ಆರೋಗ್ಯ-ಜೀವನಶೈಲಿ

ವಿಶ್ವ ಕ್ರಾನಿಕ್ ಒಬ್‏ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ ದಿನ

ನಾರಾಯಣ ಹೃದಯಾಲಯದ ಅಗ್ರ ಹೃದಯ ತಜ್ಞರು ಲಕ್ಷಾಂತರ ಪತ್ತೆ ಮಾಡಿ, ಲಕ್ಷಾಂತರ ಗುಣಪಡಿಸಿ ಎಂಬ ಆಂದೋಲನವನ್ನು ಆರಂಭಿಸಿದ್ದು,...

- ಉಸಿರಾಟದ ತೊಂದರೆ ಸಿಓಪಿಡಿ (ಕ್ರಾನಿಕ್ ಒಬ್‏ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್) ಎಂಬ ಗಂಭೀರ ಶ್ವಾಸಕೋಶಗಳ ರೋಗವಾರಿರಬಹುದು;
- ಇದು ಶ್ವಾಸಕೋಶಗಳ ಆಫಾತಕ್ಕೆ ಕಾರಣವಾಗಬಹುದು.
- ಒಂದು ಸರಳವಾದ ಆರು ಸೆಕೆಂಡ್ ಗಳ ಪರೀಕ್ಷೆ ಯಿಂದ ಪತ್ತೆ ಮಾಡಬಹುದು

ಬುಧವಾರ, ನವೆಂಬರ್ 18: ವಿಶ್ವ ಕ್ರಾನಿಕ್ ಒಬ್‏ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ ದಿನವೆಂದು ಆಚರಿಸಲಾಗುತ್ತಿದೆ; ಈ ವರ್ಷ ಸಿಒಪಿಡಿಯ ಬಗ್ಗೆ ಜಾಗೃತಿ ಮೂಡಿಸಲು ಉತ್ತಮ ಅವಕಾಶವನ್ನು ನೀಡಿದೆ.

ಈ ಸಂದರ್ಭವನ್ನು ಆಚರಿಸುತ್ತಿರುವ ಡಾ. ರಂಗನಾಥ್ & ಡಾ. ಮಂಜುನಾಥ್  ಕನ್ಸಲ್ಟೆಂಟ್, ನಾರಾಯಣ ಹೃದಯಾಲಯದ ಅಗ್ರ ಹೃದಯ ತಜ್ಞರು ಲಕ್ಷಾಂತರ ಪತ್ತೆ ಮಾಡಿ, ಲಕ್ಷಾಂತರ ಗುಣಪಡಿಸಿ ಎಂಬ ಆಂದೋಲನವನ್ನು ಆರಂಭಿಸಿದ್ದು, ಈ ರೋಗದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಲಿದ್ದಾರೆ.

ಸಿಒಪಿಡಿಯು ಸಾಂಕ್ರಾಮಿಕವಲ್ಲದ ಶ್ವಾಸಕೋಶದ ರೋಗವಾಗಿದ್ದು, ಅದು ಮುಂದುವರೆದಂತೆ ಉಸಿರಾಟವು ಕಷ್ಟವಾಗುತ್ತದೆ. ಆದರೆ ಇತ್ತೀಚಿನ ಅಧ್ಯಯನಗಳ ಪ್ರಕಾರ, ವೈದ್ಯಕೀಯವಾಗಿ ಗಂಭೀರವಾದ ಸಿಒಪಿಡಿ ಇರುವ ಜನರಲ್ಲಿ ಸುಮಾರು 25% ರಿಂದ 50% ಜನರಿಗೆ ಇರುವುದು ತಿಳಿದಿಲ್ಲ. ಏಕೆಂದರೆ ಸಿಒಪಿಡಿ ಯ ಆರಂಭದ ಹಂತಗಳನ್ನು ಗುರುತಿಸುವುದು ಸಾಧ್ಯವಿಲ್ಲ. ಸಿಒಪಿಡಿ ಆರಂಭದ ಲಕ್ಷಣಗಳೆಂದರೆ ದೀರ್ಘಕಾಲಿಕ ಕೆಮ್ಮು, ಕಫ ಬರುವುದು, ಮತ್ತು ವ್ಯಾಯಾಮ ಅಥವಾ ಮೆಟ್ಟಿಲು ಅತ್ತುವಂಥ ದೈಹಿಕ ಚಟುವಟಿಕೆ ಮಾಡುವಾಗ ಉಸಿರಾಟ ಕಷ್ಟವಾಗುವುದು, ಎಂದು ಡಾ. ರಂಗನಾಥ್ ಕನ್ಸಲ್ಟೆಂಟ್, ನಾರಾಯಣ ಹೃದಯಾಲಯ ಮಾಧ್ಯಮಕ್ಕೆ ಹೇಳಿದರು. ಈ ಲಕ್ಷಣಗಳನ್ನು ಜನರು ವಯಸ್ಸಾಗುವರ ಸಹಜ ಭಾದ ಎಂದು ಉಪೇಕ್ಷೀಸುತ್ತಾರೆ, ಆದರೆ ಇದು ಚಿಕಿತ್ಸೆ ಮಾಡಬೇಕಾದ ಗಂಭೀರ ರೋಗದ ಲಕ್ಷಣಗಳಿರಬಹುದು, ಎಂದೂ ಹೇಳಿದರು.

