ಆರೋಗ್ಯ-ಜೀವನಶೈಲಿ

ತಲೆನೋವು, ಮಾನಸಿಕ ಒತ್ತಡಕ್ಕೆ ಮನೆಮದ್ದು ತುಳಸಿ

Rashmi Kasaragodu

ತುಳಸಿ-ಸುಲಭವಾಗಿ ಲಭ್ಯವಾಗುವ ಔಷಧಿ ಗಿಡಗಳಲ್ಲೊಂದು. ಇಷ್ಟೊಂದು ಔಷಧೀಯ ಗುಣಗಳಿರುವ ತುಳಸಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಬಲ್ಲದು.

ತಲೆ ಶೂಲೆಗೆ ರಾಮಬಾಣ

ಒಂದು ಪುಟ್ಟ ಪಾತ್ರೆಯಲ್ಲಿ ಸ್ವಲ್ಪ ನೀರು ತೆಗೆದುಕೊಂಡು ಅದಕ್ಕೆ 10 ತುಳಸಿ ಎಲೆ ಹಾಕಿ ಕುದಿಸಿ. ಆ ನೀರು ಸ್ವಲ್ಪ ತಣಿದ ಮೇಲೆ ಅದರಲ್ಲಿ ಟವೆಲ್ ಅದ್ದಿ ಅದನ್ನು ಹಣೆಯ ಮೇಲಿರಿಸಿ.  ಸೈನಸೈಟಿಸ್, ಅಲರ್ಜಿ, ಶೀತದಿಂದ ಉಂಟಾಗುವ ತಲೆನೋವು ಕಡಿಮೆಯಾಗುತ್ತದೆ.

ಜ್ವರ ಬಂದರೆ
ತುಂಬಾ ಜ್ವರವಿದ್ದರೆ ಅರ್ಧ ಲೀಟರ್ ನೀರಿನಲ್ಲಿ ಸ್ವಲ್ಪ ಸಕ್ಕರೆ, ತುಳಸಿ ಎಲೆ, ಸ್ವಲ್ಪ ಹಾಲು ಸೇರಿಸಿ ಕುದಿಸಿ ಕುಡಿದರೆ Ú ಜ್ವರ ಬೇಗನೆ ವಾಸಿಯಾಗುತ್ತದೆ

ಕೆಮ್ಮು ಗಂಟಲು ನೋವು
ತುಳಸಿ ಎಲೆಯನ್ನು ಜಜ್ಜಿ ಕುದಿಸಿದ ನೀರು ತಣ್ಣಗಾದ ನಂತರ ಅದರಲ್ಲಿ  ಬಾಯಿ ಮುಕ್ಕಳಿಸಿದರೆ ಅಥವಾ ತುಳಸಿ ಎಲೆಯನ್ನು ಜಗಿದು ತಿಂದರೆ ಗಂಟಲು ನೋವು ಮತ್ತು ಕೆಮ್ಮು ನಿವಾರಣೆಯಾಗುತ್ತದೆ.

ಕಿಡ್ನಿಯಲ್ಲಿ ಕಲ್ಲು
ತುಳಸಿ ಎಲೆಯ ರಸಕ್ಕೆ ಜೇನು ತುಪ್ಪ ಮಿಶ್ರಣ ಮಾಡಿ ಕುಡಿದರೆ ಕಿಡ್ನಿಯಲ್ಲಿರುವ ಕಲ್ಲು ಕರಗುತ್ತದೆ.

ಹೃದಯ ಸಂಬಂಧಿ ಸಮಸ್ಯೆಗೆ
ಹೃದಯ ಸಂಬಂಧಿ ರೋಗದಿಂದ ಬಳಲುತ್ತಿರುವವರು ತುಳಸಿ ಎಲೆ ಸೇವನೆ ಮಾಡುವುದು ಒಳ್ಳೆಯದು. ಇದು ರಕ್ತದಲ್ಲಿನ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.

ಮಾನಸಿಕ ಒತ್ತಡ
ದಿನಕ್ಕೆರಡು ಬಾರಿ 12 ತುಳಸಿ ಎಲೆಗಳನ್ನು ಜಗಿದು ತಿನ್ನುವುದರಿಂದ ಮಾನಸಿಕ ಒತ್ತಡ ಕಡಿಮೆ ಮಾಡಬಹುದು. ತುಳಸಿ ದೇಹದಲ್ಲಿ ರಕ್ತ ಶುದ್ಧಿ ಮಾಡಲು ಸಹಾಯ ಮಾಡುತ್ತದೆ.

ಬಾಯಿ ಹುಣ್ಣು
ದೇಹದಲ್ಲಿ ಉಷ್ಣ ಜಾಸ್ತಿಯಾಗಿ ಬಾಯಿ ಹುಣ್ಣು (ಮೌತ್ ಅಲ್ಸರ್) ಆಗಿದ್ದರೆ ತುಳಸಿ ಎಲೆಯನ್ನು ಜಗಿದು ತಿನ್ನಿ

ಕೀಟ ಕಚ್ಚಿದರೆ
ಕೀಟ ಕಚ್ಚಿದರೆ ಗಂಟೆಗೊಮ್ಮೆ ಒಂದು ಚಮಚ ತುಳಸಿ ರಸ ಕುಡಿಯುತ್ತಿದ್ದರೆ ಒಳ್ಳೆಯದು. ತಾಜಾ ರಸವನ್ನು ಅಥವಾ ತುಳಸಿ ಬೇರಿನ ಪೇಸ್ಟ್‌ನ್ನು ಕೀಟ ಕಚ್ಚಿದ ಜಾಗಕ್ಕೆ ತಾಗಿಸಿದರೆ ಉತ್ತಮ.

ಚರ್ಮದ ಆರೋಗ್ಯಕ್ಕೆ
ರಿಂಗ್ ವರ್ಮ್ (ಸರ್ಪಸುತ್ತು) ಅಥವಾ ಇನ್ಯಾವುದೇ ಚರ್ಮ ರೋಗಗಳಿದ್ದರೆ ಅಲ್ಲಿಗೆ  ತುಳಸಿ ರಸ ಹಚ್ಚಿದರೆ ಒಳ್ಳೆಯದು.

SCROLL FOR NEXT