ಲೆಮನ್ ಪೆಪ್ಪರ್ ಪನ್ನೀರ್ 
ಅಡುಗೆ

ಲೆಮನ್ ಪೆಪ್ಪರ್ ಪನ್ನೀರ್ | Lemon pepper Paneer Recipe in kannada

ರುಚಿಕರವಾದ ಲೆಮನ್ ಪೆಪ್ಪರ್ ಪನ್ನೀರ್ ಮಾಡುವ ವಿಧಾನ...

ಬೇಕಾಗುವ ಪದಾರ್ಥಗಳು...

  • ಪನ್ನೀರ್- 1 ಬಟ್ಟಲು

  • ಕಾರ್ನ್ ಫ್ಲೋರ್- 2-3 ಚಮಚ

  • ಮೈದಾ- 2 ಚಮಚ

  • ಉಪ್ಪು- ರುಚಿಗೆ ತಕ್ಕಷ್ಟು

  • ಕಾಳುಮೆಣಸಿನ ಪುಡಿ- 1 ಚಮಚ

  • ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು

  • ಶುಂಠಿ-ಬೆಳ್ಳುಳ್ಳಿ- ಸಣ್ಣಗೆ ಕತ್ತರಿಸಿದ್ದು

  • ಒಣಸಿನಕಾಯಿ- 2

  • ಹಸಿಮೆಣಸಿನ ಕಾಯಿ- 4

  • ಈರುಳ್ಳಿ- 1

  • ಕ್ಯಾಪ್ಸಿಕಂ- 1

  • ಗ್ರೀನ್ ಚಿಲ್ಲಿ ಸಾಸ್- 1 ಚಮಚ

  • ಅರಿಶಿಣದ ಪುಡಿ- ಸ್ವಲ್ಪ

  • ಮೊಸರು- 2 ಚಮಚ

  • ನಿಂಬೆಹಣ್ಣಿನ ರಸ- ಅರ್ಧ ಚಮಚ

ಮಾಡುವ ವಿಧಾನ...

  • ಮೊದಲಿಗೆ ಚೆನ್ನಾಗಿ ಪನ್ನೀರ್'ನ್ನು ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿಕೊಳ್ಳಿ. ಅದನ್ನು ಒಂದು ಪಾತ್ರೆಗೆ ಹಾಕಿ, ಕಾರ್ನ್ ಫ್ಲೋರ್, ಮೈದಾ ಹಿಟ್ಟು, ಉಪ್ಪು ಹಾಗೂ ಪೆಪ್ಪರ್ ಪೌಡರ್ ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

  • ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ. ಕಾದ ನಂತರ ಅದಕ್ಕೆ ಮಸಾಲೆ ಮಿಶ್ರತ ಪನ್ನೀರ್ ಗಳನ್ನು ಹಾಕಿ ಚೆನ್ನಾಗಿ ಕರಿದುಕೊಳ್ಳಿ

  • ಬಳಿಕ ಮತ್ತೊಂದು ಬಾಣಲೆಯನ್ನು ಒಲೆಯ ಮೇಲಿಟ್ಟು, ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ. ಕಾದ ನಂತರ ಸಣ್ಣಗೆ ಕತ್ತರಿಸಿದ ಶುಂಠಿ-ಬೆಳ್ಳುಳ್ಳಿ, ಒಣಗಿದ ಮೆಣಸಿನಕಾಯಿ, ಹಸಿಮೆಣಸಿನಕಾಯಿ, ಈರುಳ್ಳಿ, ಕ್ಯಾಪ್ಸಿಕಂ ಹಾಕಿ ಹುರಿದುಕೊಳ್ಳಿ.

  • 1 ನಿಮಿಷ ಕೈಯಾಡಿಸಿದ ಬಳಿಕ ಸ್ವಲ್ಪ ನೀರು ಹಾಕಿ. ಕುದಿಯಲು ಬಿಡಿ. ಬಳಿಕ ಗ್ರೀನ್ ಚಿಲ್ಲಿ ಸಾಸ್, ನಿಂಬೆಹಣ್ಣಿನ ರಸ, ಅರಿಶಿಣದ ಪುಡಿ, ಮೊಸರು ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದೀಗ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಕರವಾದ ಲೆಮನ್ ಪೆಪ್ಪರ್ ಪನ್ನೀರ್ ಸವಿಯಲು ಸಿದ್ಧ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Dasara Holidays extended: ಸರ್ಕಾರಿ, ಅನುದಾನಿತ ಶಾಲೆಗಳಿಗೆ ಅಕ್ಟೋಬರ್ 18ರವರೆಗೆ ರಜೆ; ಜಾತಿ ಗಣತಿ ಅವಧಿ ವಿಸ್ತರಣೆ!

Mark ಚಿತ್ರದ 'ಸೈಕೋ ಸೈತಾನ್' ಚಿತ್ರದ ಹಾಡು ಸಖತ್ ಟ್ರೋಲ್; Darshan ಫ್ಯಾನ್ಸ್ ಟಾಂಗ್, Youtube ವಿಡಿಯೋ ಡಿಲೀಟ್!

ಇದು 'ಮೋದಾನಿ-ನಿರ್ಭರ್ ಭಾರತ': ಸರ್ಕಾರದ ಹಳದಿ ಬಟಾಣಿ ಆಮದು ನೀತಿ ಟೀಕಿಸಿದ ಕಾಂಗ್ರೆಸ್

ನನ್ನ ಹಲವು ಡೀಪ್‌ಫೇಕ್ ವಿಡಿಯೋಗಳು ಎಲ್ಲೆಡೆ ಹರಿದಾಡುತ್ತಿವೆ: ನಿರ್ಮಲಾ ಸೀತಾರಾಮನ್

ಡಿಕೆಶಿಯ 'ಸುರಂಗದ ಹುಚ್ಚಿ'ನಿಂದ ಲಾಲ್‌ಬಾಗ್ ಸಸ್ಯೋದ್ಯಾನಕ್ಕೆ ಅಪಾಯ- ಆರ್. ಅಶೋಕ್

SCROLL FOR NEXT