ಫಿಶ್ ತವಾ ಫ್ರೈ 
ಅಡುಗೆ

ಮೀನು ಪ್ರಿಯರ ಫೇವರಿಟ್ ಫಿಶ್ ತವಾ ಫ್ರೈ: ಈ ರೆಸಿಪಿ ಒಮ್ಮೆ ಟ್ರೈ ಮಾಡಿ..!

ಮೀನು ಪ್ರಿಯರಿಗೆ ಫಿಶ್ ತವಾ ಫ್ರೈ ಎಂದರೆ ಬಾಯಲ್ಲಿ ನೀರೂರಿಸುವ ಖಾದ್ಯ. ಹೊರಭಾಗ ಗರಿಗರಿಯಾಗಿ, ಒಳಭಾಗ ಮೃದುವಾಗಿ ಬೇಯುವ ಈ ಖಾದ್ಯವನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು.

ಮೀನು ಪ್ರಿಯರಿಗೆ ಫಿಶ್ ತವಾ ಫ್ರೈ ಎಂದರೆ ಬಾಯಲ್ಲಿ ನೀರೂರಿಸುವ ಖಾದ್ಯ. ಹೊರಭಾಗ ಗರಿಗರಿಯಾಗಿ, ಒಳಭಾಗ ಮೃದುವಾಗಿ ಬೇಯುವ ಈ ಖಾದ್ಯವನ್ನು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದು. ಖಾರ-ಮಸಾಲೆಯ ರುಚಿಯೊಂದಿಗೆ ತವಾ ಮೇಲೆ ಹುರಿದ ಈ ಫಿಶ್ ಫ್ರೈ ಅನ್ನ, ರೊಟ್ಟಿ ಅಥವಾ ಸಾರು ಜೊತೆಗೆ ಸವಿಯಲು ಅತ್ಯುತ್ತಮ. ಹೆಚ್ಚು ಸಮಯ ಬೇಕಾಗದ ಈ ಸರಳ ರೆಸಿಪಿಯಿಂದ ಮನೆಯಲ್ಲೇ ಹೋಟೆಲ್ ಶೈಲಿಯ ರುಚಿಕರ ಫಿಶ್ ತವಾ ಫ್ರೈ ತಯಾರಿಸಬಹುದು.

ಬೇಕಾಗುವ ಪದಾರ್ಥಗಳು...

  • ಅಂಜಲ್ ಮೀನು – ಅರ್ಧ ಕೆಜಿ

  • ಖಾರದ ಪುಡಿ – 1½ ಚಮಚ

  • ಅರಿಶಿನ ಪುಡಿ – ½ ಚಮಚ

  • ಧನಿಯಾ ಪುಡಿ – 1 ಚಮಚ

  • ಜೀರಿಗೆ ಪುಡಿ – ½ ಚಮಚ

  • ಗರಂ ಮಸಾಲೆ – ½ ಚಮಚ

  • ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ

  • ನಿಂಬೆಹಣ್ಣಿನ ರಸ – 1 ಚಮಚ

  • ಅಕ್ಕಿ ಹಿಟ್ಟು – 1 ಚಮಚ

  • ರವೆ – 1 ಚಮಚ

  • ಉಪ್ಪು – ರುಚಿಗೆ ತಕ್ಕಷ್ಟು

  • ಎಣ್ಣೆ – ತವಾ ಫ್ರೈ ಮಾಡಲು

  • ಕರಿಬೇವು – ಸ್ವಲ್ಪ

ಮಾಡುವ ವಿಧಾನ...

  • ಮೊದಲು ಮೀನಿನ ತುಂಡುಗಳನ್ನು ಚೆನ್ನಾಗಿ ತೊಳೆದು ನೀರು ಸಂಪೂರ್ಣವಾಗಿ ಹೋಗುವಂತೆ ಮಾಡಿ.

  • ಒಂದು ಪಾತ್ರೆಯಲ್ಲಿ ಖಾರದ ಪುಡಿ, ಅರಿಶಿನ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ನಿಂಬೆಹಣ್ಣಿನ ರಸ ಮತ್ತು ಉಪ್ಪನ್ನು ಹಾಕಿ. ಇದಕ್ಕೆ ಸ್ವಲ್ಪ ನೀರು ಸೇರಿಸಿ ಗಟ್ಟಿಯಾದ ಮಸಾಲೆ ಪೇಸ್ಟ್ ತಯಾರಿಸಿಕೊಳ್ಳಿ.

  • ಈ ಮಸಾಲೆಯನ್ನು ಮೀನಿನ ತುಂಡುಗಳಿಗೆ ಎರಡೂ ಬದಿಯಲ್ಲೂ ಚೆನ್ನಾಗಿ ಹಚ್ಚಿ. ಕನಿಷ್ಠ 30 ನಿಮಿಷಗಳ ಕಾಲ ನೆನೆಯಲು ಬಿಡಿ. ಹೆಚ್ಚು ರುಚಿ ಬೇಕಿದ್ದರೆ 1 ಗಂಟೆ ಇಡಬಹುದು.

