ಒಂದು ಬಟ್ಟಲು ತೆಗೆದುಕೊಂಡು ಅದರಲ್ಲಿ ಮೊಟ್ಟೆ, ಸಣ್ಣದಾಗಿ ಕತ್ತರಿಸಿಕೊಂಡ ಈರುಳ್ಳಿ, ಶುಂಠಿ, ಹಸಿ ಮೆಣಸಿನಕಾಯಿ ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ಒಲೆಯ ಮೇಲೆ ತವಾ ಇಟ್ಟು ಎಣ್ಣೆ ಹಾಕಿ ಸಣ್ಣದಾಗಿ ಕತ್ತರಿಸಿದ ಮಶ್ರೂಮ್ ಅನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.
ಈ ಮಶ್ರೂಮ್ ನ್ನು ಈಗಾಗೇಲೇ ಮಿಶ್ರಣ ಮಾಡಿಕೊಂಡ ಮೊಟ್ಟೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
ನಂತರ ತವಾಗೆ ಎಣ್ಣೆ ಹಾಕಿ ಈ ಮಿಶ್ರಣವನ್ನು ಆಮ್ಲೆಟ್ ಹಾಕುವ ರೀತಿಯಲ್ಲಿ ಹಾಕಿ ಪಾತ್ರೆಯಿಂದ ಮುಚ್ಚಿ ಸಾಧಾರಣ ಉರಿಯಲ್ಲಿ 4-5 ನಿಮಿಷ ಎರಡೂ ಕಡೆ ಬೇಯಿಸಿದರೆ ಮಶ್ರೂಮ್ ಆಮ್ಲೆಟ್ ಸರಿಯಲು ಸಿದ್ಧವಾಗುತ್ತದೆ.