ಗ್ಯಾಡ್ಜೆಟ್ಸ್

ಕಾನೂನು ಉಲ್ಲಂಘಿಸಿದ ಅಕೌಂಟ್ ಗಳ ವಿರುದ್ಧ ಕ್ರಮ ಕೈಗೊಳ್ಳಲು ಟಿಕ್‌ಟಾಕ್‌ಗೆ ಭಾರತದ 118 ಮನವಿ!

Prasad SN

ಚೀನಾದ ಕಿರು-ವಿಡಿಯೋ ತಯಾರಿಕಾ ಪ್ಲಾಟ್‌ಫಾರ್ಮ್ ಟಿಕ್‌ಟಾಕ್, ಭಾರತದಿಂದ 118 ವಿನಂತಿಗಳನ್ನು ಸ್ವೀಕರಿಸಿದ್ದು, ವಿನಂತಿಯಲ್ಲಿ ಉಲ್ಲೇಖಿಸಲಾದ ಅಕೌಂಟ್ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದೆ. ಈ ವಿನಂತಿಗಳನ್ನು 2019 ರ ಮೊದಲಾರ್ಧದಲ್ಲಿ (ಜನವರಿ 1-ಜೂನ್ 30, 2019) ಟಿಕ್‌ಟಾಕ್‌ಗೆ ಕಳುಹಿಸಲಾಗಿದೆ.

ವಿಚಿತ್ರವೆಂದರೆ ಟಿಕ್‌ಟಾಕ್ ಗೆ ತಾಯ್ನಾಡಾದ ಚೀನಾದಿಂದ ಒಂದೇ ಒಂದು ವಿನಂತಿಯು ಇರಲಿಲ್ಲ. ಅಲ್ಲಿ ಅಪ್ಲಿಕೇಶನ್ ಬೇರೆ ಹೆಸರನಲ್ಲಿ, ಅಂದರೆ 'ಡೌಯಿನ್' ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಇದು ಕಠಿಣ ನಿಯಂತ್ರಣವನ್ನು ಹೊಂದಿದೆ.

107 ಕಾನೂನಾತ್ಮಕ ವಿನಂತಿಗಳಿದ್ದು, ಭಾರತ ಸರ್ಕಾರವು 11 ಅಕೌಂಟ್ ಗಳ ಮಾಹಿತಿಯನ್ನು ಕೇಳಿತ್ತು, ಸ್ಥಳೀಯ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಲಾದ ವಿಷಯವನ್ನು ತೆಗೆದುಹಾಕಲು ಅಥವಾ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಅಕೌಂಟ್ ಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವಂತೆ ವಿನಂತಿಸಲಾಗಿದೆ ಎಂದು ಟಿಕ್‌ಟಾಕ್ ತನ್ನ ಮೊದಲ ಪಾರದರ್ಶಕತೆ ವರದಿಯಲ್ಲಿ ತಿಳಿಸಿದೆ.

ಭಾರತದಿಂದ 107 ಕಾನೂನಾತ್ಮಕ ವಿನಂತಿಗಳಿಗಾಗಿ, ದೇಶದಲ್ಲಿ ಸುಮಾರು 200 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಟಿಕ್‌ಟಾಕ್ ಶೇಕಡಾ 47 ಪ್ರಕರಣಗಳ ವಿರುದ್ಧ ಕ್ರಮ ಕೈಗೊಂಡಿದೆ. ಸರ್ಕಾರದ ಕೋರಿಕೆಗಳಿಗಾಗಿ, ಇದು ಎಂಟು ಅಕೌಂಟ್ ಗಳನ್ನು ತೆಗೆದುಹಾಕಿದೆ. 255 ಖಾತೆಗಳಿಗೆ ಸಂಬಂಧಿಸಿದ 79 ವಿನಂತಿಗಳೊಂದಿಗೆ ಅಮೆರಿಕಾ ಎರಡನೇ ಸ್ಥಾನದಲ್ಲಿದೆ ಮತ್ತು ಅದು ಅದರ ಶೇಕಡಾ 86 ರಷ್ಟು ವಿನಂತಿಗಳ ಮಾಹಿತಿಯನ್ನು ಪಡೆದುಕೊಂಡಿದೆ. ಮೂರನೆಯದು ಜಪಾನ್ 39 ಖಾತೆಗಳಿಗೆ 35 ವಿನಂತಿಗಳನ್ನು ಮಾಡಿದೆ.

ಟಿಕ್‌ಟಾಕ್ ಜಾಗತಿಕವಾಗಿ ಸುಮಾರು 1.5 ಬಿಲಿಯನ್ ಡೌನ್‌ಲೋಡ್‌ಗಳನ್ನು ಕಂಡಿದೆ ಮತ್ತು 37.6 ಮಿಲಿಯನ್ ಡೌನ್‌ಲೋಡ್‌ಗಳನ್ನು ಹೊಂದಿರುವ ಅಮೆರಿಕಾ ಮಾರುಕಟ್ಟೆಯು ಭಾರತ ಮತ್ತು ಚೀನಾ ನಂತರ ಮೂರನೇ ಸ್ಥಾನದಲ್ಲಿದೆ. "ನಮ್ಮ ಬಳಕೆದಾರರ ಗೌಪ್ಯತೆಗೆ ನಮ್ಮ ಗೌರವದೊಂದಿಗೆ ಕಾನೂನು ಪಾಲನೆಗೆ ನಮ್ಮ ಜವಾಬ್ದಾರಿಗಳನ್ನು ಸಮತೋಲನಗೊಳಿಸುವಲ್ಲಿ, ನಾವು ಕಾನೂನುಬದ್ಧವಾಗಿ ಮಾನ್ಯ ವಿನಂತಿಗಳಿಗೆ ಮಾತ್ರ ಪ್ರತಿಕ್ರಿಯಿಸುತ್ತೇವೆ ಮತ್ತು ಅಗತ್ಯವಿರುವ ಮಾಹಿತಿಯೊಂದಿಗೆ ಮಾತ್ರ ಪ್ರತಿಕ್ರಿಯಿಸುತ್ತೇವೆ" ಎಂದು ಟಿಕ್‌ಟಾಕ್‌ನ ಸಾರ್ವಜನಿಕ ನೀತಿ ಮುಖ್ಯಸ್ಥ ಎರಿಕ್ ಎಬೆನ್‌ಸ್ಟೈನ್ ಹೇಳಿದರು.

ಅಮೆರಿಕಾ ಸೈನ್ಯ ಮತ್ತು ನೌಕಾಪಡೆ ಬೀಜಿಂಗ್ ಮೂಲದ ಬೈಟ್ ಡ್ಯಾನ್ಸ್ ಒಡೆತನದ ಅಪ್ಲಿಕೇಶನ್ ಅನ್ನು ನಿಷೇಧಿಸಿದೆ. ಕಳೆದ ನವೆಂಬರ್‌ನಲ್ಲಿ ಅಮೆರಿಕಾ ಆಪಲ್ ಆಪ್ ಸ್ಟೋರ್‌ನಲ್ಲಿ ಮೊದಲ ಸ್ಥಾನವನ್ನು ತಲುಪಿದ ಮೊದಲ ಅಪ್ಲಿಕೇಶನ್ ಚೀನಾ ಒಡೆತನದ ಟಿಕ್‌ಟಾಕ್ ಆಯಿತು.

SCROLL FOR NEXT