ಆರೋಗ್ಯ-ಜೀವನಶೈಲಿ

ಸಾಮರಸ್ಯ ಬಾಂಧವ್ಯಕ್ಕೆ ಸಂಗಾತಿಗಳ ನಡುವೆ ವಾರಕ್ಕೊಮ್ಮೆ ಸಂಭೋಗ ಸಾಕು

Guruprasad Narayana

ವಾಶಿಂಗ್ಟನ್: ಹೆಚ್ಚೆಚ್ಚು ಸಂಭೋಗ ಕ್ರಿಯೆ ಸಂಗಾತಿಗಳ ನಡುವಿನ ಸಂತೋಷಕರ ಬಾಂಧ್ಯಕ್ಕೆ ಅಗತ್ಯ ಎಂದೇ ನಂಬಲಾಗಿತ್ತು ಆದರೆ ಈಗ ನೂತನ ಅಧ್ಯಯನವೊಂದರ ಪ್ರಕಾರ ವಾರಕ್ಕೊಮ್ಮೆ ಸಂಭೋಗ ನಡೆಸುವವರೇ ಅತಿ ಹೆಚ್ಚು ಸಂತೋಷವಾಗಿರುತ್ತಾರೆ ಎನ್ನುತ್ತದೆ.

ಟೊರಂಟೊ-ಮಿಸ್ಸಿಸುಗ ವಿಶ್ವವಿದ್ಯಾಲಯದ ಹಿರಿಯ ಸಂಶೋಧಕ ಏಮಿ ಮ್ಯೂಸ್ ಅವರ ಪ್ರಕಾರ ಒಳ್ಳೆಯ ಬಾಂಧವ್ಯಕ್ಕಾಗಿ ಆರೋಗ್ಯಕರ ಸಂಭೋಗ ಅಗತ್ಯ ಆದರೆ ಅದಕ್ಕಾಗಿ ದಿನವೂ ಸಂಭೋಗ ನಡೆಸುವ ಅವಶ್ಯಕತೆ ಇಲ್ಲ ಎಂದಿದ್ದರೆ.

ನಾಲ್ಕು ದಶಕಗಳ ಕಾಲ ೩೦೦೦೦ ಕ್ಕೂ ಹೆಚ್ಚು ಅಮೇರಿಕನ್ ನಾಗರಿಕರ ಮೇಲೆ ನಡೆಸಿರುವ ಈ ಸಮೀಕ್ಷೆಯ ಫಲಿತಾಂಶ ವೈಜ್ಞಾನಿಕ ಜರ್ನಲ್ ಒಂದರಲ್ಲಿ ಪ್ರಕಟವಾಗಿದೆ.

ಈ ಸಮೀಕ್ಷೆಯ ಫಲಿತಾಂಶ ಸಂಗಾತಿಗಳು ವಾರಕ್ಕೆ ಎಷ್ಟು ಬಾರಿ ಸಂಭೋಗ ನಡೆಸುವುದು ಎಂದು ಸೂಚಿಸುವುದಲ್ಲ ಬದಲಾಗಿ ಸಂಗಾತಿಗಳು ತಮ್ಮ ಲೈಂಗಿಕ ಅಗತ್ಯಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ ನಿರ್ಧರಿಸಬೇಕು ಎಂಬುದು ಎಂದು ಅಧ್ಯಯನ ತಿಳಿಸಿದೆ.

SCROLL FOR NEXT