ಆರೋಗ್ಯ-ಜೀವನಶೈಲಿ

ಮಧುಮೇಹಕ್ಕೆ ಅಗ್ಗದ ದರ ಮಾತ್ರೆ

Mainashree

ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದ ಔಷಧಗಳ ಸಂಶೋಧನಾ ಮತ್ತು ತಯಾರಿಕ ಕಂಪನಿ ಗ್ಲೆನ್‍ಮಾರ್ಕ್ ಫಾರ್ಮಾಸ್ಯೂಟಿಕಲ್ಸ್ ಮಧುಮೇಹ ರೋಗ ನಿಯಂತ್ರಣಕ್ಕೆ ಕಡಿಮೆ ಬೆಲೆಯ ಮಾತ್ರೆಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಕಂಪನಿಯ ವಹಿವಾಟು ವಿಭಾಗದ ಮುಖ್ಯಸ್ಥ ಸುಜೇಶ್ ವಾಸುದೇವನ್ ನಗರದ ಖಾಸಗಿ ಹೋಟೆಲೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತ್ರೆಗಳನ್ನು ಬಿಡುಗಡೆ ಮಾಡಿದರು. ಈ ಮಾತ್ರೆಗಳ ಹೆಸರು ಝಿಟೆನ್ ಮತ್ತು ಝಿಟಾ ಪ್ಲಸ್. ಮಧುಮೇಹಿಗಳಿಗಾಗಿ ಅತಿ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಿರುವ ಮೊಟ್ಟ ಮೊದಲ ಕಂಪನಿಯಾಗಿದೆ.

ಬೇರೆ ಕಂಪನಿ ಮಾತ್ರೆಗಳ ಬೆಲೆ ಒಂದಕ್ಕೆ ರು.40 ರಿಂದ 45 ಇದೆ. ಆದರೆ ಝಟೆನ್ ಮತ್ತು ಝಟಾ ಪ್ಲಸ್ ಮಾತ್ರೆ ರು.19 ಮಾತ್ರ. ಅಂದರೆ ಶೇ.55ರಷ್ಟು ಹಣ ಉಳಿಸಬಹುದು.ಇದರಿಂದ ವ್ಯಕ್ತಿಯೊಬ್ಬರಿಗೆ ವಾರ್ಷಿಕವಾಗಿ ರು.9 ಸಾವಿಕ್ಕೂ ಹೆಚ್ಚು ಹಣ ಉಳಿತಾಯವಾಗಲಿದೆ ಎಂದರು. ದೇಶದಲ್ಲಿ ಸುಮಾರು 67 ದಶಲಕ್ಷ ಜನ ಮಧು ಮೇಹದಿಂದ ಬಳಲುತ್ತಿದ್ದಾರೆ.

ಇವರಿಗೆ ಕೈಗೆಟಕುವ ದರದಲ್ಲಿ ಮಾತ್ರೆಗಳನ್ನು ನೀಡುವ ಉದ್ದೇಶ ಕಂಪನಿಯದಾಗಿದೆ. ಈ ಮಾತ್ರೆಗಳು ಗ್ಲೂಕಾಗಾನ್ ಬಿಡುಗಡೆಕಡಿತಗೊಳಿಸಿ, ಇನ್ಸುಲಿನ್ ಬಿಡುಗಡೆ ಪ್ರಮಾಣ ಹಚ್ಚಿಸುತ್ತವೆ. ರಕ್ತದ ಗ್ಲೂಕೋಸ್ ಮಟ್ಟ ಕಡಿಮೆ ಮಾಡುತ್ತದೆ. ನಿಯಮಿತ ವ್ಯಾಯಾಮ ಮತ್ತು ಆಹಾರ ಸೇವನೆ ಮೂಲಕ ಮಧುಮೇಹ ಕಾಯಿಲೆ ಯಂತ್ರಿಸಬಹುದು ಎಂದು 25 ಸಾವಿರ ತಿಳಿಸಿದರು.

SCROLL FOR NEXT