ಗ್ಯಾಡ್ಜೆಟ್ಸ್

ಅಗ್ಗದ ದರದಲ್ಲಿ 7000ಎಂಎಹೆಚ್ ಬ್ಯಾಟರಿ ಸಾಮರ್ಥ್ಯದ ಮೊಬೈಲ್ ಬಿಡುಗಡೆ ಮಾಡಿದ ಟೆಕ್ನೋ

Srinivas Rao BV

ಅಸಾಧಾರಣ ಪವರ್ ಹಾಗೂ ವೇಗವನ್ನು ಗ್ರಾಹಕರಿಗೆ ಒದಗಿಸುವುದಕ್ಕೆ ಜಾಗತಿಕ ಮಟ್ಟದ ಸ್ಮಾರ್ಟ್ ಫೋನ್ ಬ್ರಾಂಡ್ ಟೆಕ್ನೋ, 7000 ಎಂಎಹೆಚ್ ಬ್ಯಾಟರಿ ಸಾಮರ್ಥ್ಯದ  POVA 2 ಸ್ಮಾರ್ಟ್ ಫೋನ್ ನ್ನು ಬಿಡುಗಡೆ ಮಾಡಿದೆ. 

POVA ಸರಣಿಯಲ್ಲಿ ಈ ಹೊಸ ಮೊಬೈಲ್ ಬಿಡುಗಡೆ ಮಾಡಲಾಗಿದ್ದು, ಆಗಸ್ಟ್ 5 ರಿಂದ ಅಮೇಜಾನ್ ನಲ್ಲಿ ಮಾರಾಟಕ್ಕೆ (ಎರಡು ಆವೃತ್ತಿಗಳಲ್ಲಿ) ಲಭ್ಯವಿರಲಿದೆ. 

ವಿಶೇಶವಾದ ರಿಯಾಯಿತಿಗಳನ್ನು ನೀಡಲಾಗಿದ್ದು 4GB+64GB ಸ್ಮಾರ್ಟ್ ಫೋನ್ 10,499 ರೂಪಾಯಿಗಳಿಗೆ ಲಭ್ಯವಿದ್ದರೆ, 6GB+128GB ಆವೃತ್ತಿಯದ್ದು 12,499 ರೂಪಾಯಿಗಳಿಗೆ ಲಭ್ಯವಿದೆ.

ಬಿಡುಗಡೆಯ ಹಿನ್ನೆಲೆಯಲ್ಲಿ ನೀಡಲಾಗಿರುವ ರಿಯಾಯಿತಿ ಅಂತ್ಯಗೊಂಡ ಬಳಿಕ ಮೊಬೈಲ್ ನ ಬೆಲೆ 10,999 (4ಜಿಬಿ) 6 ಜಿಬಿಗಳದ್ದು 12,999 ರೂಪಾಯಿಗಳಿಗೆ ಲಭ್ಯವಿರಲಿದೆ.

7000 ಎಂಎಹೆಚ್ ಸಾಮರ್ಥ್ಯವಿರುವ, 15 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿರುವ ಭಾರತದ ಮೊದಲ ಸ್ಮಾರ್ಟ್ ಫೋನ್ ಇದಾಗಿದೆ ಎಂದು ಟೆಕ್ನೊ ಹೇಳಿದೆ. ಸ್ಮಾರ್ಟ್ ಫೋನ್ ನ್ನು ಹೆಚ್ಚು ಬಳಕೆ ಮಾಡುವ ಮಂದಿಗೆ ವೇಗ ಹಾಗೂ ದೀರ್ಘಾವಧಿ ಬ್ಯಾಟರಿಯನ್ನು ಈ ಸ್ಮಾರ್ಟ್ ಫೋನ್ ನಲ್ಲಿ ಒದಗಿಸಲಾಗಿದೆ.

ಹೆಚ್ಚು ಕಾರ್ಯಕ್ಷಮತೆ ಹೊಂದಿರುವ ಮೀಡಿಯಾಟೆಕ್ ಹೀಲಿಯೋ G85 ಆಕ್ಟಾ ಕೋರ್ ಪ್ರೊಸೆಸರ್, ಇನ್ ಬಿಲ್ಟ್ ಹೈಪರ್ ಇಂಜಿನ್ ಗೇಮಿಂಗ್ ಟೆಕ್ನಾಲಜಿ ಹಾಗೂ a 18W ಡ್ಯುಯಲ್ ಐಸಿ ಫಾಸ್ಟ್ ಚಾರ್ಜ್ ನ್ನು ಹೊಂದಿದೆ. ತಡೆರಹಿತ ಗೇಮಿಂಗ್ ಹಾಗೂ ಬಹುಕಾರ್ಯದ ಅನುಭವವನ್ನು ನೀಡಲಿದೆ. POVA 2.0 ಸ್ಪೋರ್ಟ್ಸ್ ಸೆಗ್ಮೆಂಟ್ 48 ಎಂಪಿ ಕ್ವಾಡ್ ಕ್ಯಾಮರ, 6.95 ಎಫ್ ಹೆಚ್ ಡಿ+ ಡಾಟ್-ಇನ್ ಡಿಸ್ಪ್ಲೇ ಗಳನ್ನು ಹೊಂದಿದೆ.

SCROLL FOR NEXT