ಸಿಒಪಿಡಿಯನ್ನು ಆದಷ್ಟು ಬೇಗನೆ ಪತ್ತೆ ಮಾಡಿದಷ್ಟೂ, ಚಿಕಿತ್ಸೆಯು ಅಷ್ಟು ಪರಿಣಾಮಕಾರಿಯಾಗಿರುತ್ತದೆ ಎನ್ನುತ್ತಾರೆ ಡಾ. ಮಂಜುನಾಥ್  ಕನ್ಸಲ್ಟೆಂಟ್, ನಾರಾಯಣ ಹೃದಯಾಲಯ ಸಾಮಾನ್ಯವಾಗಿ ಸಿಒಪಿಡಿಯು ಮುಂದುವರೆಯುವ ರೋಗವಾಗಿದ್ದು ರೋಗವು ಉಲ್ಬಣವಾದಷ್ಟೂ, ರೋಗಿಯು ದೈನಂದಿನ ಚಟುವಟಿಕೆಗಳಾದ ಮೆಟ್ಟಿಲು ಹತ್ತುವುದು. ನಡಯುವಾಗ, ಬೆಳಿಗ್ಗೆ ಸ್ನಾನ ಮಾಡುವಾಗ, ಬಟ್ಟೆ ಧರಿಸುವಾಗಲೂ ಉಸಿರಾಡಲು ಕಷ್ಟ ಪಡುತ್ತಾರೆ.

ಸಿಒಪಿಡಿಯು ಗುಣವಾಗದಿದ್ದರೂ ಉಸಿರಾಟದ ಸಮಸ್ಯೆಯನ್ನು ಕಡಿಮೆ ಮಾಡುವಂಥ ಚಿಕಿತ್ಸೆಗಳು ಲಭ್ಯವಾಗಿದೆ, ಇದರಿಂದ ರೋಗಿಗಳು ದೈನಂದಿನಜೀವನವನ್ನು ಉತ್ತಮವಾಗಿ ನಡೆಸಬಹುದು ರೋಗದ ಅಪಾಯದ ಅಂಶಗಳಿಗೆ ತಮ್ಮನ್ನು ಒಡ್ಡುವಿಕೆಯನ್ನು ಕಡಿಮೆ ಮಾಡುವುದರಿಂದ ಸಿಒಪಿಡಿಯ ಪ್ರಗತಿಯನ್ನು ನಿಲ್ಲಿಸಬಹುದು ಅಥವಾ ನಿಧಾನಿಸಬಹುದು.

ನಿಮಗೆ ಉಸಿರಾಡಲು ಕಷ್ಟವಾಗುತ್ತಿದ್ದರೆ, ನಿಮಗೆ ವಯಸ್ಸು 35 ವರ್ಷ ಮೀರಿದ್ದರೆ, ನೀವು ವಾಸಿಸುವ, ಕೆಲಸ ಮಾಡುವ ಸ್ಥಳದಲ್ಲಿ ಹೊಗೆ, ಅಪಾಯಕಾರಿ ಅನಿಲಗಳು ಇದ್ದರೆ, ನೀವು ಧೂಮಪಾನ ಮಾಡುತ್ತಿದ್ದರೆ! ಮುಂಚೆ ಮಾಡಿದ್ದರೆ, ಸಿಒಪಿಡಿಯನ್ನು ನಿವಾರಿಸಲು ನಿಮ್ಮ ವೈದ್ಯರಲ್ಲಿ  ಸರಳವಾದ ಪರೀಕ್ಷೆಗಾಗಿ ಕೇಳಿ. ಸಿಒಪಿಡಿಗೆ ಖಾತ್ರಿ ಪರೀಕ್ಷೆಯ ಅಗತ್ಯವಿದೆಯೇ ಎಂದು ನಿಮ್ಮ ವೈದ್ಯರು ನಿರ್ಧರಿಸುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಏನೇ ಆದ್ರೂ, ದಿನದ ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥರು ಹಿಂಗ್ಯಾಕಂದ್ರು?

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

SCROLL FOR NEXT