- ನಾಟಿ ಕೋಳಿಯ ಮಾಂಸ - 1 ಕೆಜಿ
- ಎಣ್ಣೆ - 100 ಗ್ರಾಂ
- ಗಟ್ಟಿ ಮೊಸರು - 1 ಬಟ್ಟಲು
- ನಿಂಬೆಹಣ್ಣು - 1
- 10-12 ಕಾಶ್ಮೀರಿ ಮೆಣಸಿನಕಾಯಿ
- ಶುಂಠಿ- 2 ಸ್ವಲ್ಪ
- ಜೀರಿಗೆ - ಅರ್ಧ ಚಮಚ
- ಉಪ್ಪು - ರುಚಿಗೆ ತಕ್ಕಷ್ಟು
ಮಾಡುವ ವಿಧಾನ
- ಕೋಳಿಯ ಹೊಟ್ಟೆಯ ಸಾಮಾನುಗಳನ್ನು ತೆಗೆದು, ಇಡೀ ಕೋಳಿಯ ಚರ್ಮ ತೆಗೆದುಬಿಡಿ.
- ಶುದ್ಧವಾದ ಬಟ್ಟೆಯಲ್ಲಿ ಕೋಳಿಯ ಒಳಗೆ ಹೊರಗೆ ಒರೆಸಿ ತೇವ ತೆಗೆಯಬೇಕು.
- ಎದೆಯ ಭಾಗ ತೊಡೆಗಳ ಮೇಲೆ ಆಳವಾಗಿ ಗೀರಿ. ಮೊಸರನ್ನು ತೆಳುವಾದ ಬಟ್ಟೆಯಲ್ಲಿ ಕಟ್ಟಿ ನೀರನ್ನು ತೆಗೆದು ಕೆನೆಯನ್ನ ಉಳಿಸಿಕೊಳ್ಳಿ.
- ಅದರೊಂದಿಗೆ ಮೆಣಸಿನಕಾಯಿ, ಶುಂಠಿ ಬೆಳ್ಳುಳ್ಳಿ, ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಗಟ್ಟಿ ಮೊಸರಿನಲ್ಲಿ ನುಣ್ಣಗೆ ರುಬ್ಬಿ, ಬಣ್ಣ ಸಾಲದಿದ್ದರೆ ಮಸಾಲೆಗೆ 2 ತೊಟ್ಟು ತಂದುರಿ ಬಣ್ಣ ಸೇರಿಸಿ.
- ಒರೆಸಿಟ್ಟ ಕೋಳಿಯ ಒಳ ಹೊರ ಭಾಗಗಳಿಗೆ ಹಚ್ಚಿ ಒಂದೆರಡು ಗಂಟೆ ನೆನೆಸಿ.
- ನಂತರ ತಂದೂರಿಯನ್ನು ಒಲೆಯಲ್ಲಿ ಆಗಾಗ ಎಣ್ಣೆ ಸವರುತ್ತಾ ಬೇಯಿಸಿ. ಬಡಿಸುವ ಮೊದಲು ಕೋಳಿಗೆ ನಿಂಬೆರಸ ಸವರಿ. ನಾಟಿ ಕೋಳಿಯಾದ್ದರಿಂದ ರುಬ್ಬುವ ಮಸಾಲೆಗೆ 1 ಸಣ್ಣ ತುಂಟು ಪರಂಗಿಕಾಯಿ ತುರಿ ಸೇರಿಸಿ. ಇದು ಕೋಳಿಯನ್ನು ಮೃದವಾಗಿ ಮಾಡುತ್ತದೆ.
-ಮಂಜುಳ.ವಿ.ಎನ್