ಯುವತಿಯರಿಗೆ ಆ ದಿನಗಳೆಂದರೆ ಬಹಳ ಮುಖ್ಯವಾದದ್ದು. ಋತುಚಕ್ರದ ಸಂದರ್ಭದಲ್ಲಿ ಹೆಣ್ಣುಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಬಹಳ ಯಾತನೆ, ಕಿರಿಕಿರಿ ಅನುಭವಿಸುತ್ತಿರುತ್ತಾರೆ. ಋತುಚಕ್ರ ಸುಲಲಿತವಾಗಿ ಕಳೆಯುವವರು ಬೆರಳೆಣಿಕೆಯಷ್ಟು ಯುವತಿಯರು ಮಾತ್ರ.
ಆ ಸಂದರ್ಭದಲ್ಲಿ ಹೆಣ್ಣು ಮಕ್ಕಳು ತೆಗೆದುಕೊಳ್ಳುವ ಆಹಾರ, ಜೀವನ ಕ್ರಮ, ಪರಿಸರ, ಕೆಲಸ ವಿಧಾನ ಪ್ರಭಾವ ಬೀರುತ್ತವೆ. ಈ ದಿನಗಳಲ್ಲಿ ಏನೇನು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದಕ್ಕೆ ಇಲ್ಲಿವೆ ಕೆಲವೊಂದು ಮಾಹಿತಿಗಳು:
- ಋತುಚಕ್ರದ ಸಂದರ್ಭದಲ್ಲಿ ಐಸ್ ನೀರನ್ನು ಕುಡಿಯಬಾರದು. ಐಸ್ ನೀರನ್ನು ಕುಡಿಯುತ್ತಾ ಹೋದರೆ ಅದು ನಿಧಾನವಾಗಿ ರಕ್ತ ಗರ್ಭಾಶಯದ ಗೋಡೆಯಲ್ಲಿ ಉಳಿದುಕೊಂಡು ನಿಧಾನವಾಗಿ ಕ್ಯಾನ್ಸರ್ ಗೆ ತಿರುಗುವ ಸಾಧ್ಯತೆಯಿದೆ.
- ಹೊಟ್ಟೆ ನೋವಾಗುತ್ತಿದೆ ಎಂದು ಮುಟ್ಟಿನ ಸಂದರ್ಭದಲ್ಲಿ ಸೋಡಾ ನೀರು ಕುಡಿಯಲು ಹೋಗಬೇಡಿ.
- ಸೌತೆಕಾಯಿ ಸೇವನೆಯಿಂದಲೂ ದೂರವಿರಿ.ಸೌತೆಕಾಯಿಯಲ್ಲಿರುವ ನೀರಿನ ಅಂಶ ಗರ್ಭಾಶಯದ ಗೋಡೆ ಮೇಲೆ ಕುಳಿತುಕೊಳ್ಳುವ ಸಾಧ್ಯತೆಯಿದೆ.
- ಹೊಟ್ಟೆ ನೋವಾಗುತ್ತಿದೆ ಎಂದು ಋತುಚಕ್ರದ ಸಂದರ್ಭದಲ್ಲಿ ಊಟ-ತಿಂಡಿಯನ್ನು ಬಿಡಬೇಡಿ. ದೇಹದಿಂದ ರಕ್ತ ಹೋಗುತ್ತಿರುತ್ತದೆ. ಆಯಾಸವಾಗುತ್ತಿರುತ್ತದೆ. ದೇಹಕ್ಕೆ ಶಕ್ತಿ ತುಂಬಲು ಉತ್ತಮ ಸತ್ವಯುತ ಆಹಾರ ಅಗತ್ಯ.
- ಫಾಸ್ಟ್ ಫುಡ್, ಜಂಕ್ ಫುಡ್ ಗಳಿಂದ ದೂರವಿರಿ. ಈ ಸಮಯದಲ್ಲಿ ಆದಷ್ಟು ಜೀರ್ಣವಾಗುವ ಲಘು ಆಹಾರ ಸೇವಿಸುವುದು ಉತ್ತಮ.
- ಶ್ರಮದ ಶಾರೀರಿಕ ಕೆಲಸದಿಂದ ದೂರವಿರುವುದು ಒಳಿತು. ಋತುಚಕ್ರದ ಸಮಯದಲ್ಲಿ ಮಹಿಳೆಯರಿಗೆ ವಿಶ್ರಾಂತಿ ಬೇಕು ಅಂತ ಹಿರಿಯರು ಹೇಳುವುದು ಅದಕ್ಕೆ.
- ಹಿಂದಿನ ಕಾಲದಲ್ಲಿ ಮುಟ್ಟಾದ ಮಹಿಳೆಯರು ನಾಲ್ಕು ದಿನಗಳವರೆಗೆ ಮನೆಯ ಒಳಗೆ ಬರುತ್ತಿರಲಿಲ್ಲ. ಈಗಲೂ ಹಳ್ಳಿಗಳಲ್ಲಿ ಕೆಲವು ಮನೆಗಳಲ್ಲಿ ಮುಟ್ಟಾದಾಗ ಹೆಂಗಸರು ದೂರ ಕುಳಿತುಕೊಳ್ಳುವ ಸಂಪ್ರದಾಯವಿದೆ. ವೈಜ್ಞಾನಿಕವಾಗಿ ಮಹಿಳೆಯರಿಗೆ ತಿಂಗಳಿಗೆ ಒಂದು ಸಲ ವಿಶ್ರಾಂತಿ ನೀಡುವುದೆಂಬುದಾಗಿದೆ. ಆದರೆ ಇದು ಗೊಡ್ಡು ಸಂಪ್ರದಾಯ ಎಂದು ಆರೋಪಿಸುವವರೆೇ ಹೆಚ್ಚು ಮಂದಿ.