ಆರೋಗ್ಯ-ಜೀವನಶೈಲಿ

ಫೇಸ್ ಬುಕ್ ನಿಂದ ದೂರ ಇದ್ದಷ್ಟೂ ಸಂತೋಷ, ಉತ್ಸಾಹ ಹೆಚ್ಚು: ಅಧ್ಯಯನ ವರದಿ

Srinivas Rao BV

ಲಂಡನ್: ಫೇಸ್ ಬುಕ್ ಗೀಳು ಬೆಳೆಸಿಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ. ಸಾಮಾಜಿಕ ಜಾಲತಾಣದಲ್ಲೆ ಕಾಲ ಕಳೆಯುವವರ ಬಗ್ಗೆ ಸಂಶೋಧನೆಯೊಂದು ನಡೆದಿದ್ದು, ಫೇಸ್ ಬುಕ್ ಗೀಳು ಬೆಳೆಸಿಕೊಂಡಿದ್ದರೂ ಒಮ್ಮೆ ಫೇಸ್ ಬುಕ್ ಬಳಸುವುದನ್ನು ಬಿಟ್ಟರೆ ಅತ್ಯಂತ ಸಂತೋಷವಾಗುತ್ತದೆ ಎಂದು ಅಧ್ಯಯನ ವರದಿ ತಿಳಿಸಿದೆ.
ಡೆನ್ ಮಾರ್ಕ್ ಮೂಲದ ಚಿಂತಕರ ಚಾವಡಿ ಫೇಸ್ ಬುಕ್ ಗೀಳಿನ ಬಗ್ಗೆ ಅಧ್ಯಯನ ವರದಿ ಪ್ರಕಟಿಸಿದೆ. ಅಧ್ಯಯನಕ್ಕಾಗಿ ಒಟ್ಟು 1095 ಸಮೀಕ್ಷೆಗೊಳಪಡಿಸಲಾಗಿತ್ತು. ಈ ಪೈಕಿ ಶೇ.95 ರಷ್ಟು ಜನರು ಪ್ರತಿ ದಿನ ಫೇಸ್ ಬುಕ್ ಬಳಕೆದಾರರಾಗಿದ್ದರು. ಫೇಸ್ ಬುಕ್ ಬಳಕೆದಾರರನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಿ, ಒಂದು ಗುಂಪಿಗೆ ಫೇಸ್ ಬುಕ್ ಬಳಸದಂತೆ ಹಾಗೂ ಮತ್ತೊಂದು ಗುಂಪಿಗೆ ಎಂದಿನಂತೆ ಫೇಸ್ ಬುಕ್ ಬಳಸುವಂತೆ ಸೂಚನೆ ನೀಡಲಾಗಿತ್ತು.
ಒಂದು ವಾರದ ನಂತರ ಫೇಸ್ ಬುಕ್ ಬಳಸದೇ ಇದ್ದ ಗುಂಪಿನಲ್ಲಿದ್ದ ಶೇ.88 ರಷ್ಟು ಜನರು, ಸಾಮಾಜಿಕ ಜಾಲ ತಾಣ ಬಳಸದೇ ಸಂತೋಶವಾಗಿದ್ದೆವು ಎಂದು ಹೇಳಿದ್ದರೆ, ಫೇಸ್ ಬುಕ್ ಬಳಸಿದ ಶೇ.81 ರಷ್ಟು ಜನರು ಫೇಸ್ ಬುಕ್ ಬಳಸಿಯೂ ಸಂತೋಷವಾಗಿದ್ದರು ಎಂದು ಸಮೀಕ್ಷೆ ಹೇಳಿದೆ.
ಫೇಸ್ ಬುಕ್ ಬಳಸದೇ ಇದ್ದವರು ಒಂದು ವಾರದ ಅವಧಿಯಲ್ಲಿ ತಾವು ಅತ್ಯಂತ ಉತ್ಸಾಹಿಗಳಾಗಿದ್ದಿದ್ದಾಗಿ ಹೇಳಿದ್ದಾರೆ. ಅಲ್ಲದೇ ಫೇಸ್ ಬುಕ್ ಇಲ್ಲದೇ ಕಡಿಮೆ ಏಕಾಂಗಿ ಭಾವನೆ, ಕಡಿಮೆ ಚಿಂತೆ ಮತ್ತು ಹೆಚ್ಚು ನಿರ್ಣಾಯಕರಾಗಿದ್ದೆವು ಎಂದು ಹೇಳಿದ್ದಾರಂತೆ.
ಫೇಸ್ ಬುಕ್ ಹೆಚ್ಚು ಬಳಕೆಯಿಂದ ಕೆಲಸಗಳಲ್ಲಿನ ಉತ್ಪಾದನಾ ಸಾಮರ್ಥ್ಯ ಹೆಚ್ಚಾಯಿತು. ಇದರಿಂದಾಗಿ ಕೆಲಸವೂ ವೇಗಾವಾಗಿ ಮುಕ್ತಾಯಗೊಳ್ಳುತ್ತಿತ್ತು. ಫೇಸ್ ಬುಕ್ ಇಲ್ಲದೇ ಶಾಂತತೆ ರೀತಿಯ ವಾತಾವರಣದಲ್ಲಿದ್ದೆ ಎಂದು ಸಮೀಕ್ಷೆಗೊಳಪಟ್ಟವರ ಪೈಕಿ ಒಬ್ಬರಾದ ಸೋಫಿ ಅನ್ನಿ ಡೊರ್ನೊಯ್ ಅಭಿಪ್ರಾಯಪಟ್ಟಿದ್ದಾರೆ.

SCROLL FOR NEXT