ರೋಗನಿರೋಧಕ ಶಕ್ತಿಗೆ ದಿವ್ಯೌಷಧ ಹಸಿರು ಬಾದಾಮಿ
ಹಸಿರು ಬಾದಾಮಿ ತಿನ್ನಲು ಹಾಗೂ ಅಡುಗೆಗೆ ಉಪಯೋಗಿಸುವ ಪದಾರ್ಥವಾಗಿದ್ದು. ಇದೊಂದು ಆರೋಗ್ಯ ಕಾಪಾಡುವ ದಿವ್ಯೌಷಧವಾಗಿದೆ. ಬಾದಾಮಿ ಮರಗಳು ಎರಡು ರೀತಿಯ ಕಾಯಿಯನ್ನು ಕೊಡುತ್ತಿದ್ದು, ಒಂದು ಸಿಹಿ ಹಾಗೂ ಇನ್ನೊಂದು ಕಹಿ ಬೀಜಗಳನ್ನು ಕೊಡುತ್ತದೆ. ಬಹುತೇಕ ಮಂದಿ ಸಿಹಿ ಬಾದಾಮಿಯನ್ನು ಬಳಸುತ್ತಿದ್ದು, ಇದನ್ನು ಎತೇಚ್ಛವಾಗಿ ಸಿಹಿತಿನಿಸುಗಳ ತಯಾರಿಕೆಗೆ ಉಪಯೋಗಿಸುತ್ತಾರೆ. ಹಾಗೂ ಎಣ್ಣೆಯ ರೂಪದಲ್ಲೂ ಇದನ್ನು ತಯಾರು ಮಾಡಲಾಗುತ್ತದೆ. ಹಸಿರು ಬಾದಾಮಿ ಬೀಜ ಹೆಚ್ಚು ಪೋಷಕಾಂಶಯುಕ್ತ ಆಹಾರ, ಇದು ದೇಹ ಹಾಗೂ ಮನಸ್ಸಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಸಾಮಾನ್ಯ ಕಾಯಿಲೆಗಳಿಗೆ ಹಸಿರು ಬಾದಾಮಿ ರಾಮಬಾಣವಿದ್ದಂತೆ.
ಹಸಿರು ಬಾದಾಮಿಯ ಉಪಯೋಗಗಳು...
- ಹಸಿರು ಬಾದಾಮಿಯನ್ನು ಕಚ್ಚಾ ಬಾದಾಮಿ ಬೀಜ ಅಥವಾ ಸಿಹಿ ರುಚಿಯಾದ ಪದಾರ್ಥಗಳಿಂದಲೂ ಸೇವಿಸಬಹುದು. ಹಸಿರು ಬಾದಾಮಿ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲಿದ್ದು, ವೇಗವಾಗಿ ತಗುಲುವ ಸೋಂಕಿನಿಂದ ದೂರವಿಡಲಿದೆ.
- ಈ ಬಾದಾಮಿಯನ್ನು ಯಾವ ರೀತಿಯಲ್ಲಿ ಬಳಸಿದರೂ ಇದರಲ್ಲಿ ಔಷಧೀಯ ಗುಣಗಳು ನಮ್ಮ ದೇಹಕ್ಕೆ ಉಪಯುಕ್ತವಾಗಿದೆ. ಹಸಿರು ಬಾದಾಮಿಯಲ್ಲಿ ಆಂಟಿಯೋಕ್ಸಿಡೆಂಟ್ ಹೆಚ್ಚಾಗಿರುವುದರಿಂದ ದೇಹದಲ್ಲಿ ಟಾಕ್ಸಿನ್ ನ್ನು ಹೊರ ಹಾಕಲು ಸಹಕಾರಿಯಾಗುತ್ತದೆ. ಅಲ್ಲದೆ, ದೇಹದ ಸ್ನಾಯುಗಳಲ್ಲಿ ಶಕ್ತಿ ಬರುವಂತೆ ಮಾಡಿ ಚಿರುಕುಗೊಳಿಸುತ್ತದೆ.
- ಬೊಜ್ಜು ಹಾಗೂ ಅತಿಯಾದ ತೂಕದಿಂದ ಬಳಲುತ್ತಿರುವವರು ಪ್ರತಿನಿತ್ಯ ಹಸಿರು ಬಾದಾಮಿಯನ್ನು ಸೇವನೆ ಮಾಡುವುದರಿಂದ ತೂಕ ಹಾಗೂ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಬಹುದು. ಇದು ಹೃದಯದ ಸ್ವಾಸ್ಥ್ಯಕ್ಕೂ ಇದು ಉಪಯುಕ್ತವಾಗಿದೆ.
- ಹೊಟ್ಟೆ ಸಂಬಂಧಿತ ಸಮಸ್ಯೆಗಳಿಗೆ ಹಸಿರು ಬಾದಾಮಿ ರಾಮಬಾಣವಾಗಿದ್ದು, ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿರುವುದರಿಂದ ಜೀರ್ಣಕ್ರಿಯೆಗೆ ಸಹಾಯಕಾರಿಯಾಗಿದೆ.
- ಈ ಬಾದಾಮಿಯಲ್ಲಿ ವಿಟಿಮಿನ್ ಗಳು ಎತೇಚ್ಛವಾಗಿರುವುದರಿಂದ ಕೂದಲು ಸಂರಕ್ಷಣೆಗೆ ಹಸಿರು ಬಾದಾಮಿ ಎಣ್ಣೆ ಉತ್ತಮವಾಗಿದೆ. ಇದರ ಎಣ್ಣೆಯನ್ನು ಕೂದಲಿನ ಬುಡಕ್ಕೆ ಹಚ್ಚುವುದರಿಂದ ಬುಡ ಗಟ್ಟಿಯಾಗಿ ಕೂದಲು ಬೆಳೆಯುವುದಕ್ಕೆ ಸಹಾಯಕಾರಿಯಾಗಿದೆ.
- ಸ್ನಾಯು ಸೆಳೆತ, ನೋವಿನಂತಹ ತೊಂದರೆಗಳಿದ್ದರೆ ಹಸಿರು ಬಾದಾಮಿ ತೈಲವನ್ನು ಲೇಪಿಸಿ ಮಸಾಜು ಮಾಡಿದರೆ ಹಿತವಾಗುತ್ತದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos