR NEXT