ಪೈಲ್ಸ್ ಚಿಕಿತ್ಸೆ (ಸಾಂದರ್ಭಿಕ ಚಿತ್ರ) 
ಆರೋಗ್ಯ-ಜೀವನಶೈಲಿ

ಲೈಫ್ ಆಫ್ ಪೈಲ್ಸ್!

ಒಂದೇ ಸ್ಥಳದಲ್ಲಿ ಹೆಚ್ಚು ಸಮಯ ಕುಳಿತು ಕಾರ್ಯ ನಿರ್ವಹಿಸುವವರಲ್ಲೂ ಇದು ಸಾಮಾನ್ಯ. ಕಡಿಮ ನೀರು ಕುಡಿಯುವವರಿಗೂ ಈ ಸಮಸ್ಯೆ ಕಟ್ಟಿಟ್ಟ ಬುತ್ತಿ.

-ಪ.ನಾ. ಹಳ್ಳಿ ಹರೀಶ್ ಕುಮಾರ್
ಮೂಲವ್ಯಾಧಿ (ಪೈಲ್ಸ್) ಎಂದರೆ ಗುದದ್ವಾರ ಅಥವಾ ಮಲದ್ವಾರದಿಂದ ನೋವು ರಹಿತ ಊತದಿಂದ ಕೂಡಿದ ಮೊಳಕೆ ದೇಹದ ಹೊರ ಚಾಚಿರುವುದು ಎಂದರ್ಥ. ಈ ಮೊಳಕೆಯೊಳಗೆ ರಕ್ತನಾಳಗಳು ಉಬ್ಬಿಕೊಂಡಿದ್ದು ನೋವಿನಿಂದ ನರಳುವಂತೆ ಮಾಡುತ್ತವೆ.

ಸಹಜವಾಗಿ ಆಗಬೇಕಾದ ವಾಯುಸಂಚಾರಕ್ಕೆ ತೊಂದರೆಯಾಗುವುದರಿಂದ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಆಹಾರದಲ್ಲಿ ನಿಯಂತ್ರಣವಿಲ್ಲದೇ ಹೋದಲ್ಲಿ ಈ ಸಮಸ್ಯೆ ಹೆಚ್ಚು. ಒಂದೇ ಸ್ಥಳದಲ್ಲಿ ಹೆಚ್ಚು ಸಮಯ ಕುಳಿತು ಕಾರ್ಯ ನಿರ್ವಹಿಸುವವರಲ್ಲೂ ಇದು ಸಾಮಾನ್ಯ. ಕಡಿಮ ನೀರು ಕುಡಿಯುವವರಿಗೂ ಈ ಸಮಸ್ಯೆ ಕಟ್ಟಿಟ್ಟ ಬುತ್ತಿ. ತರಕಾರಿಗಿಂತ ಹೆಚ್ಚು ಮಾಂಸಾಹಾರ ಸೇವಿಸುವುದರಿಂದ ಹಾಗೂ ಶ್ರಮಿಕ ವರ್ಗದವರನ್ನೂ ಇದು ಕಾಡೋದು ಕಾಮನ್.

ವ್ಯಾಧಿಗೆ ಮುಕ್ತಿ ಹೇಗೆ?
ಪ್ರಾಥಮಿಕ ಹಂತದಲ್ಲಿ ಆಹಾರದ ಪಥ್ಯದ ಮೂಲಕ ಇದನ್ನು ನಿಯಂತ್ರಿಸಬಹುದು.
ಬಿಸಿನೀರಿನ ತೊಟ್ಟಿಯಲ್ಲಿ ಕುಳಿತುಕೊಳ್ಳುವುದೂ ನೋವನ್ನು ನಿಯಂತ್ರಿಸಿಕೊಳ್ಳುವ ಒಂದು ಸುಲಭ ತಂತ್ರ
ವಿರೇಚಕಗಳನ್ನು ತೆಗೆದುಕೊಳ್ಳುವುದರಿಂದಲೂ ಮಲಬದ್ಧತೆಯನ್ನು ನಿವಾರಿಸಿಕೊಳ್ಳಬಹುದು.
ನೋವುನಿವಾರಕಗಳ ಸೇವನೆಯೂ ಕೆಲವೊಮ್ಮೆ ಓಕೆ.
ಚುಚ್ಚುಮದ್ದುಗಳನ್ನೂ ಪಡೆಯಬಹುದು.

ಶಸ್ತ್ರಚಿಕಿತ್ಸೆಯೂ ಓಕೆ
ನೀರ್ಗಲ್ಲು ಶಸ್ತ್ರಚಿಕಿತ್ಸೆ ರಬ್ಬರ್‌ನಿಂದ ನಾಳಗಟ್ಟುವಿಕೆ (ಲಿಗ್ನೇಷನ್), ಇನ್ಫ್ರಾರೆಡ್ ಹೆಪ್ಪುಗಟ್ಟುವಿಕೆ ಚಿಕಿತ್ಸೆ (ಕಾಗುಲೇಷನ್), ವಿದ್ಯುತ್ ಕಿರಣ ಹಾಯಿಸುವಿಕೆ, ಗುದದ್ವಾರ ಹಿಗ್ಗಿಸುವುವಿಕೆ (ಸ್ಟ್ರೆಚಿಂಗ್) ಹಾಗೂ ಶಸ್ತ್ರಚಿಕಿತ್ಸೆ ಮೂಲಕ ಮೂಲವ್ಯಾಧಿಯನ್ನು ನಿವಾರಿಸಿಕೊಳ್ಳಬಹುದು. ಇದು ಬಿಟ್ಟು ಯಾವುದಾದರೂ ಸ್ವಚಿಕಿತ್ಸಾ ವಿಧಾನಗಳನ್ನು ಅನುಸರಿಸಿದರೆ ಪೇಚಿಗೆ ಸಿಲುಕೋದು ಗ್ಯಾರಂಟಿ ಎಂಬುದು ನೆನಪಿರಲಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT