ಸಾಂದರ್ಭಿಕ ಚಿತ್ರ 
ಆರೋಗ್ಯ-ಜೀವನಶೈಲಿ

ಕೆಲಸದಲ್ಲಿ ಏಕಾಗ್ರತೆ ಹೆಚ್ಚಿಸಿಕೊಳ್ಳಲು ಏನು ಮಾಡಬೇಕು?

ಮನಸ್ಸು ಉತ್ಸಾಹದಿಂದ ಇದ್ದರೆ ಕೆಲಸದಲ್ಲಿ ಏಕಾಗ್ರತೆ ಹೆಚ್ಚುತ್ತದೆ. ಇದೇ ಏಕಾಗ್ರತೆ ನಿಮಗೆ ಯಶಸ್ಸು ತಂದು ಕೊಡುತ್ತದೆ. ಉದ್ಯೋಗದಲ್ಲಿ ಉನ್ನತಿ ಸಾಧಿಸಬೇಕು ಎಂಬ ಮಹಾದಾಸೆ ಇದೆ...

ಮನಸ್ಸು ಉತ್ಸಾಹದಿಂದ ಇದ್ದರೆ ಕೆಲಸದಲ್ಲಿ ಏಕಾಗ್ರತೆ  ಹೆಚ್ಚುತ್ತದೆ. ಇದೇ ಏಕಾಗ್ರತೆ ನಿಮಗೆ ಯಶಸ್ಸು ತಂದು ಕೊಡುತ್ತದೆ. ಉದ್ಯೋಗದಲ್ಲಿ ಉನ್ನತಿ ಸಾಧಿಸಬೇಕು ಎಂಬ ಮಹಾದಾಸೆ ಇದೆ. ಆದರೆ ಕಚೇರಿಗೆ ತೆರಳಿ ಚೇರ್ ನಲ್ಲಿ ಕುಳಿತುಕೊಳ್ಳುತ್ತಿದ್ದಂತೆ ಏನೇನೋ ಯೋಚನೆಗಳು. ಏಕಾಗ್ರತೆಯೇ ಸಾಧ್ಯವಾಗುತ್ತಿಲ್ಲ.  ಏಕಾಗ್ರತೆ ಹೆಚ್ಚಿಸಿಕೊಳ್ಳಲು ಕೆಲ ಟಿಪ್ಸ್ ಗಳು ಇಲ್ಲಿದೆ.

ನಿತ್ಯ ಯೋಗ
ಏರೋಬಿಕ್ ವ್ಯಾಯಾಮ ನಿಮ್ಮ ಹೃದಯದ ಆರೋಗ್ಯಕ್ಕೆ ಸಹಕಾರಿ ನಿಜ. ಆದರೆ ಯೋಗ ನಿಮ್ಮನ್ನು ಹೆಚ್ಚು ಚುರುಕಾಗಿಸುತ್ತದೆ. ಯೋಗಾಸನದ ನಂತರ ಏಕಾಗ್ರತೆ ವೃದ್ಧಿಸುತ್ತದೆ ಎಂಬುದು ಬರ್ಲಿನ್ ವಿವಿ ಬಹುಳ ಹಿಂದೆಯೇ ಸಾಬೀತು ಪಡಿಸಿದೆ.  ಯೋಗ ತರಗತಿಗಳ ಅಂತ್ಯದಲ್ಲಿ ಧ್ಯಾನ ಮಾಡುವುದು ಉತ್ತಮ.  ಈ ಹಂತದಲ್ಲಿ  ಭಂಗಿ ಮತ್ತು ಆಳವಾದ ಉಸಿರಾಟಕ್ಕೆ ಹೆಚ್ಚು ಮಹತ್ವ ನೀಡಲಾಗುತ್ತದೆ.

ಕಚೇರಿ ಎಂಬುದು ನಮಗೆ ಜೀವನಕ್ಕೆ ಆಧಾರವಾಗಿರುವ ಸ್ಥಳವಾಗಿದೆ. ಇಲ್ಲಿ ಉತ್ತಮವಾಗಿ ಕೆಲಸ ಮಾಡುವುದರ ಜೊತೆಗೆ ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳಿಸವುದು ಅವಶ್ಯ.  ಮೇಲೆ ವಿವರಿಸಿರುವ ಕೆಲವೊಂದು ಟಿಪ್ಸ್ ಗಳನ್ನು ಅಳವಡಿಸಿಕೊಳ್ಳಿ. ಕಾಯಕವೇ ಕೈಲಾಸ ಸರಿ. ಆದರೆ ಕಾಯಕವನ್ನು ಸರಿಯಾಗಿ ನಿರ್ವಹಿಸುವುದು ಅಗತ್ಯ

ಮೂರನೇ ಕಣ್ಣು: ಮೂರನೇ ಕಣ್ಣು ಎಂದರೆ ಆಶ್ಚರ್ಯ ಪಡಬೇಡಿ,  ಎರಡು ಕಣ್ಣುಗಳ, ಹುಬ್ಬಗಳ ಮಧ್ಯೆ ಇರುವ ಪ್ರದೇಶಕ್ಕೆ ಮೂರನೇ ಕಣ್ಣು ಎಂದು ಕರೆಯಲಾಗುತ್ತದೆ. ಇದನ್ನು ಮಸಾಜ್ ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ನಿಮ್ಮ ಮನಸ್ಸು ಎಲ್ಲೋ ಹರಿದಾಡುತ್ತಿದೆ . ಮನಸ್ಸಿನ ಮೇಲೆ ಹಗುರವಾದ ಒತ್ತಡ ಹೇರುವ ಮೂಲಕ ಏಕಾಗ್ರತ ಹೆಚ್ಚಳ ಮತ್ತು ಒತ್ತಡ ನಿವಾರಣೆ ಸಾಧ್ಯ.

ಕಲ್ಲಂಗಡಿ ಬೀಜ ಉಪಾಯ
ಕಚೇರಿಯ ಡ್ರಾನಲ್ಲಿ  ಒಂದಷ್ಟು ಕಲ್ಲಂಗಡಿ ಬೀಜಗಳನ್ನು ಇರಿಸಿಕೊಳ್ಳಿ. ಇದರಲ್ಲಿ ಸ್ಮರಣ ಶಕ್ತಿ  ಮತ್ತು ಯೋಚನಾ ಶಕ್ತಿಯನ್ನು ವೃದ್ಧಿಸುವ ಅಂಶವಿದೆ.  ಕಲ್ಲಂಗಡಿ ಬೀಜಗಳಲ್ಲಿ  ಒಮೆಗಾ-3 ಎಣ್ಣೆಯಿದ್ದು, ಇದನ್ನು ಮೆದುಳಿನ ಆಹಾರ ಎಂದೇ ಬಣ್ಣಿಸಲಾಗುತ್ತದೆ. ಮೆದುಳಿನ ನರತಂತುಗಳನ್ನು ರಕ್ಷಿಸುವ  ಪದರಗಳ ನಿರ್ಮಾಣ ಮತ್ತು ನಿರ್ವಹಣೆಯ ಜವಾಬ್ದಾರಿ  ಹೊರುವ ಮಾಯಿಲಿನ್ ಪೊರೆ ನಿರ್ಮಾಣಕ್ಕೆ  ಈ ಎಣ್ಣೆ ಸಹಕಾರಿ.  ಕಲ್ಲಂಗಡಿ ಹಣ್ಣಿನ ಬೀಜಗಳು ಇಷ್ಟವಾಗದ ಪಕ್ಷದಲ್ಲಿ ಅಕ್ರೋಟ್ ಅಥವಾ ವಾಲ್ ನಟ್ ಗಳನ್ನು ಬಳಸಬಹುದು, ಇದು ಒಮೆಗಾ-3ಯಿಂದ ಸಮೃದ್ಧವಾಗಿದೆ.

ಬೆಳಗ್ಗೆಯೇ ಫಿಶ್
ಧಾನ್ಯಗಳ ಬದಲು ಬೆಳಗಿನ ಉಪಹಾರಕ್ಕೆ ಉಪ್ಪೂರಿಸಿದ ಮೀನನ್ನು ಸೇವಿಸಿ, ಇದು ನಿಮಗೆ ಅತ್ಯಗತ್ಯವಾಗಿ ಬೇಕಿರುವ ಕೊಬ್ಬಿನ ಆಮ್ಲಗಳನ್ನು ಒದಗಿಸುತ್ತದೆ. ರಕ್ತದಲ್ಲಿ  ಸಕ್ಕರೆ ಬಿಡುಗಡೆಯಾಗುವುದನ್ನು ವಿಳಂಬಗೊಳಿಸುತ್ತದೆ. ದಿನವಿಡೀ ಉಲ್ಲಾಸದಿಂದಿರಲು ನೆರವಾಗುತ್ತದೆ. ಕೊಬ್ಬಿನ ಆಮ್ಲಗಳು ಮತ್ತು ಒಮೆಗಾ ಎಣ್ಣೆಗಳು ಆಲ್ಜೀಮರ್ಸ್ ಮುಂತಾದ ಕಾಯಿಲೆಗಳನ್ನು ದೂರವಿಡಲು ನೆರವಾಗುತ್ತದೆ.

ಆಳವಾದ ಉಸಿರು
ಯಾವುದಾದರೂ ವಿಷಯದ ಮೇಲೆ ಲಕ್ಷ್ಯ ವಹಿಸಬೇಕಾದಾಗ, ಯಾವುದಾದರೂ ವಿಷಯವನ್ನು  ಸಭೆಯಲ್ಲಿ ವಿವರಿಸುವಾಗ ಮತ್ತು ಸಂದರ್ಶನದಲ್ಲಿ ಭಾಗವಹಿಸುವಾಗ ಉಸಿರಾಟವನ್ನು ನಿಧಾನಗೊಳಿಸಿ. ಇದು ವಿಷಯದ ಮೇಲೆ  ಗಮನ ಕೇಂದ್ರಿಕರಿಸಲು ನೆರವಾಗುತ್ತದೆ. ಉಸಿರಾಟವನ್ನು ಆಳವಾಗಿಸಿದಾಗ ಮಿದುಳಿನ ಅಲೆಗಳ  ಮಾದರಿ ಬದಲಾಗುತ್ತದೆ. ಕೆಳಹೊಟ್ಟೆಯ ಭಾಗದಿಂದ ಉಸಿರಾಡಿದರೇ ಉಸಿರಾಟ ನಿಧಾನವಾಗುತ್ತದೆ.

ಮುದ್ದಾದ ಚಿತ್ರಗಳ ವೀಕ್ಷಣೆ
ತಲೆ ಚಿಟ್ಟು ಹಿಡಿದಿದೆ ಎನಿಸುತ್ತಿದೆಯೇ, ಹಾಗಾದರೇ ಮುದ್ದಾದ ಸಾಕು ಪ್ರಾಣಿಗಳ ಚಿತ್ರಗಳನ್ನು ವೀಕ್ಷಿಸಿ. ಕೆಲಸ ಮಾಡುವಲ್ಲಿ ಹೊಸ ಹುಮ್ಮಸ್ಸು ಉತ್ಸಾಹ ಬರುತ್ತದೆ. ಇದು ಕೇಳಲು ವಿಚಿತ್ರವಾಗಿರಬಹುದು. ಆದರೆ ಜಪಾನ್ ನಲ್ಲಿ ನಡೆಸಿದ ಸಂಶೋಧನೆ  ಇದನ್ನು ಸಾಬೀತು ಪಡಿಸಿದೆ.  ಮುದ್ದಾದ ನಾಯಿ ಮತ್ತು ಬೆಕ್ಕಿನ ಮರಿಗಳ ಚಿತ್ರ ನೋಡಿದ ವಿದ್ಯಾರ್ಥಿಗಳು ಹೆಚ್ಚು ಪ್ರಜ್ಞಾ ಪೂರ್ವಕವಾಗಿ ಮತ್ತು ಮಹುತುವರ್ಜಿಯಿಂದ ಕೆಲಸಗಳನ್ನು ಪೂರ್ಣಗೊಳಿಸಿದ್ದಾರೆಂದು ವರದಿ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ; Indian Army ಹೆಲಿಕಾಪ್ಟರ್ ರೋಚಕ ಕಾರ್ಯಾಚರಣೆ! Video

ಡಿ ಕೆ ಶಿವಕುಮಾರ್ ಹಿಂದೂ ಜನರ ಭಾವನೆಗಳಿಗೆ ನೋವುಂಟುಮಾಡಿದ್ದು ಕ್ಷಮೆಯಾಚಿಸಬೇಕು: ಶೋಭಾ ಕರಂದ್ಲಾಜೆ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

SCROLL FOR NEXT