ಗ್ಯಾಡ್ಜೆಟ್ಸ್

ಗೂಗಲ್ ಪ್ಲೇ ಸ್ಟೋರ್, ಆಪಲ್ ಐಒಎಸ್ ನಲ್ಲಿ ಜಿಯೋ ಮಾರ್ಟ್ ಆಪ್; ಪ್ಲೇ ಸ್ಟೋರ್ ನಲ್ಲಿ 10 ಲಕ್ಷ  ಡೌನ್ ಲೋಡ್

Srinivas Rao BV

ಮುಂಬಯಿ: ರಿಲಯನ್ಸ್ ರೀಟೇಲ್ ವ್ಯವಹಾರದ ಭಾಗವಾದ ಗ್ರಾಹಕರ ದಿನಸಿ ಖರೀದಿ ಪ್ಲಾಟ್ ಫಾರ್ಮ್ ಜಿಯೋಮಾರ್ಟ್ ನಿಂದ ಜಿಯೋಮಾರ್ಟ್ ಅಪ್ಲಿಕೇಷನ್ ಈಗ ಗೂಗಲ್ ಪ್ಲೇ ಸ್ಟೋರ್ ಹಾಗೂ ಐಒಎಸ್ ಆಪಲ್ ಸ್ಟೋರ್ ನಲ್ಲಿ ಲಭ್ಯವಿದೆ.

ಈ ಅಪ್ಲಿಕೇಷನ್ ಶುರುವಾದ ಕೆಲವೇ ದಿನದಲ್ಲಿ ಗೂಗಲ್ ಪ್ಲೇ ಸ್ಟೋರ್ ನಲ್ಲಿ 5 ಲಕ್ಷ ಡೌನ್ ಲೋಡ್ ಆಗಿದೆ. ಈಗ ಆ ಸಂಖ್ಯೆ 10 ಲಕ್ಷ ದಾಟಿದೆ.

ಶಾಪಿಂಗ್ ವಿಭಾಗದಲ್ಲಿ ಡೌನ್ ಲೋಡ್ ಆದ ಟಾಪ್ 3 ಅಪ್ಲಿಕೇಷನ್ ಗಳಲ್ಲಿ ಜಿಯೋ ಮಾರ್ಟ್ ಕೂಡ ಒಂದು. ಇದೀಗ ಗ್ರಾಹಕರಿಗೆ ಜಿಯೋ ಮಾರ್ಟ್ ಎಲ್ಲ ಪ್ಲಾಟ್ ಫಾರ್ಮ್ ಗಳಲ್ಲೂ ದೊರೆತಂತಾಗಿದೆ. ತುಂಬ ಸುಲಭವಾಗಿ ಕೈಗೆಟುಕುತ್ತದೆ. ಮೊಬೈಲ್ ತಲೆಮಾರಿನ ಗ್ರಾಹಕರು ಆಂಡ್ರಾಯಿಡ್ ಹಾಗೂ ಐಒಎಸ್ ಮೊಬೈಲ್ ಫೋನ್, ಟ್ಯಾಬ್ಲೆಟ್ ಮತ್ತಿತರ ಗ್ಯಾಜೆಟ್ ಗಳ ಮೂಲಕ ಸುಲಭವಾಗಿ ಜಿಯೋಮಾರ್ಟ್ ಅಪ್ಲಿಕೇಷನ್ ಬಳಸಬಹುದು.

ಅಪ್ಲಿಕೇಷನ್ ಅಂತಷ್ಟೇ ಅಲ್ಲ, ಜತೆಗೆ ಪೋರ್ಟಲ್ ಕೂಡ ಬಳಸಬಹುದು. ಲಾಗಿನ್ ಐಡಿ ಬಳಸಿಕೊಂಡು ಬೇರೆ ಬೇರೆ ಡಿವೈಸ್ ಗಳ ಮೂಲಕ ಜಿಯೋಮಾರ್ಟ್ ನಲ್ಲಿ ತಮಗೆ ಬೇಕಾದ ವಸ್ತುಗಳನ್ನು ಆಯ್ಕೆ ಮಾಡಿಕೊಂಡು, ಖರೀದಿ ಮಾಡಬಹುದು. ಲಾಗ್ ಇನ್ ಐಡಿ ಬಳಸಿ, ಒಂದು ಬಾರಿ ಆಯ್ಕೆ ಮಾಡಿಕೊಂಡ ನಂತರ ಅದು ನಿಮ್ಮದೇ ಬುಟ್ಟಿಯಲ್ಲಿ (ಕಾರ್ಟ್) ಇರುತ್ತದೆ. ಈ ಹಿಂದಿನ ಆರ್ಡರ್ ಗಳು ಯಾವುವು ಅಂತಲೂ ಗೊತ್ತಾಗುತ್ತದೆ.

SCROLL FOR NEXT