ಗ್ಯಾಡ್ಜೆಟ್ಸ್

ಬಹಿಷ್ಕಾರದ ಕರೆಯ ನಡುವೆಯೂ ಕೆಲವೇ ನಿಮಿಷಗಳಲ್ಲಿ ಒನ್ ಪ್ಲಸ್ 8 ಪ್ರೋ ಭರ್ಜರಿ ಮಾರಾಟ!

Srinivas Rao BV

ಗಡಿಯಲ್ಲಿ ಭಾರತೀಯ ಯೋಧರನ್ನು ಹತ್ಯೆ ಮಾಡಿದ್ದ ಚೀನಾ ದೇಶದಲ್ಲಿ ಉತ್ಪಾದನೆಯಾದ ವಸ್ತುಗಳನ್ನು ಬಹಿಷ್ಕರಿಸಬೇಕೆಂಬ ಕರೆ ವ್ಯಾಪಕವಾಗುತ್ತಿರುವುದರ ನಡುವೆಯೂ ಚೀನಾದ ಒನ್ ಪ್ಲಸ್ 8 ಪ್ರೋ ಮಾರುಕಟ್ಟೆಗೆ ಬಂದ ಕೆಲವೇ ನಿಮಿಷಗಳಲ್ಲಿ ಭರ್ಜರಿ ಮಾರಾಟ ಕಂಡಿದೆ.

ಇ-ಕಾಮರ್ಸ್ ವೇದಿಕೆ ಅಮೇಜಾನ್ ನಲ್ಲಿ ಅತ್ಯುತ್ತಮ ಮಾರಾಟ ಕಂಡಿದ್ದು, ಒನ್ ಪ್ಲಸ್ 8 ಹಾಗೂ 8 ಪ್ರೋ ಏಪ್ರಿಲ್ ತಿಂಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿತ್ತು. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರಲಿಲ್ಲ.
ಮೇ.18 ರಂದು ಭಾರತದಲ್ಲಿ ಒನ್ ಪ್ಲಸ್ 8 ಮಾರಾಟ ಪ್ರಾರಂಭವಾಗಿತ್ತು. ಒನ್ ಪ್ಲಸ್ 8 ಪ್ರೋ ಮಾರಾಟ ಜೂ.15 ರಂದು ಪ್ರಾರಂಭವಾಗಿತ್ತು.

ಭಾರತದಲ್ಲಿ ಒನ್ ಪ್ಲಸ್ 8 ಸರಣಿ 5ಜಿ ಹ್ಯಾಂಡ್ ಸೆಟ್ ಗಳಿಗೆ ಅತ್ಯಂತ ಹೆಚ್ಚು ಬೇಡಿಕೆ ಇರುವುದಾಗಿ ಒನ್ ಪ್ಲಸ್ ಹೇಳಿತ್ತು. ಅಷ್ಟೇ ಅಲ್ಲದೇ ನಿರಂತರ ಪೂರೈಕೆ ಇರುವಂತೆ ನೋಡಿಕೊಳ್ಳುವುದಾಗಿಯೂ ಅಲ್ಲಿಯವರೆಗೂ ವಾರದಲ್ಲಿ ಎರಡು ದಿನ ಸೋಮವಾರ ಹಾಗೂ ಗುರುವಾರಗಳಂದು ಮಾತ್ರ ನಿಯಮಿತ ಮಾರಾಟ ಮಾಡುವುದಾಗಿಯೂ ತಿಳಿಸಿತ್ತು.

ಅಮೇಜಾನ್ ಇಂಡಿಯಾದಲ್ಲಿ ಜೂ.18 ರಂದು ಮಾರಾಟಕ್ಕೆ ಇಡಲಾಗಿದ್ದ ಮೊಬೈಲ್ ಡಿವೈಸ್ ಗಳ ಬಗ್ಗೆ  ಒನ್ ಪ್ಲಸ್ ಯಾವುದೇ ಮಾಹಿತಿ ನೀಡಲಿಲ್ಲ. ಆದರೂ ಸಹ ಕೆಲವೇ ನಿಮಿಷಗಳಲ್ಲಿ ಸೋಲ್ಡ್ ಔಟ್ ಆಗಿದೆ ಎಂದು ಇಂಡಸ್ಟ್ರಿ ವಾಚರ್ಸ್ ಹೇಳಿದೆ. 
30,000 ರೂಪಾಯಿ ಹಾಗೂ ಮೇಲ್ಪಟ್ಟ ಬೆಲೆಯ ಸ್ಮಾರ್ಟ್ ಫೋನ್ ಗಳ ಪೈಕಿ ಒನ್ ಪ್ಲಸ್, ಸ್ಯಾಮ್ ಸಂಗ್, ಆಪಲ್ ಗಳು ಪ್ರಮುಖವಾದ ಮೊಬೈಲ್ ಫೋನ್ ಗಳಾಗಿವೆ.

SCROLL FOR NEXT