ಆರೋಗ್ಯ-ಜೀವನಶೈಲಿ

ಯೋಗ ಗುರು ಯೋಗರಾಜ್ ಅಭಿನಂದಿಸಿದ ಮೋದಿ

Guruprasad Narayana

ನವದೆಹಲಿ: ನಿರಂತರ ೪೦ ಘಂಟೆಗಳ ಕಾಲ ಯೋಗ ಮಾಡಿ ಗಿನ್ನಿಸ್ ವಿಶ್ವ ದಾಖಲೆ ಮಾಡಿದ ಹಾಂಕಾಂಗ್ ಮೂಲದ ಯೋಗ ಗುರು ಯೋಗರಾಜ್ ಸಿ ಪಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.

ಹಾಂಕಾಂಗ್ ನಲ್ಲಿ ಯೋಗವನ್ನು ಜನಪ್ರಿಯಗೊಳಿಸಲು ದುಡಿದಿರುವ ಭಾರತದ ರಾಯಭಾರ ಕಛೇರಿಯನ್ನು ಕೂಡ ಮೋದಿ ಹೊಗಳಿದ್ದಾರೆ.

"ಹಾಂಗಾಂಗ್ ಮೂಲದ ಯೋಗ ಗುರು ಯೋಗರಾಜ್ ಸಿ ಪಿ ಅವರಿಗೆ ಗಿನಿಸ್ ವಿಶ್ವ ದಾಖಲೆ ಸೃಷ್ಟಿಸಿದ್ದಕ್ಕೆ ಅಭಿನಂದನೆಗಳು" ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವೀಟ್ ನಲ್ಲಿ "ಯೋಗವನ್ನು ಜನಪ್ರಿಯಗೊಳಿಸಲು ಶ್ರಮಿಸಿದ ಹಾಗೂ ಯೋಗರಾಜ್ ಅವರಿಗೆ ಬಂಬಲ ನೀಡಿದ ಭಾರತೀಯ ರಾಯಭಾರ ಕಚೇರಿಯನ್ನು ಶ್ಲಾಘಿಸುತ್ತೇನೆ" ಎಂದಿದ್ದಾರೆ.

೧೫೦೦ ಹೆಚ್ಚು ಆಸನಗಳನ್ನು ಪ್ರದರ್ಶಿಸಿ ೪೦ ಘಂಟೆಗಳ ಕಾಲ ಬಿಡುವಿಲ್ಲದೆ ನಿರಂತರ ಯೋಗ ಮಾಡಿದ ೨೯ ವರ್ಷದ ಯೋಗ ಗುರು ಸಿ ಪಿ ಯೋಗರಾಜ್ ಗಿನ್ನಿಸ್ ವಿಶ್ವದಾಖಲೆ ಸೃಷ್ಟಿಸಿದ್ದಾರೆ.

ದಾಖಲೆ ಸೃಷ್ಟಿಸುವುದಕ್ಕೂ ಮೊದಲು, ನಾನು ಈ ಕಾರ್ಯದಲ್ಲಿ ಯಶಸ್ವಿಯಾದರೆ,  ವಿಶ್ವಸಂಸ್ಥೆ ಜೂನ್ ೨೧ರಂದು ವಿಶ್ವ ಯೋಗ ದಿನ ಎಂದು ಘೋಷಿಸಲು ಕಾರಣಕರ್ತರಾದ ನರೇಂದ್ರ ಮೋದಿ ಅವರಿಗೆ ಅರ್ಪಿಸುತ್ತೇನೆ ಎಂದಿದ್ದರು ಯೋಗರಾಜ್.

SCROLL FOR NEXT