ಆರೋಗ್ಯ 
ಆರೋಗ್ಯ-ಜೀವನಶೈಲಿ

ದಿನಂಪ್ರತಿ ಮದ್ಯ ಸೇವನೆ ಆರೋಗ್ಯಕ್ಕೆ ಹಿತ!

ವಾರದಲ್ಲಿ ಏಳು ಬಾರಿ ಮದ್ಯಪಾನ ಮಾಡಿದರೆ ಹೃದಯಾಘಾತ ಸಮಸ್ಯೆಗಳು ಕಡಿಮೆಯಾಗಲಿದೆ ಎಂದು...

ವಾಷಿಂಗ್ಟನ್: ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಘೋಷ ವಾಕ್ಯವನ್ನು ಮದ್ಯ ಬಾಟಲಿ ಮೇಲೆ ಕಾಣಬಹುದು. ಆದರೆ ಇಲ್ಲೊಂದು ಸಂಶೋಧನಾ ವರದಿ ವಾರದಲ್ಲಿ ಏಳು ಬಾರಿ ಮದ್ಯಪಾನ ಮಾಡಿದರೆ ಹೃದಯಾಘಾತ ಸಮಸ್ಯೆಗಳು ಕಡಿಮೆಯಾಗಲಿದೆ ಎಂಬುದಾಗಿ ಹೇಳುತ್ತದೆ.

ಈ ಸಂಶೋಧನೆಗಾಗಿ ನ್ಯೂಯಾರ್ಕ್‌ನಲ್ಲಿ ಸುಮಾರು 15000 ಸಾವಿರ ಪುರುಷರು ಮತ್ತು ಮಹಿಳೆಯರನ್ನು ಬಳಸಿಕೊಳ್ಳಲಾಗಿತ್ತು. ಈ ಸಂಶೋಧನೆಯಿಂದಾಗಿ ದಿನಾ ಮದ್ಯಪಾನ ಮಾಡುವುದರಿಂದ ಶೇ. 20ರಷ್ಟು ಹೃದಯಾಘಾತ ಸಮಸ್ಯೆಗಳು ಕಡಿಮೆಯಾಗಲಿದೆ. ಅದರಂತೆ ಮಹಿಳೆಯರಲ್ಲಿ ಶೇ. 16ರಷ್ಟು ಕಡಿಮೆಯಾಗಲಿದೆ ಎಂದು ತಿಳಿಸಿದೆ.

ಹಾರ್ವರ್ಡ್ ವೈದ್ಯಕೀಯ ಶಾಲೆ ಪ್ರೋಪೆಸರ್ ಮತ್ತು ಬೋಸ್ಟನ್‌ನ ಬ್ರಿಗ್ಹಾಂ ಮತ್ತು ಮಹಿಳಾ ಆಸ್ಪತ್ರೆಯ ಹಿರಿಯ ವೈದ್ಯರಾಗಿರುವ ಸ್ಕೊಟ್ ಸಲೋಮನ್ ಅವರು, ಮದ್ಯಪಾನದಿಂದ ಹೃದಯಾಘಾತ ತೊಂದರೆಗಳು ಕಡಿಮೆಯಾಗುತ್ತದೆ ಜೊತೆಗೆ ರಕ್ಷಣಾತ್ಮಕವಾಗಿ ಮದ್ಯ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.

ಮಿತವಾಗಿ ಮದ್ಯಪಾನ ಮಾಡುವುದರಿಂದ ಯಾವುದೇ ತೊಂದರೆಗಳು ಎದುರಾಗುವುದಿಲ್ಲ ಎಂದು ಸಂಶೋಧನಾ ತಂಡ ಪ್ರತಿಪಾದಿಸಿದೆ. 125 ಮಿಲಿ ವೈನ್, ಒಂದು ಲೀಟರ್ ಬಿಯರ್ನ ಮೂರರ ಪೈಕಿ ಒಂದರಷ್ಟು ಮತ್ತು 30 ಮಿಲಿ ವೋಡ್ಕಾ ಅಥವಾ ವಿಸ್ಕಿ ಬಳಸುವುದರಿಂದ ನಮ್ಮ ದೇಹ ಆರೋಗ್ಯಕರವಾಗಿರುತ್ತದೆ ಎಂದು ಹೇಳಿದೆ.

