ಆರೋಗ್ಯ-ಜೀವನಶೈಲಿ

ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬೀಟ್‌ರೂಟ್ ಜ್ಯೂಸ್

Rashmi Kasaragodu

ಅಧಿಕ ರಕ್ತದೊತ್ತಡವಿರುವವರು ಪ್ರತಿ ದಿನ  ಒಂದು ಗ್ಲಾಸ್ ಬೀಟ್‌ರೂಟ್ ಜ್ಯೂಸ್ ಕುಡಿದರೆ ರಕ್ತದೊತ್ತಡ ಕಡಿಮೆಯಾಗುತ್ತದೆ. ಅಧಿಕ ರಕ್ತದೊತ್ತಡವಿರುವ ವ್ಯಕ್ತಿಗಳಿಗೆ ಬೀಟ್ ರೂಟ್ ಜ್ಯೂಸ್ ಕುಡಿಸಿ ಪ್ರಯೋಗ ನಡೆಸಿದ ಮೇಲೆ ತಜ್ಞರು ಈ ಅಭಿಪ್ರಾಯವನ್ನು ಬಹಿರಂಗ ಪಡಿಸಿದ್ದಾರೆ. ರಕ್ತದೊತ್ತಡ ಕಡಿಮೆ ಮಾಡಲು ಔಷಧಿಗಳನ್ನು ಸೇವಿಸಿಯೂ ಗುಣಮುಖರಾಗದೇ ಇರುವವರಿಗೆ ಬೀಟ್‌ರೂಟ್ ಜ್ಯೂಸ್ ಉತ್ತಮ ಫಲ ನೀಡಿದೆ ಎಂದು ಈ ಬಗ್ಗೆ ಸಂಶೋಧನೆ ನಡೆಸಿದ ಲಂಡನ್‌ನ ಕ್ವೀನ್ ಮೇರಿ ವಿಶ್ವವಿದ್ಯಾಲಯದ ಸೀನಿಯರ್ ರಿಸರ್ಚ್ ಅಡ್ವೈಸರ್ ಡಾ. ಶಾನನ್ ಅಮೋಯಿಲ್ಸ್ ಹೇಳಿದ್ದಾರೆ. ಈ ಸಂಶೋಧನಾ ವರದಿ ಹೈಪರ್‌ಟೆನ್ಶನ್ ಜರ್ನಲ್ ನಲ್ಲಿ  ಪ್ರಕಟವಾಗಿದೆ.

ಬೀಟ್‌ರೂಟ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇನ್‌ಆರ್‌ಗಾನಿಕ್ ನೈಟ್ರೇಟ್ ಅಡಕವಾಗಿದೆ. ಮನುಷ್ಯ ದೇಹದಲ್ಲಿ ಇನ್‌ಆರ್‌ಗಾನಿಕ್  ನೈಟ್ರೇಟ್, ನೈಟ್ರಿಕ್ ಆಕ್ಸೈಡ್ ಆಗಿ ಮಾರ್ಪಡುತ್ತದೆ. ಇದು ರಕ್ತನಾಳಗಳನ್ನು ಹಿಗ್ಗಿಸುವುದರ ಜತೆಗೆ ಅದನ್ನು ಶಾಂತವಾಗಿರಿಸುತ್ತದೆ.  ಹಸಿರೆಲೆ ತರಕಾರಿಗಳ ಸೇವನೆಯಿಂದಲೂ ರಕ್ತದೊತ್ತಡವನ್ನು ನಿಯಂತ್ರಿಸಬಹುದು. ಜೀವನ ಪೂರ್ತಿ ಔಷಧ ಸೇವನೆಯಿಂದ ರಕ್ತದೊತ್ತಡವನ್ನು ನಿಯಂತ್ರಿಸುವ ಬದಲು ಬೀಟ್‌ರೂಟ್ ಸೇವನೆ ಸುಲಭೋಪಾಯ ಎಂಬುದು ಸಂಶೋಧಕರ ಅಭಿಪ್ರಾಯ.

ರಕ್ತದೊತ್ತಡದಿಂದಾಗಿ ಶೇ. 70 ಮಂದಿ ಹೃದಯಾಘಾತ, ಶೇ. 80 ಮಂದಿ ಲಕ್ವ ಮತ್ತು ಶೇ.70ರಷ್ಟು ಮಂದಿ  ಹೃದಯಸ್ತಂಬನಕ್ಕೊಳಗಾಗುತ್ತಾರೆ. ಕಿಡ್ನಿ ವೈಫಲ್ಯಕ್ಕೂ ಇದು ಕಾರಣವಾಗುವುದೂ ಉಂಟು. ಆದುದರಿಂದ ಸುಲಭದಲ್ಲಿ ದೊರೆಯುವ ಬೀಟ್‌ರೂಟ್ ಜ್ಯೂಸ್ ಕುಡಿದರೆ ಅಧಿಕ ರಕ್ತದೊತ್ತಡ ಸಮಸ್ಯೆ ಉಂಟಾಗಲ್ಲ.

SCROLL FOR NEXT