ಆರೋಗ್ಯ-ಜೀವನಶೈಲಿ

ಮಹಿಳೆಯರೇ ಎಚ್ಚರ: ರಾತ್ರಿ ಪಾಳಿ ಕೆಲಸ ಮಾಡುವುದರಿಂದ ಹೃದಯಾಘಾತದ ಸಂಭವ ಹೆಚ್ಚು

Shilpa D

ವಾಷಿಂಗ್ಟನ್: ನಿರಂತರವಾಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಸಾವು ಕಟ್ಟಿಟ್ಟ ಬುತ್ತಿ.

ಹೌದು, 10 ವರ್ಷಕ್ಕೂ ಅಧಿಕ ಸಮಯ  ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರೇ ಅಪಾಯ ತಪ್ಪಿದ್ದಲ್ಲ ಎಂದು ಅಧ್ಯಯನವೊಂದು ತಿಳಿಸಿದೆ.

ಧೂಮಪಾನ, ಡಯಟ್ ಇಲ್ಲದಿರುವುದು, ದೇಹಕ್ಕೆ ವ್ಯಾಯಾಮ, ಚಟುವಟಿಕೆ  ಇಲ್ಲದೇ ಇರುವುದರಿಂದ ಹಲವು ಬಾರಿ ಹೃದಯಾಘಾತ ವಾಗುವ ಸಂಭವವಿರುತ್ತದೆ. ರಾತ್ರಿಪಾಳಿ ಕೆಲಸ ಮಾಡುವುದರಿಂದ ಶೇ 15 ರಿಂದ 18 ರಷ್ಟು ಪ್ರಮಾಣದಲ್ಲಿ ಹೃದಯಾಘಾತ ಸಂಭವಿಸುವ ಸಾಧ್ಯತೆಯಿದೆ ಎಂದು ಸಂಶೋಧನೆ ತಿಳಿಸಿದೆ.

ವಿವಿಧ ಪಾಳಿಗಳಲ್ಲಿ ಕೆಲಸ ಮಾಡುವ ಮಹಿಳೆಯರ ಮೇಲೆ  ಅಮೆರಿಕಾದ ಬ್ರಿಗಾಮ್ ಮಹಿಳೆ ಆಸ್ಪತ್ರೆಯ ಅಧ್ಯಯನ ತಂಡ ಸಂಶೋಧನೆ ನಡೆಸಿತು. ಅದರಲ್ಲಿ ವಿಶೇಷವಾಗಿ ರಾತ್ರಿ ಪಾಳಿಯಲ್ಲಿ ನೌಕರಿ ಮಾಡುವ ಮಹಿಳೆಯರಿಗೆ ಹೆಚ್ಚಿನ ಅಪಾಯ ಎಂದು ತಿಳಿದು ಬಂದಿದೆ.

189, 000 ಮಹಿಳಾ ಶುಶ್ರೂಷಕಿಯರು ನಿರಂತರವಾಗಿ ತಿಂಗಳಿನಲ್ಲಿ 3 ಬಾರಿ ರಾತ್ರಿ ಪಾಳಿ ಜೊತೆಗೆ ಹಗಲು ಹೊತ್ತಿನ ಶಿಫ್ಟ್ ಗಳಲ್ಲಿ ಕೆಲಸ ಮಾಡುತ್ತಿದ್ದರು. ದೀರ್ಘಕಾಲದಲ್ಲಿ ರಾತ್ರಿ ಪಾಳಿ ಕೆಲಸ ಮಾಡುವುದರಿಂದ ಅವರಿಗೆ ಆರೋಗ್ಯದಲ್ಲಿ  ಏರುಪೇರು ಕಾಣಿಸಿಕೊಂಡು ಎದೆನೋವು, ಹೃದಯ ಸಂಬಂಧಿತ ಹಲವು ಕಾಯಿಲೆಗಳಿಂದ ಬಳಲುತ್ತಿರುವುದು ಸಾಬೀತಾಗಿದೆ.

SCROLL FOR NEXT