ಸಂಶೋಧನೆಯಲ್ಲಿ ಭಾಗವಹಿಸುವವರನ್ನು ಆರು ವರ್ಗಗಳಾಗಿ ವಿಂಗಡಿಸಿಕೊಳ್ಳಲಾಗಿತ್ತು. ಕುಡುಕರಲ್ಲದವರು, ಮಾಜಿ ಕುಡುಕರು ಹಾಗೂ ದಿನಾ ಕುಡಿಯುವವರು, ವಾರದಲ್ಲಿ 7 ರಿಂದ 14, 14 ರಿಂದ 21 ಹಾಗೂ ಅದಕ್ಕಿಂತಲೂ ಹೆಚ್ಚಾಗಿ ಕುಡಿಯುವವರನ್ನು ಸಂಶೋಧನೆಗೆ ಬಳಸಿಕೊಳ್ಳಲಾಗಿತ್ತು. ಸಂಶೋದನಾ ವೇಳೆ 1271 ಪುರುಷರು ಮತ್ತು 1237 ಮಹಿಳೆಯರಲ್ಲಿ ಹೃದಯಾಘಾತ ಸಮಸ್ಯೆಗಳು ಕಡಿಮೆಯಾಗಿವೆ ಎಂದು ತಿಳಿದುಬಂದಿದೆ.

ಸಾಮಾನ್ಯವಾಗಿ ವಾರದಲ್ಲಿ ಏಳು ಸಲ ಕುಡಿಯುವವರಲ್ಲಿನ ಹೃದಯ ವೈಫಲ್ಯಗಳು ಕಡಿಮೆ ಮಟ್ಟದಲ್ಲಿದೆ. ಆ ಪ್ರಕಾರ ಕುಡಿಯದೆ ಇರುವವರಿಗಿಂತ ವಾರದಲ್ಲಿ ಏಳು ಬಾರಿ ಕುಡಿಯುವವರಿಗೆ ಹೃದಯ ಸಮಸ್ಯೆಗಳು ಕಾಣಿಸಿಕೊಳ್ಳದೆ ಇರುವುದು ಸೋಜಿಗ. ಆದರೆ ವಾರದಲ್ಲಿ 21 ಬಾರಿ ಅಥವಾ ಅದಕ್ಕಿಂತ ಹೆಚ್ಚಾಗಿ ಕುಡಿಯುವವರ ಸಾವಿನ ಸಂಖ್ಯೆ ಪುರುಷರಲ್ಲಿ ಶೇ. 47 ರಷ್ಟಿದ್ದರೆ ಮಹಿಳೆಯರಲ್ಲಿ ಶೇ. 89ರಷ್ಟಿದೆ ಎಂಬುದು ಸಂಶೋದನೆ ಮೂಲಕ ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜೈಪುರ: ಸವಾಯಿ ಮಾನ್ ಸಿಂಗ್ ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ಎಂಟು ರೋಗಿಗಳು ಸಜೀವ ದಹನ, ಮೂವರ ಸ್ಥಿತಿ ಗಂಭೀರ

Bihar Assemebly Election: ಚುನಾವಣಾ ಆಯೋಗದಿಂದ ಸಂಜೆ 4 ಗಂಟೆಗೆ ಮುಹೂರ್ತ ಫಿಕ್ಸ್ !

ಹೈಕೋರ್ಟ್ ಚಾಟಿ, ಜಿಲ್ಲಾಡಳಿತದ ಖಡಕ್ ವಾರ್ನಿಂಗ್: ಕೊನೆಗೂ Sambhal ಮಸೀದಿ ತೆರವು ಮಾಡಿದ 'ಮುಸ್ಲಿಮರು'

'ಶಾಂತಿ ಇದೆ, ಕ್ರಾಂತಿ ಎಲ್ಲಿದೆ? ನಾವೆಲ್ಲರೂ ಶಾಂತಿ ಪ್ರಿಯರು'; ಸಿಎಂ ಬದಲಾವಣೆ ವಿಚಾರ 'ಅಪ್ರಸ್ತುತ': ಬಸವರಾಜ ರಾಯರೆಡ್ಡಿ

ಯಾರು ಎಷ್ಟೇ ವಿರೋಧಿಸಿದರೂ ಸಮೀಕ್ಷೆ ನಡೆಯುತ್ತದೆ, ಎಲ್ಲರೂ ಸಹಕರಿಸಿ: DCM ಡಿಕೆ ಶಿವಕುಮಾರ್ ಮನವಿ

SCROLL FOR NEXT