  • ನಂತರ ಅಕ್ಕಿ ಹಿಟ್ಟು ಮತ್ತು ರವೆಯನ್ನು ಮೀನಿನ ತುಂಡುಗಳ ಮೇಲೆ ಲಘುವಾಗಿ ಲೇಪಿಸಿ. ಇದರಿಂದ ಫ್ರೈ ಮಾಡಿದಾಗ ಹೊರಭಾಗ ಚೆನ್ನಾಗಿ ಗರಿಗರಿಯಾಗುತ್ತದೆ.

  • ತವಾವನ್ನು ಬಿಸಿ ಮಾಡಿ 2–3 ಟೇಬಲ್ ಸ್ಪೂನ್ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಬಳಿಕ ಮೀನಿನ ತುಂಡುಗಳನ್ನು ತವೆಯ ಮೇಲೆ ಒಂದಕ್ಕೊಂದು ಅಂಟಿಕೊಳ್ಳದಂತೆ ಜೋಡಿಸಿ. ಮಧ್ಯಮ ಉರಿಯಲ್ಲಿ ಎರಡೂ ಬದಿಗಳನ್ನು ನಿಧಾನವಾಗಿ ಬೇಯಿಸಿ.

  • ಮೀನು ಹೊರಭಾಗದಲ್ಲಿ ಹೊಂಬಣ್ಣಕ್ಕೆ ತಿರುಗಿ ಗರಿಗರಿಯಾಗುವವರೆಗೆ ಹಾಗೂ ಒಳಭಾಗ ಚೆನ್ನಾಗಿ ಬೆಂದ ನಂತರ ತೆಗೆದುಕೊಳ್ಳಿ. ಕೊನೆಯಲ್ಲಿ ಕರಿಬೇವಿನ ಎಲೆಗಳನ್ನು ಎಣ್ಣೆಯಲ್ಲಿ ಹುರಿದು ಮೀನಿನ ಮೇಲೆ ಹಾಕಿದರೆ ಪರಿಮಳ ಮತ್ತು ರುಚಿ ಮತ್ತಷ್ಟು ಹೆಚ್ಚುತ್ತದೆ.

  • ಬಿಸಿ ಬಿಸಿ ಫಿಶ್ ತವಾ ಫ್ರೈಯನ್ನು ಈರುಳ್ಳಿ, ನಿಂಬೆಹಣ್ಣಿನ ತುಂಡುಗಳು ಮತ್ತು ಕೊತ್ತಂಬರಿ ಸೊಪ್ಪಿನೊಂದಿಗೆ ಸವಿಯಬಹುದು.

ಟಿಪ್ಸ್...

  • ಮೀನು ಮ್ಯಾರಿನೇಟ್ ಮಾಡುವಾಗ ಸ್ವಲ್ಪ ಮೊಸರು ಸೇರಿಸಿದರೆ ಮಸಾಲೆ ಚೆನ್ನಾಗಿ ಒಳಗೆ ಸೇರುತ್ತದೆ.

  • ತವಾ ಫ್ರೈ ಮಾಡುವಾಗ ಹೆಚ್ಚಿನ ಉರಿ ಬಳಸದೆ ಮಧ್ಯಮ ಉರಿಯಲ್ಲಿ ಬೇಯಿಸಿದರೆ ಮೀನು ಒಳಗೂ ಚೆನ್ನಾಗಿ ಬೆಂದು ಹೊರಭಾಗ ಗರಿಗರಿಯಾಗುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!

'ಮತದಾರರ ಪಟ್ಟಿ ಪರಿಷ್ಕರಣೆ'ಯಲ್ಲಿ ಅಕ್ರಮ ಆರೋಪ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ, INDIA ಒಕ್ಕೂಟದಿಂದ ‘ಪ್ರಜಾಪ್ರಭುತ್ವ ಉಳಿಸಿ’ ಪಾದಯಾತ್ರೆ ಆರಂಭ..!

ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಪಠಣೆ: ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್!

11/9 ಮಾದರಿಯಲ್ಲೇ ಇಸ್ರೇಲ್ ಧ್ವಂಸಕ್ಕೆ ಸಂಚು..! ಫ್ಲೈದುಬೈ ಏರ್‌ಲೈನ್ಸ್ ಸೇರಿದ್ದೇ ಆ ಕ್ರೂರ ಉದ್ದೇಶಕ್ಕಾಗಿ; ಸತ್ಯ ಬಾಯಿಬಿಟ್ಟ ಕಿಲ್ಲರ್ ಪೈಲಟ್ ಹಮಾಮ್..!