ಆರೋಗ್ಯ-ಜೀವನಶೈಲಿ

ಯುವಕನ ಕಿವಿಯಿಂದ 26 ಜಿರಳೆಗಳನ್ನು ಹೊರತೆಗೆದ ವೈದ್ಯ

Guruprasad Narayana

ಮೆಲ್ಬರ್ನ್: ಕಿವಿ ನೋವು ಎಂದು ವೈದ್ಯರ ಬಳಿಹೋದ ೧೯ ವರ್ಷದ ಯುವಕನಿಗೆ ಆಘಾತ ಕಾದಿತ್ತು. ಏಕೆಂದರೆ ಅವನ ಕಿವಿಯಲ್ಲಿ ೨೬ ಜಿರಳೆಗಳು ವಾಸಿಸುತ್ತಿದ್ದವು ಎಂದು ವೈದ್ಯರು ತಿಳಿಸಿದ್ದರು.

ಮಧ್ಯರಾತ್ರಿಯಲ್ಲಿ ಕಿವಿಯಲ್ಲಿ ತಾಳಲಾರದ ನವೆ ಮತ್ತು ನೋವಿನಿಂದ ನರಳಾಡುತ್ತಿದ್ದೆ ಎಂದು ನೆನಪಿಸಿಕೊಳ್ಳುತ್ತಾರೆ ೧೯ ವರ್ಷದ ಲಿ.

ತಾಳಲಾರದೆ ಕಿವಿಗೆ ಬೆರಳು ಹಾಕಿದಾಗ ಅಲ್ಲಿ ಏನೋ ಚಲಿಸಿದಂತೆ ಕಂಡುಬಂದರು ಅವನ ಗೆಳೆಯ ಏನು ಇಲ್ಲ ಎಂದು ತಳ್ಳಿಹಾಕಿದ್ದಾನೆ. ಮುಂದಿನ ದಿನ ಆಸ್ಪತ್ರೆಗೆ ತೆರಳಿದಾಗ ವೈದ್ಯರು ಎಂಡೊಸ್ಕೋಪಿ ನಡೆಸಿ ಕಿವಿಯೊಳಗೆ ಜಿರಲೆಗಳು ತುಂಬಿರುವುದನ್ನು ತಿಳಿಸಿದ್ದಾರೆ.

ಹೆಣ್ಣು ಜಿರಳೆಯೊಂದು ಲಿ ಕಿವಿಯೊಳಗೆ ವಾರಗಟ್ಟಲೆ ಜೀವಿಸುತ್ತಿತ್ತು ಮತ್ತು ಅಲ್ಲಿಯೇ ಮೊಟ್ಟೆಗಳನ್ನಿಟ್ಟಿತ್ತು. ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬಾರದೆ ಹೋಗಿದ್ದರೆ ಅವರ ಕಿವಿಗೆ ತುಂಬಾ ಹಾನಿಯಾಗುತ್ತಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

SCROLL FOR NEXT